ಆರ್'ಎಸ್ಎಸ್ ಪ್ರಧಾನಿ ಭಾರತ ಮಾತೆಗೆ ಸುಳ್ಳು ಹೇಳುತ್ತಿದ್ದಾರೆ: ನಿರಾಶ್ರಿತ ಕೇಂದ್ರ ಕುರಿತ ಮೋದಿ ಹೇಳಿಕೆಗೆ ರಾಹುಲ್

ಅಕ್ರಮ ವಲಸಿಗರ ಬಂಧನಕ್ಕೆ ನಿರ್ಮಾಣಗೊಂಡಿರುವ ನಿರಾಶ್ರಿತ ಕೇಂದ್ರಗಳ ಕುರಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತೀವ್ರವಾಗಿ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಅಕ್ರಮ ವಲಸಿಗರ ಬಂಧನಕ್ಕೆ ನಿರ್ಮಾಣಗೊಂಡಿರುವ ನಿರಾಶ್ರಿತ ಕೇಂದ್ರಗಳ ಕುರಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತೀವ್ರವಾಗಿ ಕಿಡಿಕಾರಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು ಮೋದಿ ವಿರುದ್ಧ ಕಿಡಿಕಾರಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನಮಂತ್ರಿಗಳು ದೇಶಕ್ಕೆ ಸುಳ್ಳು ಹೇಳುತ್ತಿದ್ದಾರೆಂದು ಹೇಳಿದ್ದಾರೆ. 

ಆರ್'ಎಸ್ಎಸ್'ನ ಪ್ರಧಾನಮಂತ್ರಿಗಳು ಭಾರತ ಮಾತೆಗೆ ಸುಳ್ಳು ಹೇಳುತ್ತಿದ್ದಾರೆಂದು ಹೇಳಿದ್ದು, ಇದರೊಂದಿಗೆ ಅಸ್ಸಾಂನಲ್ಲಿ ನಿರ್ಮಾಣಗೊಂಡಿರುವ ನಿರಾಶ್ರಿತ ಕೇಂದ್ರ ಕುರಿತ ವಿಡಿಯೋವೊಂದನ್ನು ಇದರೊಂದಿಗೆ ಹಂಚಿಕೊಂಡಿದ್ದಾರೆ. 

ವಿಡಿಯೋದಲ್ಲಿ ಅಸ್ಸಾಂನ ಮಾಟಿಯಾದಲ್ಲಿ ರೂ.46 ಕೋಟಿ ವೆಚ್ಚದಲ್ಲಿ ಅಕ್ರಮ ವಲಸಿಗರ ಬಂಧನಕ್ಕಾಗಿ ನಿರಾಶ್ರಿತ ಕೇಂದ್ರಗಳನ್ನು ನಿರ್ಮಾಣ ಮಾಡಿರುವ ಪ್ರದೇಶವನ್ನು ತೋರಿಸಿರುವ ಸುದ್ದಿಗಳು ಕಂಡು ಬಂದಿದೆ. 

ವಿಡಿಯೋದಲ್ಲಿ ಸಾಮಾಜಿಕ ಹೋರಾಟಗರ ಶಹಜಹಾನ್ ಅಲಿ ಎಂಬುವವರು ಮಾತನಾಡಿದ್ದು, ಮಾಟಿಯಾದಲ್ಲಿ ರೂ.46 ಕೋಟಿ ವೆಚ್ಚದಲ್ಲಿ ನಿರಾಶ್ರಿತ ಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೂ ಮೋದಿಯವರು ಸುಳ್ಳು ಹೇಳುತ್ತಿದ್ದಾರೆಂದು ಹೇಳಿದ್ದಾರೆ.

ಇದಲ್ಲದೆ, ವಿಡಿಯೋದಲ್ಲಿ ಪ್ರಧಾನಿ ಮೋದಿಯವರು ಮಾತನಾಡಿರುವ ವಿಡಿಯೋ ಕೂಡ ಇದ್ದು, ಕಾಂಗ್ರೆಸ್ ಹಾಗೂ ನಗರ ನಕ್ಸಲರು ವದಂತಿಗಳನ್ನು ಹರುಡುತ್ತಿದ್ದಾರೆ. ಅಸ್ಸಾಂನಲ್ಲಿ ನಿರಾಶ್ರಿತ ಕೇಂದ್ರಗಳ ನಿರ್ಮಾಣವಾಗುತ್ತಿದೆ ಎಂದು ಸುಳ್ಳು ಸುದ್ದಿಗಳನ್ನು ಪಸರಿಸುತ್ತಿದ್ದಾರೆ.  ಇವೆಲ್ಲಾ ಸುಳ್ಳು. ದೇಶವನ್ನು ಒಡೆಯುವ ಉದ್ದೇಶ ಇದಾಗಿದೆ. ಕಾಂಗ್ರೆಸ್ ಪಕ್ಷ ನೀಡುತ್ತಿರುವ ಸುದ್ದಿ ಬರೀ ಸುಳ್ಳು, ಸುಳ್ಳು, ಸುಳ್ಳು ಎಂದು ಹೇಳಿರುವುದು ಕಂಡು ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com