ಸರ್ಕಾರದ ಕ್ರಮದಿಂದ ಹಿಂಸಾಚಾರ ಸೃಷ್ಟಿಸುತ್ತಿದ್ದ ಪ್ರತಿಭಟನಾಕಾರರಿಗೆ 'ಶಾಕ್' ಆಗಿದೆ: ಯೋಗಿ ಆದಿತ್ಯಾನಾಥ್

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಸರ್ಕಾರ ಹಾಗೂ ಪೊಲೀಸರ ಕ್ರಮವನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮರ್ಥಿಸಿಕೊಂಡಿದ್ದಾರೆ. 
ಸಿಎಂ ಯೋಗಿ ಆದಿತ್ಯಾನಾಥ್
ಸಿಎಂ ಯೋಗಿ ಆದಿತ್ಯಾನಾಥ್

ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಸರ್ಕಾರ ಹಾಗೂ ಪೊಲೀಸರ ಕ್ರಮವನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮರ್ಥಿಸಿಕೊಂಡಿದ್ದಾರೆ. 

ಈ ಕುರಿತಂತೆ ಸಾಮಾಜಿದ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಯೋಗಿ ಆದಿತ್ಯಾನಾಥ್ ಕಚೇರಿ, ಸರ್ಕಾರ ಹಾಗೂ ಪೊಲೀಸರ ದಿಟ್ಟ ಕ್ರಮಕ್ಕೆ ಪ್ರತೀಯೊಬ್ಬ ಗಲಭೆಕೋರನೂ ಶಾಕ್'ಗೆ ಒಳಗಾಗಿದ್ದಾನೆ. ಯೋಗಿ ಆದಿತ್ಯನಾಥ್ ಸರ್ಕಾರ ತೆಗೆದುಕೊಂಡು ಕಠಿಣ ಕ್ರಮಕ್ಕೆ ಪ್ರತೀಯೊಬ್ಬರೂ ಮೌನವಾಗಿ ಹೋಗಿದ್ದಾರೆ. ಹಿಂಸಾಚಾರ ಸೃಷ್ಟಿಸಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟು ಮಾಡುವವರ ಆಸ್ತಿಯನ್ನು ಪರಿಹಾರವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಇದೀಗ ಗಲಭೆ ಸೃಷ್ಟಿಸಿದ್ದ ಪ್ರತೀ ಹೋರಾಟಗಾರನೂ ಅಳಲು ಆರಂಭಿಸಲಿದ್ದಾನೆ. ಇದಕ್ಕೆ ಕಾರಣ ಉತ್ತರಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ್ ಸರ್ಕಾರ ಎಂದು ಹೇಳಿದೆ. 

ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟ ಉಂಟು ಮಾಡಿದ್ದ ಜನರು ಇದೀಗ ಪರಿಹಾರ ನೀಡಬೇಕಾಗಿದೆ. ಹಿಂಸಾಚಾರ ಸೃಷ್ಟಿಸುವ ಗಲಭೆಕೋರನಿಗೆ ಇದೊಂದು ಮಿಂಚಿನ ಉದಾಹರಣೆಯಾಗಲಿದೆ ಎಂದು ತಿಳಿಸಲಾಗಿದೆ. 

ಪೌರತ್ವ ಕಾಯ್ದೆ ವಿರುದ್ಧ ಉತ್ತರಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ 21 ಮಂದಿ ಮೃತಪಟ್ಟಿದ್ದರು. ಅಲ್ಲದೆ, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಸಾಕಷ್ಟು ನಷ್ಟ ಎದುರಾಗಿದೆ. ಹೀಗಾಗಿ ಇದರ ವಿರುದ್ದ ದಿಟ್ಟ ಕ್ರಮ ಕೈಗೊಂಡಿದ್ದ ಯೋಗಿ ಆದಿತ್ಯನಾಥ್ ಅವರು, ನಷ್ಟ ಮಾಡಿದವರೇ ಪರಿಹಾರ ನೀಡಬೇಕೆಂದು ತಿಳಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com