ಮಹಿಳಾ ಪೊಲೀಸರನ್ನು 'ಮರ್ದಾನಿ-2'ಗೆ ಕರೆದೊಯ್ದು ಸರ್ಪೈಸ್ ಕೊಟ್ಟ ಥಾಣೆ ಡಿಎಸ್ ಪಿ

ಪೊಲೀಸ್ ಸಿಬ್ಬಂದಿಯನ್ನು ಸದಾ ಬಂದೋಬಸ್ತ್ ಗೆ ಕರೆದೊಯ್ಯುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಇದ್ದಕ್ಕಿದ್ದಂತೆ ಸುಮಾರು 100 ಮಹಿಳಾ ಪೊಲೀಸರನ್ನು ಮಲ್ಟಿಪ್ಲೆಕ್ಸ್ ಗೆ ಕರೆದೊಯ್ದು ಬಾಲಿವುಡ್ ನಟಿ ರಾಣಿ ಮುಖರ್ಜಿ ಅಭಿನಯದ 'ಮರ್ದಾನಿ-2 ಚಿತ್ರ ತೋರಿಸುವ ಮೂಲಕ ಸರ್ಪೈಸ್ ನೀಡಿದ್ದಾರೆ.
ರಾಣಿ ಮುಖರ್ಜಿ
ರಾಣಿ ಮುಖರ್ಜಿ

ಥಾಣೆ: ಪೊಲೀಸ್ ಸಿಬ್ಬಂದಿಯನ್ನು ಸದಾ ಬಂದೋಬಸ್ತ್ ಗೆ ಕರೆದೊಯ್ಯುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಇದ್ದಕ್ಕಿದ್ದಂತೆ ಸುಮಾರು 100 ಮಹಿಳಾ ಪೊಲೀಸರನ್ನು ಮಲ್ಟಿಪ್ಲೆಕ್ಸ್ ಗೆ ಕರೆದೊಯ್ದು ಬಾಲಿವುಡ್ ನಟಿ ರಾಣಿ ಮುಖರ್ಜಿ ಅಭಿನಯದ 'ಮರ್ದಾನಿ-2 ಚಿತ್ರ ತೋರಿಸುವ ಮೂಲಕ ಸರ್ಪೈಸ್ ನೀಡಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಶಿವಾಜಿ ರಾಥೋಡ್ ಅವರು, ಗುರುವಾರ ಸುಮಾರು 100 ಮಹಿಳಾ ಪೊಲೀಸರಿಗೆ ಕರೆ ಮಾಡಿ ತುರ್ತು ಬಂದೋಬಸ್ತ್ ಗೆ ತೆರಳಬೇಕಾಗಿದೆ ಎಂದು ಹೇಳಿ ಮಲ್ಟಿಪ್ಲೆಕ್ಸ್ ಗೆ ಕರೆದೊಯ್ದು 'ಮರ್ದಾನಿ-2' ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಿದ್ದಾರೆ.

ತುರ್ತು ಬಂದೋಬಸ್ತ್ ಗಾಗಿ ಬಯಂದರ್ ಪೊಲೀಸ್ ಠಾಣೆಯಲ್ಲಿ ಸೇರಿದ್ದ ಎಲ್ಲಾ ಮಹಿಳಾ ಪೊಲೀಸರನ್ನು ಸಿನಿಮಾಗೆ ಕರೆದೊಯ್ಯುವ ಮೂಲಕ ಸರ್ಪೈಸ್ ನೀಡಲಾಗಿದೆ ಎಂದು ಹೆಚ್ಚು ಪೊಲೀಸ್ ಅಧೀಕ್ಷಕ ಸಂಯಜ್ ಪಾಟೀಲ್ ಅವರು ತಿಳಿಸಿದ್ದಾರೆ.

ಅತ್ಯಾಚಾರಿಗಳ ವಿರುದ್ಧ ಮಹಿಳಾ ಪೊಲೀಸ್‌ ಅಧಿಕಾರಿ ಸಮರ ಸಾರುವ ಕತೆಯುಳ್ಳ 'ಮರ್ದಾನಿ-2' ಚಿತ್ರವನ್ನು ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮುಂಬೈನ ಶಕ್ತಿ ಮಿಲ್ಸ್ ಅತ್ಯಾಚಾರ ಪ್ರಕರಣದಂತಹ ನೈಜ ಘಟನೆಗಳನ್ನು ಆಧರಿಸಿ ಚಿತ್ರೀಕರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com