ದೆಹಲಿಯಲ್ಲಿ ಮಟ್ಟ ಮಂಜು: ರಸ್ತೆ ಕಾಣದೆ ಕಣಿವೆಗೆ ಉರುಳಿ ಬಿದ್ದ ಕಾರು- 6 ಮಂದಿ ದುರ್ಮರಣ

ರಾಜಧಾನಿ ದೆಹಲಿಯಲ್ಲಿ ಮಂಜು ಆವರಿಸಿದ್ದು, ಮಂಜು ಕವಿತ ವಾತಾವರಣ ಹಿನ್ನೆಲೆಯಲ್ಲಿ ರಸ್ತೆ ಕಾಣದ ಕಾರಣ ಚಲಿಸುತ್ತಿದ್ದ ಕಾರೊಂದು ಕಣಿವೆಗೆ ಉರುಳಿ ಬಿದ್ದು, 6 ಮಂದಿ ದುರ್ಮರಣವನ್ನಪ್ಪಿರುವ ಘಟನೆ ನಡೆದಿದೆ.

Published: 30th December 2019 11:40 AM  |   Last Updated: 30th December 2019 11:40 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಮಂಜು ಆವರಿಸಿದ್ದು, ಮಂಜು ಕವಿತ ವಾತಾವರಣ ಹಿನ್ನೆಲೆಯಲ್ಲಿ ರಸ್ತೆ ಕಾಣದ ಕಾರಣ ಚಲಿಸುತ್ತಿದ್ದ ಕಾರೊಂದು ಕಣಿವೆಗೆ ಉರುಳಿ ಬಿದ್ದು, 6 ಮಂದಿ ದುರ್ಮರಣವನ್ನಪ್ಪಿರುವ ಘಟನೆ ನಡೆದಿದೆ. 

ದೆಹಲಿ ಹೊರವಲಯದ ಗ್ರೇಟರ್ ನೋಯ್ಡಾದಲ್ಲಿ ದುರ್ಘಟನೆ ತಡರಾತ್ರಿ ಸಂಭವಿಸಿದೆ. ಕಾರಿನಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರೆಂದು ತಿಳಿದುಬಂದಿದೆ. 

ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 5 ಮಂದಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಂಜು ಕವಿದ ವಾತಾವರ ಹಿನ್ನಲೆಯಲ್ಲಿ 30 ರೈಲುಗಳ ಸಂಚಾರ ವ್ಯತ್ಯಯವಾಗಿದ್ದು,3 ವಿಮಾನಗಳ ಮಾರ್ಗಗಳನ್ನು ಬದಲಿಸಲಾಗಿದೆ.ವಿಚಾರಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಮುಂದಿನ ಎರಡು ದಿನಗಳ ವರೆಗೂ ಉತ್ತರ ಭಾರತದಲ್ಲಿ ಚಳಿ ಹೀಗೆಯೇ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp