ಯುಪಿ: ಸಿಎಎ ವಿರುದ್ಧದ ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿಗೆ ಹಾನಿ, 59ಕ್ಕೂ ಹೆಚ್ಚು ಜನರಿಗೆ ನೋಟಿಸ್ 

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಆರೋಪಕ್ಕೆ  ಸಂಬಂಧಿಸಿದಂತೆ  ಉತ್ತರ ಪ್ರದೇಶದ ಸಂಬಲ್ ಜಿಲ್ಲಾಡಳಿತ 59ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

Published: 30th December 2019 08:04 PM  |   Last Updated: 30th December 2019 08:06 PM   |  A+A-


Casualphoto1

ಸಾಂದರ್ಭಿಕ ಚಿತ್ರ

Posted By : Nagaraja AB
Source : PTI

ಸಂಬಲ್ : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಆರೋಪಕ್ಕೆ  ಸಂಬಂಧಿಸಿದಂತೆ  ಉತ್ತರ ಪ್ರದೇಶದ ಸಂಬಲ್ ಜಿಲ್ಲಾಡಳಿತ 59ಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

ಪ್ರತಿಭಟನೆಯಿಂದಾದ ಸುಮಾರು 15. 35 ಲಕ್ಷ ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಸಂಬಂಧಿಸಿದಂತೆ 59 ಜನರ ವಿರುದ್ಧ ನೋಟಿಸ್ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಮಲೇಶ್ ಅವಾಸ್ತಿ ಸ್ಪಷ್ಟಪಡಿಸಿದ್ದಾರೆ.

ನೋಟಿಸ್ ಕಳುಹಿಸಲಾಗಿದೆ. ಅವರು ಉತ್ತರಿಸಿಬೇಕಾಗಿದೆ.  ಪ್ರತಿಯೊಬ್ಬರಿಗೂ ಸಂಪೂರ್ಣ ವಿಚಾರಣೆಯ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿಂಸಾಚಾರದ ವೇಳೆಯಲ್ಲಿ ಬಸ್ ವೊಂದನ್ನು ಸುಟ್ಟುಹಾಕಲಾಗಿದೆ. ಸುಮಾರು 15. 25 ಲಕ್ಷದಷ್ಟು ಸಾರ್ವಜನಿಕ ಆಸ್ತಿ ಹಾನಿಯಾಗಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಿಡಿಯೋ ದೃಶ್ಯಾವಳಿಗಳು, ಸಿಸಿಟಿವಿ ಪೂಟೇಜ್ ಮತ್ತು ಛಾಯಾಚಿತ್ರಗಳ ಆಧಾರದ ಮೇಲೆ 59 ಜನರನ್ನು ಕಂಡುಹಿಡಿಯಲಾಗಿದೆ.  ಸರ್ಕಾರಿ ಆಸ್ತಿ ಹಾನಿಯನ್ನು ಅವರಿಂದ ಭರಿಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. 

ಡಿಸೆಂಬರ್ 19 ರಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಿದ್ದರೂ ಅಮಾಯಕರಾಗಿರುವ ನನಗೆ ನೋಟಿಸ್ ಕಳುಹಿಸಲಾಗಿದೆ ಎಂದು ಅಸಾನ್ ಅಬ್ದುಲ್ಲಾ , ಸೈಯದ್ ಮತ್ತಿತರರು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp