ಆಕಾಶದಲ್ಲಿ ಹಾರಬೇಕಾದ ವಿಮಾನ ಅಂಡರ್‌ಪಾಸ್‌ನಲ್ಲಿ ಸಿಕ್ಕಿದಾಗ!

ವಿಮಾನ ಆಕಾಶದಲ್ಲಿ ಹಾರಾಡುವುದನ್ನು ನೋಡಿದ್ದೀರಿ, ವಿಮಾನ ನಿಲ್ದಾಣ್ಭದ ರನ್ ವೇ ನಲ್ಲಿ ಇಳಿಯುವುದನ್ನೂ ಕಂಡಿದ್ದೀರಿ, ಆದರೆ ರಸ್ತೆ ನಡುವಿನ ಅಂಡರ್ ಪಾಸ್ ನಲ್ಲಿ ವಿಮಾನವನ್ನು ಕಂಡಿದ್ದೀರಾ? ಇಂತಹಾ ವಿಚಿತ್ರ ದೃಶ್ಯ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಕಂಡುಬಂದಿದೆ
ಆಕಾಶದಲ್ಲಿ ಹಾರಬೇಕಾದ ವಿಮಾನ ಅಂಡರ್‌ಪಾಸ್‌ನಲ್ಲಿ ಸಿಕ್ಕಿದಾಗ!
ಆಕಾಶದಲ್ಲಿ ಹಾರಬೇಕಾದ ವಿಮಾನ ಅಂಡರ್‌ಪಾಸ್‌ನಲ್ಲಿ ಸಿಕ್ಕಿದಾಗ!

ದುರ್ಗಾಪುರ್(ಪಶ್ಚಿಮ ಬಂಗಾಳ): ವಿಮಾನ ಆಕಾಶದಲ್ಲಿ ಹಾರಾಡುವುದನ್ನು ನೋಡಿದ್ದೀರಿ, ವಿಮಾನ ನಿಲ್ದಾಣ್ಭದ ರನ್ ವೇ ನಲ್ಲಿ ಇಳಿಯುವುದನ್ನೂ ಕಂಡಿದ್ದೀರಿ, ಆದರೆ ರಸ್ತೆ ನಡುವಿನ ಅಂಡರ್ ಪಾಸ್ ನಲ್ಲಿ ವಿಮಾನವನ್ನು ಕಂಡಿದ್ದೀರಾ? ಇಂತಹಾ ವಿಚಿತ್ರ ದೃಶ್ಯ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ಕಂಡುಬಂದಿದೆ.

ಆಕಾಶದಲ್ಲಿ ಹಾರಡಬೇಕಿದ್ದ ವಿಮಾನ ಹೈವೇ ಅಂಡರ್ ಪಾಸ್ ನಡುವೆ ಸಿಕ್ಕಿಹಾಕಿಕೊಂಡಿರುವ ದೃಶ್ಯ ಕಂಡು ಜನ ಸ್ಥಭೀಭೂತರಾಗಿದ್ದಾರೆ. 

ಅಷ್ಟಕ್ಕೂ ನಡೆದದ್ದೇನೆಂದರೆ ಇಂಡಿಯಾ ಪೋಸ್ಟ್ ಗೆ ಸೇರಿದ್ದ ಹಾಳಾದ ವಿಮಾನವನ್ನು ಹೊತ್ತ ಟ್ರಕ್ ಮಂಗಳವಾರ ಪಶ್ಚಿಮ ಬಂಗಾಳದ ದುರ್ಗಾಪುರದ ಅಂಡರ್ ಪಾಸ್ ಕ್ರಾಸ್ ಮಾಡುತ್ತಿದ್ದ ವೇಳೆ ವಿಮಾನ ಅಂಡರ್ ಪಾಸ್ ನೊಳಗೆ ಸಿಕ್ಕಿಕೊಂಡಿದೆ. ನಗರದ ರಾಷ್ಟ್ರೀಯ ಹೆದ್ದಾರಿ -2 ರಲ್ಲಿ ಈ ಘಟನೆ ನಡೆದಿದೆ ಪಶ್ಚಿಮ ಬರ್ಧಮಾನ್ ಜಿಲ್ಲೆಯ ದುರ್ಗಾಪುರದಲ್ಲಿ ವಿಮಾನವು ರಸ್ತೆಯ ಮಧ್ಯದಲ್ಲಿ ಸಿಲುಕಿಕೊಂಡಿತ್ತು.

"ನಿನ್ನೆ ರಾತ್ರಿಯಿಂದ ಇಲ್ಲಿ ಟ್ರಕ್ ಸಿಕ್ಕಿಹಾಕಿಕೊಂಡಿದೆ ಇಂಡಿಯಾ ಪೋಸ್ಟ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ.  ಪೊಲೀಸ್ ಠಾಣೆಯಲ್ಲಿ ಮಾತುಕತೆ ನಡೆಯುತ್ತಿದೆ" ಎಂದು ಸ್ಥಳೀಯ ಜನ ಮಾಹಿತಿ ನೀಡಿದ್ದಾರೆ.

ಇನ್ನು ರಸ್ತೆ ನಡುವೆ ವಿಮಾನ ಕಂಡ ಜನ ನೂರಾರು ಸಂಖ್ಯೆಯಲ್ಲಿ ವಿಮಾನ ನೋಡಲು ಮುಗಿಬಿದ್ದು ವಾಹನ ಸಂಚಾರ  ಅಡ್ಡಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com