“#ಇಂಡಿಯಾ ಸಪೋರ್ಟ್ಸ್ ಸಿಎಎ”: ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ ಪ್ರಧಾನಿ ಮೋದಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಾದ್ಯಂತ ತೀವ್ರ ವಿರೋಧ ಹಾಗೂ ಆಕ್ರೋಶಗಳು ವ್ಯಕ್ತವಾಗುತ್ತಿರುವ ನಡುವಲ್ಲೆ ಕಾಯ್ದೆಗೆ ಬೆಂಬಲ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. 
ಮೋದಿ
ಮೋದಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಾದ್ಯಂತ ತೀವ್ರ ವಿರೋಧ ಹಾಗೂ ಆಕ್ರೋಶಗಳು ವ್ಯಕ್ತವಾಗುತ್ತಿರುವ ನಡುವಲ್ಲೆ ಕಾಯ್ದೆಗೆ ಬೆಂಬಲ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಯಾನ ಆರಂಭಿಸಿರುವ ಪ್ರಧಾನಿ ಮೋದಿಯವರು, ಹ್ಯಾಷ್ ಟ್ಯಾಗ್ ಮೂಲಕ ಇಂಡಿಯಾ ಸಪೋರ್ಟ್ಸ್ ಸಿಟಿಜೆನ್'ಶಿಫ್ ಅಮೆಂಡ್ಮೆಂಟ್ ಆ್ಯಕ್ಟ್ ಎಂದು ಅಭಿಯಾನ ಆರಂಭಿಸಿದ್ದಾರೆ. 

ಅಭಿಯಾನದ ಟ್ವೀಟ್'ನೊಂದಿಗೆ ಪೌರತ್ವ ಕಾಯ್ದೆ ಎಂದರೇನು ಎಂಬುದನ್ನು ಕೆಲ ಪದಗಳಲ್ಲಿ ವಿವರಿಸಿದ್ದಾರೆ. ಭಾರತ ಪೌರತ್ವ ಕಾಯ್ದೆಯನ್ನು ಬೆಂಬಲಿಸುತ್ತದೆ. ಏಕೆಂದರೆ, ಕಾಯ್ದೆಯು ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವುದರ ಬಗ್ಗೆಯೇ ಹೊರತು ಯಾರ ಪೌರತ್ವವನ್ನೂ ಕಸಿದುಕೊಳ್ಳುವ ಬಗ್ಗೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ನಮೋ ಆ್ಯಪ್ ನಲ್ಲಿ  ಈ ಹ್ಯಾಶ್ ಟ್ಯಾಗ್ ಅನ್ನು ನಿಮ್ಮ ಸ್ವಯಂ ಮಾದರಿಯ ವಾಯ್ಸ್ ಸೆಕ್ಷನ್ ನಲ್ಲಿ ಕಂಟೆಂಟ್, ಗ್ರಾಫಿಕ್ಸ್, ವೀಡಿಯೋ ಅನ್ನು ಶೇರ್ ಮಾಡಿ ಮತ್ತು ಸಿಎಎಗೆ ನಿಮ್ಮ ಬೆಂಬಲ ನೀಡಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com