ದೇಶವನ್ನು ಬೆಂಬಿಡದೆ ಕಾಡಿದ ಮಳೆ, ಪ್ರವಾಹ,  ಹವಾಮಾನ ವೈಪರೀತ್ಯ...!!

ಈ ವರ್ಷ  ಹವಾಮಾನ ವೈಪರೀತ್ಯ ದೇಶವನ್ನೂ  ಬೆಂಬಿಡದೆ ಕಾಡಿದೆ ಅನೇಕ ಸಾವು  ನೋವು ತಂದಿದೆ  ಜನತೆ ಮರೆಯಾಗದ ಕಷ್ಟ, ನಷ್ಟ ಅನುಭವಿಸುವಂತೆ ಮಾಡಿದೆ. ಅದರಲ್ಲೂ   ಕರ್ನಾಟಕ ಜನತೆ ನಲಿವಿಗಿಂತ ಹೆಚ್ಚಾಗಿ ನೋವನ್ನೆ ಉಂಡರು. 22 ಜಿಲ್ಲೆಗಳು  ಮಳೆ, ಪ್ರವಾಹಕ್ಕೆ ಸಿಕ್ಕಿ  ನಲುಗಿ ಹೋಯಿತು . 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 2019 ಕ್ಕೆ ವಿದಾಯ ಹೇಳಿ ಹೊಸ ವರ್ಷದ ಸ್ವಾಗತಕ್ಕೆ  ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. 

ಈ ವರ್ಷ  ಹವಾಮಾನ ವೈಪರೀತ್ಯ ದೇಶವನ್ನೂ  ಬೆಂಬಿಡದೆ ಕಾಡಿದೆ ಅನೇಕ ಸಾವು  ನೋವು ತಂದಿದೆ  ಜನತೆ ಮರೆಯಾಗದ ಕಷ್ಟ, ನಷ್ಟ ಅನುಭವಿಸುವಂತೆ ಮಾಡಿದೆ. ಅದರಲ್ಲೂ   ಕರ್ನಾಟಕ ಜನತೆ ನಲಿವಿಗಿಂತ ಹೆಚ್ಚಾಗಿ ನೋವನ್ನೆ ಉಂಡರು. 22 ಜಿಲ್ಲೆಗಳು  ಮಳೆ, ಪ್ರವಾಹಕ್ಕೆ ಸಿಕ್ಕಿ  ನಲುಗಿ ಹೋಯಿತು .  

ಜುಲೈ ಮಾಸ ಇದುವರೆಗೆ ದಾಖಲಾದ ಅತಿ ಹೆಚ್ಚು  ಬೇಸಿಗೆ ತಾಪ ನೀಡಿತು, ಮಳೆ, ಪ್ರವಾಹವೂ  ಚೆನ್ನಾಗಿಯೇ ಕಾಡಿ,  ಜನರನ್ನು ಮುರಾಬಟ್ಟೆಯಾಗಿ ಮಾಡಿದೆ.  ಮೇಲಾಗಿ  ಪದೆಪದೇ ಕಾಡಿನ ಬೆಂಕಿ ಘಟನೆ ಮೇಲಿಂದ ಮೇಲೆ   ಹೆಚ್ಚಾಯಿತು  ಏಳು ಚಂಡಮಾರುತ ಮತ್ತು ಅದರ ಅನಾಹುತವನ್ನು  ದೇಶ ಅನುಭವಿಸಿತು. 

ಈ ವಿಪರೀತ ಹವಾಮಾನ ಘಟನೆಗಳು 2019 ರ ಮೊದಲ ಆರು ತಿಂಗಳಲ್ಲಿ ಸುಮಾರು 2.17 ದಶಲಕ್ಷ ಜನರನ್ನು ಸ್ಥಳಾಂತರ ಮಾಡಿಬಿಟ್ಟಿತು . ಚಂಡಮಾರುತ ಮತ್ತು ಪ್ರವಾಹದಿಂದ ಜನರು ತಮ್ಮ  ಮನೆ ಮಠ, ಬಿಟ್ಟು ಅನೇಕ ಸಮಯದ ಬೇರೆ  ಕಡೆ ವಾಸ ಮಾಡುವ  ದಾರುಣ ಸ್ಥಿತಿ  ನಿರ್ಮಾಣವಾಗಿ ಪಡಬಾರದ  ಕಷ್ಟ ಪಡುವಂತಾಯಿತು.

