2020ರಲ್ಲಿ ಭಾರತದ ಮೂರನೇ ಚಂದ್ರಯಾನ: ಕೇಂದ್ರ ಸಚಿವ ಜಿತೇಂದರ್ ಸಿಂಗ್

2020ರಲ್ಲಿ ಭಾರತವು ಮೂರನೇ ಚಂದ್ರಯಾನವನ್ನು ಆರಂಭಿಸಲಿದೆ ಎಂದು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್​ ಮಾಹಿತಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: 2020ರಲ್ಲಿ ಭಾರತವು ಮೂರನೇ ಚಂದ್ರಯಾನವನ್ನು ಆರಂಭಿಸಲಿದೆ ಎಂದು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್​ ಮಾಹಿತಿ ನೀಡಿದ್ದಾರೆ.

ಸಂಸತ್ತ್ ಕಲಾಪದಲ್ಲಿ ಈ ಕುರಿತಂತೆ ಲಿಖಿತ ಉತ್ತರ ನೀಡಿದ ಸಚಿವ ಜಿತೇಂದ್ರ ಸಿಂಗ್ ಅವರು, 2020ರಲ್ಲಿ ಭಾರತವು ಮೂರನೇ ಚಂದ್ರಯಾನವನ್ನು ಆರಂಭಿಸಲಿದೆ. ಚಂದ್ರಯಾನ- 3 ರಲ್ಲಿ ಲ್ಯಾಂಡರ್​ ಮತ್ತು ರೋವರ್​ಗಳು ಈ ಬಾರಿ ಮೃದುವಾಗಿ ಚಂದ್ರನ ಮೇಲೆ ಇಳಿಯಲಿವೆ ಎಂದು ಹೇಳಿದರು.

'ಚಂದ್ರಯಾನ -2ರಲ್ಲಿ ನಾವು ಸೋತಿಲ್ಲ. ಅದರಿಂದ ನಾವು ತುಂಬ ಕಲಿತಿದ್ದೇವೆ. ಪ್ರಪಂಚದಲ್ಲಿ ಯಾವ ದೇಶವೂ ಮೊದಲ ಬಾರಿಗೆ ಚಂದ್ರನ ಮೇಲೆ ಇಳಿದಿಲ್ಲ. ಅಮೆರಿಕ ದೇಶ ಕೂಡ ಸಾಕಷ್ಟು ಬಾರಿ ಪ್ರಯತ್ನಿಸಿದೆ. ಆದರೆ ನಮಗೆ ಅಷ್ಟು ಪ್ರಯತ್ನಗಳು ಬೇಕಾಗಿಲ್ಲ.  ಚಂದ್ರಯಾನ 2 ಭಾರತದ ಮೊದಲ ಪ್ರಯತ್ನವಾಗಿತ್ತು. ಚಂದ್ರನನ್ನು ತಲುಪಲು ಕೇವಲ 2.1 ಕಿಲೋ ಮೀಟರ್​ ಅಂತರದಲ್ಲಿ ಕೈ ತಪ್ಪಿತು. ಸೆಪ್ಟೆಂಬರ್​ 7ರಂದು ನಿಗದಿತ ಸ್ಥಳದಿಂದ 500 ಮೀಟರ್​ಗಳ ಅಂತರದಲ್ಲಿ ವಿಕ್ರಮ್​ ಲ್ಯಾಂಡರ್​ ಕೈ ತಪ್ಪಿತು. ವಿಕ್ರಮ್​ ಲ್ಯಾಂಡರ್​ ಹಾರ್ಡ್​ ಲ್ಯಾಂಡ್​ ಆಗಿದ್ದನ್ನು ಅಧಿಕಾರಿಗಳ ದೃಢಪಡಿಸಿದ್ದಾರೆ ಎಂದು ಸಚಿವ ಜಿತೇಂದ್ರ ಸಿಂಗ್​ ತಿಳಿಸಿದರು.

ಅಂತೆಯೇ 'ನಾವು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದರೆ ವಿಶ್ವದ ನಾಲ್ಕನೇ ದೇಶವಾಗಿ ಹೊರ ಹೊಮ್ಮಲಿದ್ದೇವೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಯುಎಸ್​ಎಸ್​ಆರ್​ ಮತ್ತು ಚೀನಾಗಳು ಈಗಾಗಲೇ ಇಳಿದ ದೇಶಗಳಾಗಿವೆ. ಈ ಬಾರಿ ಲ್ಯಾಂಡರ್​ನ ವೇಗವನ್ನು ಕಡಿಮೆಗೊಳಿಸಲಾಗುವುದು. ಲ್ಯಾಂಡರ್​ನ ವೇಗವನ್ನು 1683 ಮೋಟರ್​ಶಿಪ್​ ವೇಗದಿಂದ 146 ಮೋಟರ್​ಶಿಪ್​ ವೇಗಕ್ಕೆ ತಗ್ಗಿಸಲಾಗುವುದು ಎಂದು ಸಚಿವ ಜಿತೇಂದರ್ ಸಿಂಗ್ ಸಂಸತ್ ಗೆ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com