ಭಾರತದಲ್ಲಿ 125 ಕೋಟಿ ಜನರು ಆಧಾರ್ ಹೊಂದಿದ್ದಾರೆ-ವಿಶಿಷ್ಟ ಗುರುತು ಪ್ರಾಧಿಕಾರ

ಸದ್ಯ, ದೇಶದ 125 ಕೋಟಿ ವಾಸಿಗಳು ಆಧಾರ್ ಹೊಂದಿದ್ದು, ಈ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ತಿಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸದ್ಯ, ದೇಶದ 125 ಕೋಟಿ ವಾಸಿಗಳು ಆಧಾರ್ ಹೊಂದಿದ್ದು, ಈ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ತಿಳಿಸಿದೆ.

ಇದರರ್ಥ ಭಾರತದ 1.25 ಶತಕೋಟಿ ವಾಸಿಗಳು 12 ಅಂಕಿಯ ವಿಶಿಷ್ಟ ಗುರುತನ್ನು ಹೊಂದಿದ್ದಾರೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಆಧಾರ್ ಹೊಂದಿರುವವರು ಮೂಲ ಗುರುತಿನ ದಾಖಲೆಯಾಗಿ ಆಧಾರ್ ಬಳಸುತ್ತಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸದ್ಯ ಪ್ರತಿದಿನ ಯುಐಡಿಎಐಗೆ ದೃಡೀಕರಣಕ್ಕಾಗಿ ಸುಮಾರು 3 ಕೋಟಿ ಮನವಿಗಳು ಬರುತ್ತವೆ.

ಅಲ್ಲದೆ, ಜನರು ತಮ್ಮ ವಿವರಗಳನ್ನು ಆಧಾರ್‌ನಲ್ಲಿ ನವೀಕರಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. ಯುಐಡಿಎಐ ಇಲ್ಲಿಯವರೆಗೆ 331 ಕೋಟಿ ಯಶಸ್ವಿ ಆಧಾರ್ ನವೀಕರಣಗಳನ್ನು ದಾಖಲಿಸಲಾಗಿದೆ.

ಪ್ರಸ್ತುತ ಯುಐಡಿಎಐ ಪ್ರತಿದಿನ ಸುಮಾರು 3-4 ಲಕ್ಷ ಆಧಾರ್ ನವೀಕರಣಗಳ ಮನವಿಯನ್ನು ಪಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com