ಮಹಾದಾಯಿ ಯೋಜನೆ ಕುರಿತು ಗೋವಾದಲ್ಲಿ ಹೊಸ ವಿವಾದ ಸೃಷ್ಟಿ

ಕಳಸಾ–ಬಂಡೂರಿ ಯೋಜನೆ ಕುರಿತು  ಕೇಂದ್ರ ಸರ್ಕಾರ ಮಹಾದಾಯ ಅಂತಾರಾಷ್ಟ್ರೀಯ ಜಲವ್ಯಾಜ್ಯ ನ್ಯಾಯಾಧಿಕರಣದ ಅಧಿಸೂಚನೆ ಹೊರಡಿಸುತ್ತಿದ್ದಂತೆ ಕಾಮಗಾರಿ ಆರಂಭಿಸಬಹುದು ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯ ತಿಳಿಸಿದೆ
ಮಹಾದಾಯಿ ಯೋಜನೆ ಕುರಿತು ಗೋವಾದಲ್ಲಿ ಹೊಸ ವಿವಾದ ಸೃಷ್ಟಿ
ಮಹಾದಾಯಿ ಯೋಜನೆ ಕುರಿತು ಗೋವಾದಲ್ಲಿ ಹೊಸ ವಿವಾದ ಸೃಷ್ಟಿ

ಪಣಜಿ: ಕಳಸಾ–ಬಂಡೂರಿ ಯೋಜನೆ ಕುರಿತು ಕೇಂದ್ರ ಸರ್ಕಾರ ಮಹಾದಾಯ ಅಂತಾರಾಷ್ಟ್ರೀಯ ಜಲವ್ಯಾಜ್ಯ ನ್ಯಾಯಾಧಿಕರಣದ ಅಧಿಸೂಚನೆ ಹೊರಡಿಸುತ್ತಿದ್ದಂತೆ ಕಾಮಗಾರಿ ಆರಂಭಿಸಬಹುದು ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯ ತಿಳಿಸಿದೆ ಎಂಬ ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಗೋವಾ ರಾಜಕೀಯ ವಲಯದಲ್ಲಿ ಹೊಸ ವಿವಾದ ಸೃಷ್ಟಿಸಿದೆ. 

ಈ ಕುರಿತು ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಕೇಂದ್ರ  ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್ “ಕೇಂದ್ರ ಸರ್ಕಾರ 2006ರ  ಅಧಿಸೂಚನೆಯನ್ನು ತಡೆಹಿಡಿದಿಲ್ಲ ಮತ್ತು ಯಾವುದೇ ಕುಡಿಯುವ ನೀರಿನ ಯೋಜನೆಗಳಿಗೆ ಅರಣ್ಯ ಇಲಾಖೆಯ ಅನುಮತಿಯ ಅಗತ್ಯವಿಲ್ಲ ಎಂಬ ನಿಯಮವನ್ನು ಕೂಡ ತಡೆಹಿಡಿದಿಲ್ಲ. ಕರ್ನಾಟಕ ನ್ಯಾಯಾಧಿಕರಣದ ಗೆಜೆಟೆಡ್ ಅಧಿಸೂಚನೆ ಮತ್ತು ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅನುಮತಿ ಪಡೆದ ನಂತರ ಕಳಸಾ ಬಂಡೂರಿ ನಾಲೆ ಯೋಜನೆಯನ್ನು ಮುಂದುವರಿಸಬಹುದು” ಎಂದು ಸ್ಪಷ್ಟಪಡಿಸಿದ್ದರು. 

ಇದರಿಂದ ಗೋವಾ ವಿಪಕ್ಷವಾದ ಕಾಂಗ್ರೆಸ್, ಉಭಯ ರಾಜ್ಯಗಳ ಬಿಜೆಪಿ ಸರ್ಕಾರಗಳ ವಿರುದ್ಧ ಕಿಡಿಕಾರಿದೆ. ಜಿಪಿಸಿಸಿ ಅಧ್ಯಕ್ಷ ವಿಜಯ್ ಸರ್ದೇಸಾಯಿ, ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗೋವಾ ಜನರಿಗೆ ವಂಚಿಸುತ್ತಿದೆ ಹಾಗೂ ಬೆನ್ನಿಗೆ ಚೂರಿ ಹಾಕುತ್ತಿದೆ ಎಂದು ಆರೋಪಿಸಿದರು. ಇದು ಅತ್ಯಂತ ದುರಂತ ಪರಿಸ್ಥಿತಿ. ಮಹಾದಾಯಿಗೆ ಸಂಬಂಧಿಸಿದಂತೆ ಗೋವಾದ ಜನರೆಲ್ಲರೂ ಒಂದೇ ಧ್ವನಿಯಲ್ಲಿದ್ದಾರೆ. ಈ ಪತ್ರವನ್ನು ಗಮನಿಸಿದರೆ ಈ ಹಿಂದೆ ನಮಗೆ ತಿಳಿಸಿರುವುದು ಸತ್ಯವೇ ಅಲ್ಲ ಎಂದು ಸ್ಪಷ್ಟವಾಗಿದೆ. ನಿಜವಾಗಿಯೂ ಏನಾಗುತ್ತಿದೆ? ನಮಗೆ ಅದನ್ನು ತಿಳಿಯುವ ಹಕ್ಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com