26/11 ದಾಳಿ ಬಳಿಕ ಪಾಕ್ ಮೇಲಿನ ಪ್ರತಿದಾಳಿಗೆ ಅಂದಿನ ಸರ್ಕಾರ ಅನುಮತಿ ನೀಡಿರಲಿಲ್ಲ: ವಾಯುಪಡೆ ಮಾಜಿ ಮುಖ್ಯಸ್ಥ

26/11 ಮುಂಬೈ ಮೇಲಿನ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಪ್ರತಿ ದಾಳಿಗೆ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ, ದಾಳಿಯ ಪ್ರಸ್ತಾವವನ್ನು ಅಂದಿನ ಸರ್ಕಾರ ನಿರಾಕರಿಸಿತ್ತು ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಬೀರೇಂದ್ರ ಸಿಂಗ್ ಧನೋವಾ ಅವರು ಹೇಳಿದ್ದಾರೆ. 
ವಾಯುಪಡೆ ಮಾಜಿ ಮುಖ್ಯಸ್ಥ
ವಾಯುಪಡೆ ಮಾಜಿ ಮುಖ್ಯಸ್ಥ

ಮುಂಬೈ: 26/11 ಮುಂಬೈ ಮೇಲಿನ ಉಗ್ರರ ದಾಳಿ ಬಳಿಕ ಪಾಕಿಸ್ತಾನದ ಮೇಲೆ ಪ್ರತಿ ದಾಳಿಗೆ ಸಿದ್ಧತೆಗಳನ್ನು ನಡೆಸಲಾಗಿತ್ತು. ಆದರೆ, ದಾಳಿಯ ಪ್ರಸ್ತಾವವನ್ನು ಅಂದಿನ ಸರ್ಕಾರ ನಿರಾಕರಿಸಿತ್ತು ಎಂದು ವಾಯುಪಡೆಯ ನಿವೃತ್ತ ಮುಖ್ಯಸ್ಥ ಬೀರೇಂದ್ರ ಸಿಂಗ್ ಧನೋವಾ ಅವರು ಹೇಳಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಪಾಕಿಸ್ತಾನದಲ್ಲಿ ಉಗ್ರ ಶಿಬಿರಗಳಿರುವ ಮಾಹಿತಿ ಭಾರತೀಯ ವಾಯುಪಡೆಗೆ ತಿಳಿದಿತ್ತು. ಹೀಗಾಗಿ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಲು ಸಜ್ಜಾಗಿದ್ದೆವು. ಆದರೆ, ಅಂದಿನ ಸರ್ಕಾರ ನಮಗೆ ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. 

2001ರ ಡಿಸೆಂಬರ್ ನಲ್ಲಿ ಸಂಸತ್ತಿನ ಮೇಲೂ ನಡೆದಿತ್ತು. ಆಗಲೂ ಪಾಕಿಸ್ತಾನ ವಿರುದ್ಧ ವಾಯುದಾಳಿ ನಡೆಸಲು ಸಜ್ಜಾಗಿದ್ದೆವು. ಆ ಪ್ರಸ್ತಾವನೆಗೂ ಸರ್ಕಾರ ಅನುಮತಿ ನೀಡಿರಲಿಲ್ಲ. ಶಾಂತಿ ಸ್ಥಾಪನೆಗೊಳ್ಳಬೇಕೆಂದರೆ, ಪಾಕಿಸ್ತಾನ ತನ್ನ ಹಲವಾರು ಸವಲತ್ತುಗಳನ್ನು ಕೆಳೆದುಕೊಳ್ಳುತ್ತದೆ. ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸಲು ಪಾಕಿಸ್ತಾನ ಬಿಡುವುದಿಲ್ಲ. ಕಾಶ್ಮೀರದಲ್ಲಿ ಸದಾಕಾಲ ಬಿಗುವಿನ ವಾತಾವರಣ ನಿರ್ಮಾಣ ಮಾಡಲು ಪಾಕಿಸ್ತಾನ ಯತ್ನಿಸುತ್ತಲೇ ಇರುತ್ತದೆ. 

ಪಾಕಿಸ್ತಾನ ಕೆಟ್ಟ ನೀತಿಗಳನ್ನು ಅನುಸರಿಸುತ್ತಿದ್ದು, ತನ್ನ ದಾಳಿಯನ್ನು ಮುಂದುವರೆಸುತ್ತಲೇ ಇರುತ್ತದೆ. ಅದಕ್ಕೆ ದಿಟ್ಟ ಉತ್ತರ ನೀಡುವ ಸಾಮರ್ಥ್ಯ ಭಾರತೀಯ ಸೇನೆಗಿದೆ. ಆದರೆ, ಭಾರತದ ಎದುರು ಇರುವ ಬಹುದೊಡ್ಡ ಸವಾಲು ಎಂದರೆ, ತನ್ನ ಸುತ್ತ ಇರುವ ಅಣುಬಾಂಬ್ ಹೊಂದಿರುವ ಎರಡು ದೇಶಗಳನ್ನು (ಪಾಕಿಸ್ತಾನ, ಚೀನಾ) ಎದುರಿಸುವುದು ಎಂದು ತಿಳಿಸಿದ್ದಾರೆ. 

ಇದೇ ವೇಳೆ ಬಾಲಕೋಟ್ ವಾಯುದಾಳಿ ಕುರಿತಂತೆ ಮಾತನಾಡಿರುವ ಅವರು, ವಾಯು ದಾಳಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ವಾಯುಪಡಗೆ ಶಾಕ್ ನೀಡಿತ್ತು. ದಾಳಿ ಬಗ್ಗೆ ಅವರಿಗೆ ಮಾಹಿತಿಯೇ ಇರಲಿಲ್ಲ. ರಕ್ಷಣಾ ಪಡೆಗಳಲ್ಲಿ ಜಂಟಿ ಯೋಜನೆಯ ಕೊರತೆಯಿದ್ದು, ಇದರಿಂದ ಅವರ ಸ್ಥೈರ್ಯ ಕಡಿಮೆಯಾಗಿದೆ. ಭಾರತ ಕೂಡ ಪರಮಾಣು ಸಾಮರ್ಥ್ಯ ಹೊಂದಿತ್ತು. ಚೀನಾ ಆಧುನಿಕ ವಾಯುಪಡೆಯನ್ನು ಅಭಿವೃದ್ಧಿಪಡಿಸಿದ್ದು ಅದು ಗುಣಮಟ್ಟದಾಗಿದೆ. ಆದರೆ, ಪ್ರಮಾಣದಲ್ಲಿ ಅಲ್ಲ. ಚೀನಾ ಟಿಬೆಟ್ ನಲ್ಲಿ ವಿಮಾನ ಮತ್ತು ವಾಯು ಪಡೆಗಳನ್ನು ನಿಯೋಜನೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಚೀನಾದ ಪೂರ್ವ ಮುಂಭಾಗ ಮತ್ತು ದಕ್ಷಿಣ ಭಾಗದಲ್ಲಿ ಚೀನಾಪಡೆಗಳು ಕಾರ್ಯನಿರತವಾಗಿದ್ದು, ಮುಳುಗಿಸಲಾಗದ ವಿಮಾನವಾಹಕ ನೌಕೆಗಳನ್ನು ಕೂಡ ರಚನೆ ಮಾಡಿದ್ದಾರೆಂದು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com