ಹವಾಮಾನ ವೈಪರೀತ್ಯದಿಂದಾಗಿ ಹೆಚ್ಚಿನ ಸಾವು, ನೋವು  ಸಂಭವಿಸಿದ್ದು, ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಭಾರತವು 181 ದೇಶಗಳಲ್ಲಿ ಐದನೇ ಹೆಚ್ಚು ದುರ್ಬಲ ದೇಶ  ಎಂದು ಪರಿಗಣಿಸಲ್ಪಟ್ಟಿತು.

2019ರಲ್ಲಿ ಸಂಭವಿಸಿದ ಪ್ರಮುಖ ನೈಸರ್ಗಿಕ ವಿಕೋಪಗಳಲ್ಲಿ ಪ್ರಮುಖವಾದದ್ದು ಬಿಹಾರ ಪ್ರವಾಹ.
ಜುಲೈ ಅಂತ್ಯದಲ್ಲಿ ಆರಂಭವಾದ ಪ್ರವಾಹಕ್ಕೆ ಒಟ್ಟು 13 ಜಿಲ್ಲೆಗಳು ತುತ್ತಾಗಿದ್ದವು. ಅರೇರಿಯಾ, ಕಿಶನ್‌ಗಂಜ್, ಮಧುಬನಿ, ಪೂರ್ವ ಚಂಪಾರಣ್, ಸೀತಮಾರ್ಹಿ, ಶಿಯೋಹರ್, ಸುಪಾಲ್, ದರ್ಭಂಗ, ಮುಜಾಫರ್ಪುರ್, ಸಹರ್ಸಾ, ಕತಿಹಾರ್, ಪಶ್ಚಿಮ ಚಂಪಾರಣ್ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದವು. ಪ್ರವಾಹದಲ್ಲಿ ಒಟ್ಟು 140 ಮಂದಿ ಬಲಿಯಾಗಿ, 88.46 ಲಕ್ಷ ಮಂದಿ ನಿರಾಶ್ರಿತರಾಗಿದ್ದರು.

ಕರ್ನಾಟಕ ಪ್ರವಾಹ 
ಜುಲೈ ತಿಂಗಳನಲ್ಲಿ ಕರ್ನಾಟಕದಲ್ಲಿ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಭಾರಿ ಮಳೆಯಾಗಿತ್ತು. ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಹ ಸಂಭವಿಸಿತ್ತು. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸುಮಾರು 24 ಮಂದಿ ಸಾವನ್ನಪ್ಪಿದ್ದರು. 2,00,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಯಿತು ಮತ್ತು 2200 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 

ಆಗಸ್ಟ್‌ 3ರಿಂದ 11ವರೆಗೆ, ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ ತಲಾ ಒಂದು ವಾರ ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹ, ಬೆಳೆಹಾನಿ, ಆಸ್ತಿ ನಷ್ಟ. ಒಟ್ಟು 137 ಜನರ ಸಾವು, ಸುಮಾರು 10.80 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ, 1.03 ಲಕ್ಷ ಮನೆಗಳಿಗೆ ಹಾನಿ. 

ಬಂಡೀಪುರದಲ್ಲಿ ಕಾಡ್ಗಿಚ್ಚು
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಫೆ 23ರಂದು ಸಂಭವಿಸಿದ್ದ ಕಾಡ್ಗಿಚ್ಚಿಗೆ ಸುಮಾರು 11,500 ಎಕರೆ ಕಾಡು ಭಸ್ಮವಾಗಿತ್ತು. ಸೇನೆಯ ನೆರವಿನಿಂದ ಬೆಂಕಿ ಶಮನಗೊಳಿಸಲಾಗಿತ್ತು.

ಜೂನ್‌ 17: ಬಿಸಿಗಾಳಿಗೆ ಸಾವು
ಬಿಹಾರದಲ್ಲಿ ಬಿಸಿಗಾಳಿಗೆ 52 ಜನ ಬಲಿಯಾಗಿದ್ದರು. ಅಲ್ಲಿ ಉಷ್ಣಾಂಶ 45.8 ಡಿಗ್ರಿ ಸೆಲ್ಸಿಯಸ್‌ ದಾಟಿತ್ತು.

ಜುಲೈ 2: ಮಹಾಮಳೆಗೆ ನಲುಗಿದ ಮುಂಬೈ, 35 ಮಂದಿ ಬಲಿಯಾಗಿದ್ದರು

ಜುಲೈ 3: ಪ್ರವಾಹ
ಮಹಾರಾಷ್ಟ್ರದ 7 ಗ್ರಾಮಗಳಲ್ಲಿ ಪ್ರವಾಹ, ರತ್ನಗಿರಿ ಜಿಲ್ಲೆಯ ತಿವರೆ ಅಣೆಕಟ್ಟು ಒಡೆದು 11ಮಂದಿ ಸಾವು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com