ಪಾಕಿಸ್ತಾನ ಜಿಂದಾಬಾದ್ ಎನ್ನುವವರು ಪಾಕ್ ಗೆ ಹೋಗಿ: ಮುಸ್ಲಿಂ ಪ್ರತಿಭಟನಾಕಾರರಿಗೆ ಮೀರತ್ ಎಸ್‌ಪಿ ಖಡಕ್ ಸೂಚನೆ

ಕಳೆದ ಶುಕ್ರವಾರ ಉತ್ತರ ಪ್ರದೇಶದ ಮೀರತ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಕುರಿತು ಕೋಮುವಾದಿ ಹೇಳಿಕೆ ನೀಡಿರುವ ವೀಡಿಯೊಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 
ಅಖಿಲೇಶ್ ನಾರಾಯಣ್ ಸಿಂಗ್
ಅಖಿಲೇಶ್ ನಾರಾಯಣ್ ಸಿಂಗ್

ಮೀರತ್: ಕಳೆದ ಶುಕ್ರವಾರ ಉತ್ತರ ಪ್ರದೇಶದ ಮೀರತ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಕುರಿತು ಕೋಮುವಾದಿ ಹೇಳಿಕೆ ನೀಡಿರುವ ವೀಡಿಯೊಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಮೊಬೈಲ್ ಫೋನ್ ವಿಡಿಯೋದಲ್ಲಿ, ಮೀರತ್‌ನ ಪೊಲೀಸ್ ವರಿಷ್ಠಾಧಿಕಾರಿ (ನಗರ) ಸೇವೆ ಸಲ್ಲಿಸುತ್ತಿರುವ ಅಖಿಲೇಶ್ ನಾರಾಯಣ್ ಸಿಂಗ್ ಗಲಭೆಕೋರರ ನಡುವೆ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಇತರ ಕೆಲವು ಪೊಲೀಸರು ಸಹ ಅವರೊಡನೆ ಅಲ್ಲಿ ಹೆಜ್ಜೆ ಹಾಕುತ್ತಿದ್ದರು

ವಿಡಿಯೋಕ್ಕೆ ಪ್ರತಿಕ್ರಿಯಿಸಿದ ಮೀರತ್‌ನ ಹೆಚ್ಚುವರಿ ಮಹಾನಿರ್ದೇಶಕ ಪ್ರಶಾಂತ್ ಕುಮಾರ್, "ಕಲ್ಲುಗಳನ್ನು ಹೊಡೆಯುತ್ತಾ ಭಾರತ ವಿರೋಧಿ ಪಾಕ್ ಪರ ಘೋಷಣೆಗಳನ್ನು ಅಲ್ಲಿ ಕೂಗಲಾಗುತ್ತಿತ್ತು. ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿತ್ತು.ಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಕರಪತ್ರಗಳನ್ನು ವಿತರಿಸಲಾಗುತ್ತಿತ್ತು. ಧಾರ್ಮಿಕ ಮುಖಂಡರು ಸೇರಿದಂತೆ ಎಲ್ಲರ ಮನವಿಗಳನ್ನು ತಳ್ಳಿ ಹಾಕಿ ಅಲ್ಲಿನ ಪ್ರತಿಭಟನಾಕಾರರು ಉದ್ವೇಗದಿಂದ ಕೂಡಿದ್ದರು" ಎಂದಿದ್ದಾರೆ.

"ಪರಿಸ್ಥಿತಿ ಒಂದು ಹಂತದಲ್ಲಿ ಉತ್ತಮಾಗಿದ್ದ ವೇಳೆ ಪದ ಪ್ರಯೋಗಗಳೂ ಉತ್ತಮವಾಗಿರುತ್ತದೆ. , ಆದರೆ ಆ ದಿನ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿತ್ತು., ನಮ್ಮ ಅಧಿಕಾರಿಗಳು ಸಾಕಷ್ಟು ಸಂಯಮವನ್ನು ತೋರಿಸಿದರು, ಪೊಲೀಸರಿಂದ ಯಾವುದೇ ಗುಂಡಿನ ದಾಳಿ ನಡೆದಿಲ್ಲ." ಅವರು ವಿವರಿಸಿದ್ದಾರೆ.

ಇನ್ನು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡ ಎಸ್‌ಪಿ "ನಮ್ಮನ್ನು ನೋಡಿದ ಕೆಲವು ಹುಡುಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಕೂಗಲಾರಂಭಿಸಿದ್ದರು. ನೀವು ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನುಕೂಗುತ್ತಾ ಭಾರತವನ್ನು ದ್ವೇಷಿಸುತ್ತಿದ್ದರೆ  ನೀವು ಕಲ್ಲುಗಳನ್ನು ಹೊಡೆಯುತ್ತೀರಾದರೆ ನೀವೆಲ್ಲಾ ರೆ ಪಾಕಿಸ್ತಾನಕ್ಕೆ ಹೋಗಿ ಎಂದು ನಾನು ಹೇಳಿದೆ" ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com