ಭಾರತೀಯ ಸಶಸ್ತ್ರ ಪಡೆಗಳು ಸಂಪೂರ್ಣ ಜಾತ್ಯಾತೀತವಾಗಿವೆ: ಬಿಪಿನ್ ರಾವತ್

 ಭಾರತೀಯ ಸೇನಾಪಡೆಗಳು ಅತ್ಯಂತ ಉತ್ತಮ ಜಾತ್ಯಾತೀತತೆಯಿಂದ ಕೂಡಿದ್ದು ಮಾನವೀಯತೆ) ಹಾಗೂ ಸಭ್ಯತೆಗೆ ಹೆಸರಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ದಿನದ ತರುವಾಯ ರಾವತ್ ಈ ಹೇಳಿಕೆ ಬಂದಿದೆ.
ಜನರಲ್ ಬಿಪಿನ್ ರಾವತ್
ಜನರಲ್ ಬಿಪಿನ್ ರಾವತ್

ನವದೆಹಲಿ: ಭಾರತೀಯ ಸೇನಾಪಡೆಗಳು ಅತ್ಯಂತ ಉತ್ತಮ ಜಾತ್ಯಾತೀತತೆಯಿಂದ ಕೂಡಿದ್ದು ಮಾನವೀಯತೆ) ಹಾಗೂ ಸಭ್ಯತೆಗೆ ಹೆಸರಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ದಿನದ ತರುವಾಯ ರಾವತ್ ಈ ಹೇಳಿಕೆ ಬಂದಿದೆ.

"ಹಿಂಸೆ ನಡೆಸಲು, ಅಗ್ನಿಸ್ಪರ್ಶ ಮಾಡಲು  ದೊಡ್ಡ ಜನಸಮೂಹವನ್ನು ಪ್ರಚೋದಿಸುವುದು ನಾಯಕತ್ವಕ್ಕೆ ತಕ್ಕುದಲ್ಲ " ಎಂದು ಗುರುವಾರ ರಾವತ್ ಹೇಳಿಕೆ ನೀಡುವ ಮೂಲಕ ಪೌರತ್ವ ಕಾಯ್ದೆ ಕುರಿತು ವಿವಾದದ ಹೇಳಿಕೆ ನಿಡಿದ್ದರು.

ಭಾರತೀಯ ಸಶಸ್ತ್ರ ಪಡೆಗಳು  ಮಾನವ ಹಕ್ಕುಗಳ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿವೆ. ಭಾರತೀಯ ಸೇನೆಯಲ್ಲಿ ಮಾನವ ಹಕ್ಕುಗಳ ಘಟಕವನ್ನು ನಿರ್ದೇಶನಾಲಯದ ಮಟ್ಟಕ್ಕೆ ನವೀಕರಿಸಿದ್ದೇವೆ. ಭಾರತೀಯ ಸಶಸ್ತ್ರ ಪಡೆಗಳು ಹೆಚ್ಚು ಶಿಸ್ತುಬದ್ಧವಾಗಿವೆ ಮತ್ತುಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಗಳ ಬಗ್ಗೆ ಹೆಚ್ಚಿನ ಗೌರವವನ್ನು ಹೊಂದಿವೆ ಎಂದು ರಾವತ್ ಹೇಳಿದರು.

"ಭಾರತೀಯ ಸಶಸ್ತ್ರ ಪಡೆಗಳು ನಮ್ಮ ಜನರ ಮಾನವ ಹಕ್ಕುಗಳ ರಕ್ಷಣೆಯನ್ನು ಖಾತರಿಪಡಿಸುವುದಲ್ಲದೆ, ಜಿನೀವಾ ಸಮಾವೇಶದ ಪ್ರಕಾರ ಯುದ್ಧ ಕೈದಿಗಳೊಂದಿಗೆ ವ್ಯವಹರಿಸುತ್ತವೆ" ಎಂದು ಜನರಲ್ ರಾವತ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಇಂಟರ್ನಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು. ನವದೆಹಲಿಯ ಮಾನವ್ ಅಧಿಕಾರ್ ಭವನ್ ನಲ್ಲಿ  "ಯುದ್ಧದ ಸಮಯದಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಯುದ್ಧ ಕೈದಿಗಳು" ಎಂಬ ವಿಷಯದ ಕುರಿತು. ಅವರು ಉಪನ್ಯಾಸ ನೀಡಿದ್ದರು.

