ಭೂ ಸೇನಾ ಮುಖ್ಯಸ್ಥರಾಗಿ ಲೆ.ಜ.ಮನೋಜ್ ಮುಕುಂದ್ ನರವಾಣೆ ಅಧಿಕಾರ ಸ್ವೀಕಾರ

ಭಾರತೀಯ ಸೇನಾಪಡೆಯ ನೂತನ ಮುಖ್ಯಸ್ಥರಾಗಿ ಲೆ.ಜ.ಮನೋಜ್ ಮುಕುಂದ್ ನರವಾಣೆಯವರು ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. 

Published: 31st December 2019 12:42 PM  |   Last Updated: 31st December 2019 12:42 PM   |  A+A-


General Manoj Naravane takes charge as 28th chief of Indian Army

ಭೂ ಸೇನಾ ಮುಖ್ಯಸ್ಥರಾಗಿ ಲೆ.ಜ.ಮನೋಜ್ ಮುಕುಂದ್ ನರವಾಣೆ ಅಧಿಕಾರ ಸ್ವೀಕಾರ

Posted By : Manjula VN
Source : ANI

ನವದೆಹಲಿ: ಭಾರತೀಯ ಸೇನಾಪಡೆಯ ನೂತನ ಮುಖ್ಯಸ್ಥರಾಗಿ ಲೆ.ಜ.ಮನೋಜ್ ಮುಕುಂದ್ ನರವಾಣೆಯವರು ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. 

ಹಾಲಿ ಸೇನಾ ಮುಖ್ಯಸ್ಥ ಜ.ರಾವತ್ ಮಂಗಳವಾರ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಲೆ.ಜ.ಮನೋಜ್ ನೇಮಕಗೊಂಡಿದ್ದಾರೆ. 

ಸೇನೆಯಲ್ಲಿ 37 ವರ್ಷ ಸೇವೆಯ ಅನುಭವ ಹೊಂದಿರುವ ಲೆ.ಜ.ಮನೋಜ್ ಈ ಅವಧಿಯಲ್ಲಿ ಚೀನಾ ಗಡಿ, ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಮಹತ್ವದ ಹುದ್ದೆ ನಿರ್ವಹಿಸಿದ್ದಾರೆ. ಇವರಿಗೆ ಈಗಾಗಲೇ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಠ ಸೇವಾ ಪದಕಗಳು ಸಂದಿವೆ. 

ನರವಾಣೆಯವರು ಸೇನಾಯ ಉಪ ಮುಖ್ಯಸ್ಥರಾಗುವುದಕ್ಕೂ ಮುನ್ನ ಕೋಲ್ಕತಾದಲ್ಲಿ ಪ್ರಧಾನ ಕಚೇರಿಯಿರುವ ಭೂಸೇನೆಯ ಪೂರ್ವ ಕಮಾಂಡ್'ನ ಕಮಾಂಡರ್ ಆಗಿದ್ದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನುಸುಳುಕೋರರ ವಿರುದ್ಧ ಕಾರ್ಯಾಚರಣೆಗಳ ತಂತ್ರದ ರೂವಾರಿಯಾಗಿದ್ದರು. 

Stay up to date on all the latest ರಾಷ್ಟ್ರೀಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp