ಜೆ ಕೆ ಲೊನಾ ಆಸ್ಪತ್ರೆಯ ಅವ್ಯವಸ್ಥೆಯೇ ನವಜಾತ ಶಿಶುಗಳ ಸಾವಿಗೆ ಕಾರಣ: ವರದಿ 

ರಾಜಸ್ತಾನದ ಕೊಟಾದ ಜೆ ಕೆ ಲೊನ್ ಆಸ್ಪತ್ರೆಯಲ್ಲಿ ಈ ವರ್ಷ ಒಟ್ಟಾರೆ 940 ಮಕ್ಕಳು ಮೃತಪಟ್ಟಿದ್ದು ಇದಕ್ಕೆ ಆಸ್ಪತ್ರೆಯ ಅವ್ಯವಸ್ಥೆಯೇ ಕಾರಣ ಎಂದು ಮಕ್ಕಳ ಹಕ್ಕುಗಳ ಕೇಂದ್ರ ಸಮಿತಿ ಎನ್ ಸಿಪಿಸಿಆರ್ ತಪಾಸಣೆ ನಡೆಸಿ ಹೇಳಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಟಾ: ರಾಜಸ್ತಾನದ ಕೊಟಾದ ಜೆ ಕೆ ಲೊನ್ ಆಸ್ಪತ್ರೆಯಲ್ಲಿ ಈ ವರ್ಷ ಒಟ್ಟಾರೆ 940 ಮಕ್ಕಳು ಮೃತಪಟ್ಟಿದ್ದು ಇದಕ್ಕೆ ಆಸ್ಪತ್ರೆಯ ಅವ್ಯವಸ್ಥೆಯೇ ಕಾರಣ ಎಂದು ಮಕ್ಕಳ ಹಕ್ಕುಗಳ ಕೇಂದ್ರ ಸಮಿತಿ ಎನ್ ಸಿಪಿಸಿಆರ್ ತಪಾಸಣೆ ನಡೆಸಿ ಹೇಳಿದೆ.


ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ತಂಡದ ಅಧ್ಯಕ್ಷೆ ಪ್ರಿಯಾಂಕ ಕನೂಂಗೊ ನೇತೃತ್ವದ ತಂಡ ಆಸ್ಪತ್ರೆಗೆ ಭೇಟಿ ನೀಡಿ ತಪಾಸಣೆ ನಡೆಸಿ ರಾಜಸ್ತಾನ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವೈಭವ್ ಗಲ್ಟಿಯಾ ಅವರಿಗೆ ಶೋಕಾಸ್ ನೊಟೀಸ್ ಜಾರಿ ಮಾಡಿದ್ದು ತಾವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದೆ.


ಆಸ್ಪತ್ರೆಯ ಕಿಟಕಿಗಳು ಸರಿಯಾಗಿಲ್ಲ, ಗೇಟುಗಳು ಮುರಿದುಹೋಗಿವೆ. ಸರಿಯಾಗಿ ಗಾಳಿ, ಬೆಳಕಿನ ವ್ಯವಸ್ಥೆಯಿಲ್ಲ, ನಜವಾತ ಶಿಶುಗಳು ಹವಾಮಾನ ಪರಿಸ್ಥಿತಿಗೆ ಸಿಲುಕಿ ಮತ್ತು ಸೊಳ್ಳೆ, ಕ್ರಿಮಿ-ಕೀಟಗಳ ಕಾಟಕ್ಕೆ ಬಲಿಯಾಗುತ್ತಾರೆ, ಆಸ್ಪತ್ರೆಯ ನಿರ್ವಹಣೆ ಸರಿಯಾಗಿಲ್ಲ ಎಂದು ಕನೂಂಗೊ ತಿಳಿಸಿದ್ದಾರೆ.


ಇನ್ನು, ಜೆ ಕೆ ಲೋನ್ ಆಸ್ಪತ್ರೆಯಲ್ಲಿ ಕಳೆದ 5 ದಿನಗಳಲ್ಲಿ ಮೃತಪಟ್ಟ ಶಿಶುಗಳ ಸಂಖ್ಯೆ 19ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
6 ಮಂದಿ ನವಜಾತ ಶಿಶುಗಳು ಸೇರಿದಂತೆ 14 ಶಿಶುಗಳು ಮೊನ್ನೆ ಡಿಸೆಂಬರ್ 25ರಿಂದ ಮೊನ್ನೆ 29ರವರೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ನೂತನ ಸೂಪರಿಂಟೆಂಡೆಂಟ್ ಸುರೇಶ್ ದುಲಾರಾ ತಿಳಿಸಿದ್ದಾರೆ.


ಇದಕ್ಕೂ ಮುನ್ನ ಡಿಸೆಂಬರ್ 23 ಮತ್ತು 24ರಂದು ಶಿಶುಗಳು ಹುಟ್ಟಿದ 48 ಗಂಟೆಗಳೊಳಗೆ 77 ಶಿಶುಗಳು ಮೃತಪಟ್ಟಿವೆ ಎಂದು ಅವರು ಹೇಳಿದರು. ಇಷ್ಟೊಂದು ಸಂಖ್ಯೆಯಲ್ಲಿ ಶಿಶುಗಳು ಮೃತಪಡಲು ಕಾರಣವೇನೆಂಬುದರ ಬಗ್ಗೆ ಕಾರಣ ತಿಳಿಯುತ್ತಿದ್ದೇವೆ ಎಂದು ಸಹ ಅವರು ತಿಳಿಸಿದರು.


ಮೃತಪಟ್ಟ14 ಶಿಶುಗಳಲ್ಲಿ, ನಾಲ್ವರು ತೀವ್ರ ನ್ಯುಮೋನಿಯಾಗೆ, ಒಬ್ಬರು ಮೆನಿಂಗೊಎನ್ಸೆಫಾಲಿಟಿಸ್ ಗೆ, ನಾಲ್ಕು ಶಿಶುಗಳು ಜನ್ಮಜಾತ ನ್ಯುಮೋನಿಯಾಕ್ಕೆ, ಮೂರು ನ್ಯೂಮ್ಯಾಟಿಕ್ ಸೆಪ್ಟಿಸೆಮಿಯಾಕ್ಕೆ ಮತ್ತು ಒಂದು ಮಗು ಉಸಿರಾಟದ ತೊಂದರೆಗೆ ಬಲಿಯಾಯಿತು ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಅಮೃತ್ ಲಾಲ್ ಬೈರ್ವಾ ತಿಳಿಸಿದ್ದಾರೆ.


ಡಾ ಅಮರ್ಜೀತ್ ಮೆಹ್ತಾ, ಡಾ ರಂಬಾಬು ಶರ್ಮ ಮತ್ತು ಡಾ ಸುನಿಲ್ ಭಟ್ನಾಗರ್ ಅವರನ್ನೊಳಗೊಂಡ ತಂಡ ಶಿಶುಗಳ ಸಾವಿನ ಬಗ್ಗೆ ತನಿಖೆ ನಡೆಸಿ ಇನ್ನೆರಡು ದಿನಗಳಲ್ಲಿ ವರದಿ ಸಲ್ಲಿಸಲಿದೆ ಎಂದು ರಾಜಸ್ತಾನ ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ವೈಭವ್ ಗಲರಿಯಾ ತಿಳಿಸಿದ್ದಾರೆ.


ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಶಿಶುಗಳ ಸಾವಿನ ಬಗ್ಗೆ ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ನಾಲ್ವರು ಸಂಸದರನ್ನೊಳಗೊಂಡ ಸಮಿತಿ ತನಿಖೆ ನಡೆಸಲಿದೆ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com