ಎನ್‌ಪಿಆರ್ ಗೆ ಸುಳ್ಳು ಮಾಹಿತಿ ನೀಡಲು ಜನರಿಗೆ ಒತ್ತಾಯ: ಅರುಂಧತಿ ರಾಯ್ ವಿರುದ್ಧ ದೂರು ದಾಖಲು

ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಾಗಿ ಅಧಿಕಾರಿಗಳು ಬಂದಾಗ ಸುಳ್ಳು ಮಾಹಿತಿ ನೀಡುವಂತೆ ಜನರನ್ನು ಒತ್ತಾಯಿಸಿದ ಆರೋಪದ ಮೇರೆಗೆ ಲೇಖಕಿ ಹಾಗೂ ಹೋರಾಟಗಾರ್ತಿ ಅರುಂಧತಿ ರಾಯ್ ವಿರುದ್ಧ ಸುಪ್ರೀಂಕೋರ್ಟ್  ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಸಾಹಿತಿ ಅರುಂಧತಿ ರಾಯ್
ಸಾಹಿತಿ ಅರುಂಧತಿ ರಾಯ್

ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಗಾಗಿ ಅಧಿಕಾರಿಗಳು ಬಂದಾಗ ಸುಳ್ಳು ಮಾಹಿತಿ ನೀಡುವಂತೆ ಜನರನ್ನು ಒತ್ತಾಯಿಸಿದ ಆರೋಪದ ಮೇರೆಗೆ ಲೇಖಕಿ ಹಾಗೂ ಹೋರಾಟಗಾರ್ತಿ ಅರುಂಧತಿ ರಾಯ್ ವಿರುದ್ಧ ಸುಪ್ರೀಂಕೋರ್ಟ್  ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

ಅರುಂಧತಿ ರಾಯ್ ಅವರ ಹೇಳಿಕೆ ಮುಸ್ಲಿಂರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕವಾದ ಕೃತ್ಯವಾಗಿದೆ ಎಂದು ವಕೀಲ ರಾಜೀವ್ ಕುಮಾರ್ ರಂಜನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಐಪಿಸಿಯ ವಿವಿಧ ಸೆಕ್ಷನ್ ಹಾಗೂ ಕಿಡಿಗೇಡಿತನ, ಶಾಂತಿ ಉಲ್ಲಂಘನೆ, ಗಲಭೆ ಉಂಟುಮಾಡುವ ಉದ್ದೇಶ ಮತ್ತು ಕ್ರಿಮಿನಲ್ ಪಿತೂರಿಯಂತಹ  ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ  ದೆಹಲಿಯ ತಿಲಕ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಅರುಂಧತಿ ರಾಯ್ ವಿರುದ್ಧ ದೂರು ದಾಖಲಿಸಲಾಗಿದೆ. 

ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಶಿಕ್ಷೆ ನೀಡುವಂತೆ ಕೋರಲಾಗಿದೆ. ಇದರಿಂದ ಅರುಂಧತಿ ರಾಯ್  ಮುಂದೆ ಇಂತಹ ಹೇಳಿಕೆ ನೀಡದಂತೆ ಪಾಠ ಕಲಿಯಲಿದ್ದಾರೆ ಎಂದು ರಂಜರ್ ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com