ಅಸ್ಸಾಂ ಸಂಸ್ಕೃತಿ ಮೇಲೆ ಬಿಜೆಪಿ ದಾಳಿ ಮಾಡಲು ಅವಕಾಶ ನೀಡುವುದಿಲ್ಲ: ರಾಹುಲ್ ಗಾಂಧಿ

ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಗುವಾಹತಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಐತಿಹಾಸಿಕ ಅಸ್ಸಾಂ ಒಪ್ಪಂದವನ್ನು ಮುರಿಯಬಾರದು ಎಂದು ಶನಿವಾರ ಹೇಳಿದ್ದಾರೆ.

ಅಸ್ಸಾಂನಲ್ಲಿ ದ್ವೇಷ ಮತ್ತು ಹಿಂಸೆ ಇತ್ತು. ನಂತರ, ಜನ ಒಗ್ಗೂಡಿದರು ಮತ್ತು ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಶಾಂತಿ ಮರಳಿತು. ಶಾಂತಿಗಾಗಿ ಅಕಾರ್ಡ್ ನ ಅಗತ್ಯ ಇದೆ. ಆದ್ದರಿಂದ, ಒಪ್ಪಂದದ ಉತ್ಸಾಹವನ್ನು ಮುರಿಯಬಾರದು. ಆ ಒಪ್ಪಂದವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇಂದು ಗುವಾಹತಿಯಲ್ಲಿ ಕಾಂಗ್ರೆಸ್ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್, ಪೌರತ್ವ ಕಾಯ್ದೆ ಅಸ್ಸಾಂ ಒಪ್ಪಂದದ ಐದು ಷರತ್ತುಗಳನ್ನು ಉಲ್ಲಂಘಿಸುತ್ತದೆ. ಮಾರ್ಚ್ 24, 1971 ರ ನಂತರ ಅಕ್ರಮವಾಗಿ ಅಸ್ಸಾಂಗೆ ಬಂದು ನೆಲೆಸಿದವರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಬೇಕು ಎಂದು ಒಪ್ಪಂದ ಹೇಳುತ್ತದೆ. ಆದರೆ ಪೌರತ್ವ ಕಾಯ್ದೆಯಲ್ಲಿ ಅವರಿಗೆ ಪೌರತ್ವ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ಅಸ್ಸಾಂ ಸಂಸ್ಕೃತಿಯನ್ನು ಗುರುತಿಸಿಲ್ಲ. ಈಗ ಅದರ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದು, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

1985 ಆಗಸ್ಟ್‌ 15ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಧ್ಯೆ ‘ಅಸ್ಸಾಂ ಒಪ್ಪಂದ’ವಾಯಿತು. ಆಗ ಕೇಂದ್ರದಲ್ಲಿ ರಾಜೀವ್‌ ಗಾಂಧಿ ನೇತೃತ್ವದ ಸರ್ಕಾರ ಇತ್ತು. ಅದರನ್ವಯ ಅಸ್ಸಾಮಿಗಳೆಂದು ತೀರ್ಮಾನಿಸಲು ಕೆಲ ಪ್ರಸ್ತಾಪಗಳನ್ನು ಮುಂದಿಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com