ಎನ್ ಆರ್ ಸಿಗೂ ಎನ್ ಪಿಆರ್ ಗೂ ಸಂಬಂಧವಿಲ್ಲ, ದೇಶವ್ಯಾಪಿ ಎನ್ ಆರ್ ಸಿ ಬಗ್ಗೆ ಚರ್ಚೆ ನಡೆದಿಲ್ಲ: ಅಮಿತ್ ಶಾ

ಎನ್ ಆರ್ ಸಿಗೂ ಎನ್ ಪಿಆರ್ ಗೂ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 
ಎನ್ ಆರ್ ಸಿಗೂ ಎನ್ ಪಿಆರ್ ಗೂ ಸಂಬಂಧವಿಲ್ಲ, ದೇಶವ್ಯಾಪಿ ಎನ್ ಆರ್ ಸಿ ಬಗ್ಗೆ ಚರ್ಚೆ ನಡೆದಿಲ್ಲ: ಅಮಿತ್ ಶಾ
ಎನ್ ಆರ್ ಸಿಗೂ ಎನ್ ಪಿಆರ್ ಗೂ ಸಂಬಂಧವಿಲ್ಲ, ದೇಶವ್ಯಾಪಿ ಎನ್ ಆರ್ ಸಿ ಬಗ್ಗೆ ಚರ್ಚೆ ನಡೆದಿಲ್ಲ: ಅಮಿತ್ ಶಾ

ನವದೆಹಲಿ: ಎನ್ ಆರ್ ಸಿಗೂ ಎನ್ ಪಿಆರ್ ಗೂ ಸಂಬಂಧವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ಎಎನ್ಐ ಗೆ ಡಿ.24 ರಂದು ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅಮಿತ್ ಶಾ, ರಾಷ್ಟ್ರೀಯ ಪೌರರ ನೋಂದಣಿ (ಎನ್ ಆರ್ ಸಿ) ಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೂ (ಎನ್ ಪಿಆರ್) ಗೂ ಸಂಬಂಧವಿಲ್ಲ, ಇದನ್ನು ಸ್ಪಷ್ಟವಾಗಿ ಹೇಳುತ್ತೇನೆ ಎಂದಿದ್ದಾರೆ. 

ಡಿ.24 ರಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎನ್ ಪಿಆರ್ ನ್ನು ಪರಿಷ್ಕರಣೆ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಯಿತು. ಇದಕ್ಕಾಗಿ 3,941.35 ಕೋಟಿ ರೂಪಾಯಿ ಮೀಸಲಿಡಲಾಗಿದೆ. 

ಇದೇ ವೇಳೆ ಸಂದರ್ಶನದಲ್ಲಿ ಎನ್ ಆರ್ ಸಿ ಬಗ್ಗೆಯೂ ಮಾತನಾಡಿರುವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಸರಿ, ಎನ್ ಆರ್ ಸಿ ಜಾರಿ ಕುರಿತಾಗಿ ಸಚಿವ ಸಂಪುಟ ಸಭೆಯಲ್ಲಾಗಲೀ ಅಥವಾ ಸಂಸತ್ ನಲ್ಲಾಗಲೀ ಯಾವುದೇ ಚರ್ಚೆ ನಡೆದಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com