ರಾಷ್ಟ್ರೀಯ ಜನಸಂಖ್ಯೆ ನೋಂದಣಿಗೆ ಯಾವುದೇ ದಾಖಲೆ ಇಲ್ಲವೇ ಬಯೋಮೆಟ್ರಿಕ್ ಅಗತ್ಯವಿಲ್ಲ: ಪ್ರಕಾಶ್ ಜಾವಡೇಕರ್

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿವಾದ ಮತ್ತು ಪ್ರತಿಭಟನೆಗಳು ಮುಂದುವರೆದ ನಡುವೆಯೇ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪ್ರಕ್ರಿಯೆಗೆ ಯಾವುದೇ ದಾಖಲೆ ಇಲ್ಲವೇ ಬಯೋಮೆಟ್ರಿಕ್ ಅಗತ್ಯವಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. 
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿವಾದ ಮತ್ತು ಪ್ರತಿಭಟನೆಗಳು ಮುಂದುವರೆದ ನಡುವೆಯೇ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಪ್ರಕ್ರಿಯೆಗೆ ಯಾವುದೇ ದಾಖಲೆ ಇಲ್ಲವೇ ಬಯೋಮೆಟ್ರಿಕ್ ಅಗತ್ಯವಿಲ್ಲ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. 

2020ರ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯೆ ನೋಂದಣಿ ನವೀಕರಣಕ್ಕೆ ಪ್ರಧಾನಿ ನರೇಂದ್ರಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. 

ಸಚಿವ ಸಂಪುಟ ಸಭೆ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜಾವಡೇಕರ್ ಅವರು ರಾಷ್ಟ್ರೀಯ ಜನಸಂಖ್ಯೆ ನೋಂದಣಿ 2010ರಲ್ಲಿ ಆರಂಭವಾಗಿತ್ತು. ಇದು 2015ರಲ್ಲಿ ನವೀಕರಣಗೊಂಡಿತ್ತು. ಇದಕ್ಕಾಗಿ ಯಾವುದೇ ದಾಖಲೆ ಇಲ್ಲವೇ ಬಯೋಮೆಟ್ರಿಕ್ ಅಗತ್ಯವಿಲ್ಲ. ಪ್ರಕ್ರಿಯೆಗೆ ಜನರು ಏನು ವಿವರ ನೀಡುತ್ತಾರೋ ಅದನ್ನು ತೆಗೆದುಕೊಳ್ಳಲಾಗುವುದು ಎಂದರು.

 ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‍ಪಿ ಆರ್)ಗೂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ ಆರ್ ಸಿ) ಸಂಬಂಧವಿಲ್ಲ. ರಾಷ್ಟ್ರೀಯ ಜನಸಂಖ್ಯೆ ನೋಂದಣಿ ನವೀಕರಣ ಪ್ರಕ್ರಿಯೆ ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ನಡೆಯಲಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com