ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾದ ಪ್ರಧಾನಿ ಮೋದಿ, ಟ್ವೀಟ್ ಮೂಲಕ ಸಂತಸ

ಜಗತ್ತಿನ ಹಲವೆಡೆ ಸಂಭವಿಸಿದ ಕಂಕಣ ಸೂರ್ಯಗ್ರಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕಣ್ತುಂಬಿಕೊಂಡಿದ್ದು, ಗ್ರಹಣದ ಬಳಿಕ ಟ್ವೀಟ್ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸೂರ್ಯ ಗ್ರಹಣ ವೀಕ್ಷಿಸಿದ ಪ್ರಧಾನಿ ಮೋದಿ
ಸೂರ್ಯ ಗ್ರಹಣ ವೀಕ್ಷಿಸಿದ ಪ್ರಧಾನಿ ಮೋದಿ

ನವದೆಹಲಿ: ಜಗತ್ತಿನ ಹಲವೆಡೆ ಸಂಭವಿಸಿದ ಕಂಕಣ ಸೂರ್ಯಗ್ರಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಹ ಕಣ್ತುಂಬಿಕೊಂಡಿದ್ದು, ಗ್ರಹಣದ ಬಳಿಕ ಟ್ವೀಟ್ ಮಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇಂದು ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಂಕಣ ಸೂರ್ಯಗ್ರಹಣ ವೀಕ್ಷಿಸಿದರು. ಬಳಿಕ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ,'ಅನೇಕ ಭಾರತೀಯರಂತೆ ನಾನು ಕೂಡ ಸೂರ್ಯಗ್ರಹಣದ ಬಗ್ಗೆ ಉತ್ಸಾಹವನ್ನು ಹೊಂದಿದ್ದೇನೆ. ದೆಹಲಿಯಲ್ಲಿ ಮೋಡ ಕವಿದಿರುವುದರಿಂದ ದುರಾದೃಷ್ಟವಶಾತ್​ ಸೂರ್ಯನನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ, ನೇರಪ್ರಸಾರದ ಮೂಲಕ ಕೇರಳದ ಕೋಳಿಕ್ಕೋಡ್​ ಹಾಗೂ ದೇಶದ ಇನ್ನಿತರ ಭಾಗಗಳಲ್ಲಿ ಸಂಭವಿಸಿದ ಗ್ರಹಣ ಕೆಲ ಕ್ಷಣಗಳನ್ನು ಕಣ್ತುಂಬಿಕೊಂಡಿದ್ದೇನೆ. ಇದರೊಂದಿಗೆ ಖಗೋಳ ಶಾಸ್ತ್ರಜ್ಞರ ಬಳಿ ಗ್ರಹಣದ ಬಗ್ಗೆ ತಿಳಿಯುವ ಮೂಲಕ ನನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇಂದಿನ ಕಂಕಣ ಸೂರ್ಯಗ್ರಹಣ ಈ ವರ್ಷದ ಕೊನೆಯ ಹಾಗೂ ಮೂರನೇ ಸೂರ್ಯಗ್ರಹಣವಾಗಿದೆ. ಬಾನಂಗಳದಲ್ಲಿ ನಡೆದ ನೆರಳು ಬೆಳಕಿನ ಬೆಂಕಿಯ ಬಳೆಯಾಟವನ್ನು ಜಗತ್ತಿನೆಲ್ಲಡೆ ಜನರು ವೀಕ್ಷಣೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com