ತಂತ್ರಜ್ಞಾನದ ಯುಗದಲ್ಲಿ  ಬದಲಾಗುತ್ತಿರುವ ಯುದ್ಧ ತಂತ್ರಗಳೇ ಸವಾಲು ಎಂದು ಸೇನಾ ಮುಖ್ಯಸ್ಥರು ಹೇಳಿದರು. "ಯಾವುದೇ ಸಶಸ್ತ್ರ ಪಡೆಗಳ ದಾಳಿಯಂತಲ್ಲದೆ, ಭಯೋತ್ಪಾದಕ ದಾಳಿಗಳು ಅಂತರರಾಷ್ಟ್ರೀಯ ಕಾನೂನಿನಲ್ಲಿ ಲೆಕ್ಕಕ್ಕೆ ಸಿಕ್ಕದೆ ಉಳಿದಿವೆಎಂದ ರಾವತ್ ಭಯೋತ್ಪಾದನೆ ಮತ್ತು ದಂಗೆ-ವಿರೋಧಿ ಕಾರ್ಯಾಚರಣೆಗಳನ್ನು ಗುರುತಿಸಿ ಮತ್ತು ದೂರವಿಡುವ ಮೂಲಕ ಜನರ ಹೃದಯವನ್ನು ಗೆಲ್ಲುವ ರೀತಿಯಲ್ಲಿ ವ್ಯವಹರಿಸಬೇಕಾಗಿದೆ ಎಂದಿದ್ದಾರೆ.ಭಾರತೀಯ ಸೇನೆಯು  1993 ರಲ್ಲಿ ಮಾನವ ಹಕ್ಕುಗಳ ಘಟಕವನ್ನು ರಚಿಸಿದೆ ಎಂದು ಜನರಲ್ ರಾವತ್ ಹೇಳಿದ್ದಾರೆ, ಇದನ್ನು ಈಗ ಹೆಚ್ಚುವರಿ ಮಹಾನಿರ್ದೇಶಕರ ನೇತೃತ್ವದಲ್ಲಿ ನಿರ್ದೇಶನಾಲಯದ ಮಟ್ಟಕ್ಕೆ ನವೀಕರಿಸಲಾಗುತ್ತಿದೆ. "ಇದು ಸಶಸ್ತ್ರ ಪಡೆಗಳ ವಿರುದ್ಧದ ಮಾನವ ಹಕ್ಕುಗಳ ಉಲ್ಲಂಘನೆಯ ದೂರುಗಳನ್ನು ಪರಿಹರಿಸಲು ಮತ್ತು ಸಂಬಂಧಿತ ವಿಚಾರಣೆಗೆ ಅನುಕೂಲವಾಗುವಂತೆ ಪೊಲೀಸ್ ಸಿಬ್ಬಂದಿಯನ್ನು ಹೊಂದಿರುತ್ತದೆ" ಎಂದು ಅವರು ಹೇಳಿದರು.

ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳಾ ಜವಾನರನ್ನು  ನೇಮಕ ಮಾಡುವ ಮೂಲಕ ಈ ವರ್ಷದ ಅಕ್ಟೋಬರ್‌ನಲ್ಲಿ ಹೊಸ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಜನರಲ್ ರಾವತ್ ಹೇಳಿದ್ದಾರೆ. ಶೋಧ ಕಾರ್ಯಾಚರಣೆಯಲ್ಲಿ ಸೇನೆಯು ಹಲವಾರು ಪೊಲೀಸ್ ಸಿಬ್ಬಂದಿಯನ್ನು ಕರೆದೊಯ್ಯುತ್ತದೆ ಎಂದು ಅವರು ಹೇಳಿದರು, ಆದರೆ ಅಂತಹ ಕಾರ್ಯಾಚರಣೆಗಳ ಸಮಯದಲ್ಲಿ ಮಹಿಳೆಯರ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಸೇನೆಯು ಈಗ ತನ್ನ ಮಿಲಿಟರಿ ಪೊಲೀಸ್ ಪಡೆಯ ಲೇಡಿ ಜವಾನರನ್ನು ನಿಯೋಜಿಸಲು ನಿರ್ಧರಿಸಿದೆ.ಮಾನವ ಹಕ್ಕುಗಳ ಕಾನೂನುಗಳ ನಿಬಂಧನೆಗಳು ಮತ್ತು ಮಾನವ ಹಕ್ಕುಗಳ ರಕ್ಷಣೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಈಗ ಪ್ರತಿ ದಂಗೆ-ವಿರೋಧಿ ಕಾರ್ಯಾಚರಣೆಯ ನಂತರ ವಿಚಾರಣೆ ನಡೆಸಲಾಗುವುದು ಮತ್ತು ಅಂತಹ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ನಿರ್ವಹಿಸಲಾಗಿದೆ ಎಂದು ಅವರು ಹೇಳಿದರು.ಸಶಸ್ತ್ರ ಪಡೆ ವಿಶೇಷ ಅಧಿಕಾರ ಕಾಯ್ದೆ, ಎಎಫ್‌ಎಸ್‌ಪಿಎಯನ್ನು ಉಲ್ಲೇಖಿಸಿ, ಸೇನಾ ಮುಖ್ಯಸ್ಥರು ಈ ಕಾಯಿದೆಯು ಸೈನ್ಯಕ್ಕೆ ಬಹುತೇಕ ಒಂದೇ ರೀತಿಯ ಅಧಿಕಾರವನ್ನು ನೀಡುತ್ತದೆ, ಇವುಗಳನ್ನು ಶೋಧ ಮತ್ತು ವಿಚಾರಣಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಮತ್ತು ಸಿಆರ್‌ಪಿಎಫ್ ಸಹ ಬಳಸಿಕೊಳ್ಳುತ್ತವೆ ಎಂದಿದ್ದಾರೆ.

"ಈ ಕುರಿತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಸಹ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ, ಅವರೆಲ್ಲರಿಗೂ ಪ್ರತಿ ದಂಗೆ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ನಿಯೋಜನೆಗೊಳ್ಳುವ ಮೊದಲು ವಿಶೇಷ ತರಬೇತಿ ನೀಡಲಾಗುತ್ತದೆ" ಎಂದು ಅವರು ಒತ್ತಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com