ಚಿನ್ನದ ಪದಕ ವಿಜೇತೆ ರಬೀಹಾ ಪರ ನಿಂತ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ 

ಪುದುಚೆರಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮಾ ನಿರ್ಧಾರವನ್ನು ಬೆಂಬಲಿಸಿ ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.

Published: 24th December 2019 12:20 PM  |   Last Updated: 24th December 2019 12:20 PM   |  A+A-


Rabeeha Abdurehim

ರಬೀಹಾ ಅಬ್ದುರೆಹಿಮಾ

Posted By : Sumana Upadhyaya
Source : PTI

ನವದೆಹಲಿ: ಪುದುಚೆರಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮಾ ನಿರ್ಧಾರವನ್ನು ಬೆಂಬಲಿಸಿ ಕಾಂಗ್ರೆಸ್ ಹಿರಿಯ ಮುಖಂಡ ಪಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.


ಘಟಿಕೋತ್ಸವದಿಂದ ವಿದ್ಯಾರ್ಥಿನಿ ರಬೀಹಾರನ್ನು ಹೊರಗಿಡುವ ಮೂಲಕ ಅವರ ಹಕ್ಕುಗಳನ್ನು ಕಸಿಯಲಾಗಿದೆ. ಅವರನ್ನು ಹೊರಗಿಡುವ ನಿರ್ಧಾರ ಮಾಡಿದ ಅಧಿಕಾರಿ ಯಾರು? ವಿದ್ಯಾರ್ಥಿನಿಯ ನಾಗರಿಕ ಹಕ್ಕುಗಳನ್ನು ಕಸಿದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.


ನಿನ್ನೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಗವಹಿಸಿದ್ದ ಪುದುಚೆರಿ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಗೆದ್ದ ರಬೀಹಾ ಅಬ್ದುರೆಹಿಮಾರನ್ನು ಹೊರಗೆ ಕಳುಹಿಸಲಾಗಿತ್ತು. ಕೇರಳ ಮೂಲದ ರಬೀಹಾ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 


ಸಮಾರಂಭದಿಂದ ಹೊರಗೆ ಕಳುಹಿಸಲು ನಿಖರವಾದ ಕಾರಣವೇನೆಂದು ತಮಗೆ ಗೊತ್ತಾಗಲಿಲ್ಲ ಎಂದು ರಬೀಹಾ ಹೇಳಿದ್ದರು. 

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp