ರಕ್ಷಣಾ ಪಡೆ ಮುಖ್ಯಸ್ಥರಾಗಿ ಜ.ಬಿಪಿನ್ ರಾವತ್ ನೇಮಕವನ್ನು ಪ್ರಶ್ನಿಸಿದ ಕಾಂಗ್ರೆಸ್ 

ದೇಶದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರನ್ನು ನೇಮಕಾತಿ ಮಾಡುವ ಮೂಲಕ ಸರ್ಕಾರ ತಪ್ಪು ಹಾದಿ ಇಟ್ಟಿದೆ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಆರೋಪಿಸಿದ್ದಾರೆ.  
ಜ.ಬಿಪಿನ್ ರಾವತ್
ಜ.ಬಿಪಿನ್ ರಾವತ್

ನವದೆಹಲಿ: ದೇಶದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರನ್ನು ನೇಮಕಾತಿ ಮಾಡುವ ಮೂಲಕ ಸರ್ಕಾರ ತಪ್ಪು ಹಾದಿ ಇಟ್ಟಿದೆ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಆರೋಪಿಸಿದ್ದಾರೆ. 


ದೇಶವು ಸ್ಪಷ್ಟವಾದ ಹಾದಿಯಲ್ಲಿ ಸಾಗುತ್ತಿದೆಯೇ ಎಂದು ಪ್ರಶ್ನೆ ಮಾಡಿರುವ ಅವರು, ಇದಕ್ಕೆ ಕಾಲವೇ ಉತ್ತರಿಸಬೇಕು ಎಂದಿದ್ದಾರೆ. ತೀವ್ರ ವಿಷಾದ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಹೇಳುತ್ತಿದ್ದೇನೆ ಸರ್ಕಾರ ಸಿಡಿಎಸ್ ಗೆ ಮುಖ್ಯಸ್ಥರ ನೇಮಕ ಮಾಡುವ ವಿಚಾರದಲ್ಲಿ ತಪ್ಪು ಹಾದಿ ಇಟ್ಟಿದೆ. ಈ ನಿರ್ಧಾರದಿಂದ ಮುಂದೆ ಏನೇನು ತೊಂದರೆಯಾಗುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.


ಸಿಡಿಎಸ್ ನೇಮಕ ವಿಚಾರದಲ್ಲಿ ಹಲವು ಅಸ್ಪಷ್ಟತೆಗಳಿವೆ. ಸರ್ಕಾರಕ್ಕೆ ನೀಡಲಾದ ಮಿಲಿಟರಿ ಸಲಹೆಯ ವಿಷಯದಲ್ಲಿ ಮೂರು ಸೇನಾಪಡೆಯ ಮುಖ್ಯಸ್ಥರಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರ ನೇಮಕಾತಿಯಲ್ಲಿ ಪ್ರಧಾನ ಮಿಲಿಟರಿ ಸಲಹೆಗಾರರಿಗೆ ಯಾವ ಪರಿಣಾಮಗಳಿವೆ? ಆಯಾ ಸೇನೆಗಳ ಮುಖ್ಯಸ್ಥರ ಸಲಹೆಗಳನ್ನು ಸಿಡಿಎಸ್ ಮುಖ್ಯಸ್ಥರು ಅತಿಕ್ರಮಿಸಲಿದ್ದಾರೆಯೇ, ಮೂರೂ ಸೇನೆಗಳ ಮುಖ್ಯಸ್ಥರು ರಕ್ಷಣಾ ಸಚಿವರಿಗೆ ವರದಿ ನೀಡಬೇಕೆ ಅಥವಾ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಿಗೆಯೇ ಎಂದು ಸಹ ತಿವಾರಿ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com