ನಾನು  ಜೀವದಿಂದಿರುವವರೆಗೆ ಬಂಗಾಳದಲ್ಲಿ ಸಿಎಎ ಜಾರಿ ಇಲ್ಲ: ಮಮತಾ ಬ್ಯಾನರ್ಜಿ

ನಾನು  ಜೀವಂತವಾಗಿರುವವರೆಗೂ ಬಂಗಾಳದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಬರುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಹೇಳಿದರು
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ

ಮಹತಿ(ಪಶ್ಚಿಮ ಬಂಗಾಳ): ನಾನು  ಜೀವಂತವಾಗಿರುವವರೆಗೂ ಬಂಗಾಳದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಬರುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ಹೇಳಿದರು

ಪೌರತ್ವದಹೆಸರಲ್ಲಿ ದೇಶದ ಜನರ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ವಿವಾದಾತ್ಮಕ ಸಿಎಎ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬೆಂಬಲಿಸಿದ ಅವರು, 18 ನೇ ವರ್ಷಕ್ಕೆ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕನ್ನು ಭಾರತೀಯರು ಪಡೆಯುತ್ತಾರೆ ಆದರೆ ಪ್ರತಿಭಟನೆ ಹಕ್ಕನ್ನು ಹೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾನು ಬದುಕಿರುವವರೆಗೂ ಸಿಎಎ ಬಂಗಾಳದಲ್ಲಿ ಜಾರಿಗೆ ಬರುವುದಿಲ್ಲ. ಯಾರೂ ದೇಶ ಅಥವಾ ರಾಜ್ಯವನ್ನು ತೊರೆಯಬೇಕಾಗಿಲ್ಲ. ಬಂಗಾಳದಲ್ಲಿ ಯಾವುದೇ ಬಂಧನ ಕೇಂದ್ರ ಇರುವುದಿಲ್ಲ" ಎಂದು ಬ್ಯಾನರ್ಜಿ ಹೇಳಿದರು.

"ಕಠಿಣ ಕಾನೂನಿನ ವಿರುದ್ಧ ವಿದ್ಯಾರ್ಥಿಗಳು ಏಕೆ ಪ್ರತಿಭಟಿಸಲು ಸಾಧ್ಯವಿಲ್ಲ? ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ವಿರುದ್ಧ ಕೇಂದ್ರವು ಕ್ರಮ ತೆಗೆದುಕೊಳ್ಳುತ್ತಿದೆ ಮತ್ತು ಅವರನ್ನು ವಿಶ್ವವಿದ್ಯಾಲಯಗಳಿಂದ ಹೊರಗಟ್ಟಿದೆ"ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com