ಒಳ್ಳೆ ಸುದ್ದಿ: ಭಾರತದ ಒಟ್ಟಾರೆ ಅರಣ್ಯ ಭೂಮಿಯಲ್ಲಿ ಗಣನೀಯ ಹೆಚ್ಚಳ

ಜಾಗತಿಕ ತಾಪಮಾನ ಏರಿಕೆ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಒತ್ತುವರಿಯಂತಹ ಗಂಭೀರ ಸಮಸ್ಯೆಗಳ ನಡುವೆಯೂ ಭಾರತದ ಒಟ್ಟಾರೆ ಅರಣ್ಯ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಾಗತಿಕ ತಾಪಮಾನ ಏರಿಕೆ, ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಒತ್ತುವರಿಯಂತಹ ಗಂಭೀರ ಸಮಸ್ಯೆಗಳ ನಡುವೆಯೂ ಭಾರತದ ಒಟ್ಟಾರೆ ಅರಣ್ಯ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ.

ಈ ಕುರಿತಂತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಮಾಹಿತಿ ನೀಡಿದ್ದು, ಭಾರತದ ಒಟ್ಟಾರೆ ಅರಣ್ಯ ಪ್ರದೇಶದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿದೆ ಎಂದು ಹೇಳಿದರು.

ಅರಣ್ಯ ಭೂಮಿಗೆ ಸಂಬಂಧಿಸಿದ 'ದಿ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2019' ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, 'ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಒಟ್ಟಾರೆ ಮರಗಳು ಮತ್ತು ಅರಣ್ಯ ಹೊದಿಕೆಯ ಭೂ ಪ್ರದೇಶ ಗಣನೀಯ ಪ್ರಮಾಣ ಏರಿಕೆಯಾಗಿದ್ದು, ಮಾಹಿತಿ ಅನ್ವಯ ಒಟ್ಟು 5,188 ಸ್ಕ್ವೇರ್ ಕಿಮೀ ಅರಣ್ಯ ಭೂ ಪ್ರದೇಶ ಹೆಚ್ಚಳವಾಗಿದೆ ಎಂದು ಹೇಳಿದರು.

ಈ ಪೈಕಿ ಈಶಾನ್ಯ ಭಾರತದ ಅರಣ್ಯ ಪ್ರದೇಶಗಳಲ್ಲಿ ಅತೀ ಹೆಚ್ಚು ಅಂದರೆ 765 ಸ್ಕ್ವೇರ್ ಕಿಮೀ ಅರಣ್ಯ ಭೂ ಪ್ರದೇಶ ಹೆಚ್ಚಳವಾಗಿದೆ. ಆ ಮೂಲಕ ಪ್ಯಾರಿಸ್ ಒಪ್ಪಂದವನ್ನು ಸಾಧಿಸುವತ್ತ ನಾವು ದಾಪುಗಾಲಿರಿಸಿದ್ದೇವೆ ಎಂದು ಹೇಳಿದರು. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಅಸ್ಸಾಂ ಮತ್ತು ತ್ರಿಪುರಾದಲ್ಲಿ ಅರಣ್ಯ ಭೂಪ್ರದೇಶದ ಪ್ರಮಾಣ ಇಳಿಕೆಯಾಗಿದ್ದು, ಈ ಹಿಂದಿನ ದತ್ತಾಂಶಗಳಿಗೆ ಹೋಲಿಕೆ ಮಾಡಿದರೆ ಮ್ಯಾಂಗ್ರೋವ್ ಕಾಡಿನ ಪ್ರಮಾಣ 54 ಸ್ಕ್ವೇರ್ ಕಿಮೀ (ಶೇ.1.10 ರಷ್ಚು) ಹೆಚ್ಚಳವಾಗಿದೆ ಎಂದು ಜಾವಡೇಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com