ಸಿಎಎ ಪ್ರತಿಭಟನೆ ವೇಳೆ ಆಸ್ತಿ ಧ್ವಂಸ: 15 ಲಕ್ಷ ಕಟ್ಟುವಂತೆ 28 ಮಂದಿಗೆ, ಯೋಗಿ ಸರ್ಕಾರ ನೋಟೀಸ್!

ಉತ್ತರ ಪ್ರದೇಶ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆಯ ವೇಳೆ ಸರ್ಕಾರಿ ಆಸ್ತಿಗಳಿಗೆ ಉಂಟುಮಾಡಿದ ನಷ್ಟವನ್ನು ವಸೂಲಿ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಯೋಗಿ ಅದಿತ್ಯ ನಾಥ್ ನೇತೃತ್ವದ ರಾಜ್ಯ ಸರ್ಕಾರ. ಪ್ರತಿಭಟನೆ ನಡೆಸಿದವರಿಗೆ ಈಗ ನೋಟೀಸ್ ಜಾರಿ ಮಾಡಿದೆ.
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ

ಲಖನೌ: ಉತ್ತರ ಪ್ರದೇಶ ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆಯ ವೇಳೆ ಸರ್ಕಾರಿ ಆಸ್ತಿಗಳಿಗೆ ಉಂಟುಮಾಡಿದ ನಷ್ಟವನ್ನು ವಸೂಲಿ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಯೋಗಿ ಅದಿತ್ಯ ನಾಥ್ ನೇತೃತ್ವದ ರಾಜ್ಯ ಸರ್ಕಾರ. ಪ್ರತಿಭಟನೆ ನಡೆಸಿದವರಿಗೆ ಈಗ ನೋಟೀಸ್ ಜಾರಿ ಮಾಡಿದೆ.    

ಡಿಸೆಂಬರ್ 21 ರಂದು ನಡೆಸಿದ  ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಸರ್ಕಾರಿ ಆಸ್ತಿಪಾಸ್ತಿಗೆ ಉಂಟಾಗಿರುವ ನಷ್ಟಕ್ಕಾಗಿ 15.28 ಲಕ್ಷ ರೂಪಾಯಿ ವಸೂಲಿ ಮಾಡಲು 28 ಜನರಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಅಷ್ಟೆ ಅಲ್ಲ  ಹಿಂಸಾಚಾರದಲ್ಲಿ ನಷ್ಟಗೊಂಡ ಪೊಲೀಸರ ಹೆಲ್ಮೆಟ್ ಗಳು, ಲಾಠಿಗಳು, ಪೆಲೆಟ್ಸ್ ಗಳಿಗೂ ಆದ ನಷ್ಟವನ್ನೂ ಭರಿಸಬೇಕು ಉತ್ತರ ಪ್ರದೇಶ ಸರ್ಕಾರ ನೋಟೀಸ್ ನಲ್ಲಿ ಆದೇಶಿಸಿದೆ.

ಏತನ್ಮಧ್ಯೆ, ಶನಿವಾರ ಉತ್ತರ ಪ್ರದೇಶದ ರಾಂಪುರದಲ್ಲಿ ಸಿಎಎ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ್ದು, ಹಿಂಸಾಚಾರಕ್ಕೆ ಕಾರಣರಾದ ಆರೋಪಗಳ ಮೇಲೆ ಪೊಲೀಸರು ಈಗಾಗಲೇ 31 ಮಂದಿಯನ್ನು ಬಂಧಿಸಿದ್ದಾರೆ. ಪ್ರತಿಭಟನೆಯ ವೇಳೆ ಸರ್ಕಾರಿ ಆಸ್ತಿ- ಪಾಸ್ತಿ ನಾಶ ಪಡಿಸಿದವರನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಗುರುತಿಸಿ ಅವರ ಆಸ್ತಿಗಳನ್ನು    ಸ್ವಾಧೀನ ಪಡಿಸಿಕೊಂಡು ಹರಾಜು ಹಾಕಿ ನಷ್ಟ ಭರಿಸಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಪ್ರಕಟಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಕಾರ್ಯಾಲಯ ಈ ಮಾಹಿತಿ ನೀಡಿದೆ ಎಂದು ವರದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com