ಸಿಡಿಎಸ್ ಬಿಪಿನ್ ರಾವತ್ ಗಾಗಿ ಕತ್ತಿ, ಗರುಡ, ಹಡಗುದಾಣ ಒಳಗೊಂಡ ಹೊಸ ಸಮವಸ್ತ್ರ ಸಿದ್ಧ

ದೇಶದ ಮೂರು ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ನೇಮಕಗೊಂಡಿರುವ ಬಿಪಿನ್ ರಾವತ್ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದು, ಅವರಿಗಾಗಿ ನೂತನ ಸಮವಸ್ತ್ರ ಹಾಗೂ ಬ್ಯಾಡ್ಜ್ ಗಳು ಸಿದ್ಧವಾಗಿವೆ.

Published: 31st December 2019 07:18 PM  |   Last Updated: 31st December 2019 07:18 PM   |  A+A-


unifarms

ಹೊಸ ಸಮವಸ್ತ್ರ

Posted By : Lingaraj Badiger
Source : The New Indian Express

ನವದೆಹಲಿ: ದೇಶದ ಮೂರು ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ನೇಮಕಗೊಂಡಿರುವ ಬಿಪಿನ್ ರಾವತ್ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದು, ಅವರಿಗಾಗಿ ನೂತನ ಸಮವಸ್ತ್ರ ಹಾಗೂ ಬ್ಯಾಡ್ಜ್ ಗಳು ಸಿದ್ಧವಾಗಿವೆ.

ಕತ್ತಿ, ಗರುಡ, ಹಡಗುದಾಣ ಹಾಗೂ ರಾಷ್ಟ್ರೀಯ ಹೂವು, ಕಮಲವನ್ನು ಒಳಗೊಂಡ ಸಮವಸ್ತ್ರವನ್ನು ದೇಶದ ಮೊದಲ ಮಿಲಿಟರಿ ಸಲಹೆಗಾರರಿಗಾಗಿ ಸಿದ್ಧಪಡಿಸಲಾಗಿದೆ.

ಸಿಡಿಎಸ್ ಸಮವಸ್ತ್ರದಲ್ಲಿ ಮರೂನ್ ಬಣ್ಣದ ಭುಜದ ಬ್ಯಾಡ್ಜ್, ಅರ್ಧ ಕಮಲದ ಉಂಗುರವು ಮೂರು-ಸೇವೆಗಳ ಚಿಹ್ನೆಗಳನ್ನು ಸುತ್ತುವರೆದಿರುತ್ತದೆ. ಬೆಲ್ಟ್ ಬಕಲ್ ಮತ್ತು ಪೀಕ್ ಕ್ಯಾಪ್ ನಲ್ಲಿ ಓಕ್ ಎಲೆ ಸಾಲು, ಸೈನ್ಯದ ಕತ್ತಿಗಳು, ನೌಕಾಪಡೆಯ ಹಡಗುದಾಣ ಮತ್ತು ವಾಯುಪಡೆಯ ಗರುಡ ಇದೆ.

ಇನ್ನು ಸಿಡಿಎಸ್ ಅವರು ಪ್ರಯಾಣಿಸುವ  ಕಾರಿನ ಧ್ವಜವು ಮೂರು-ಸೇವೆಗಳ ಚಿಹ್ನೆಗಳು ಮತ್ತು ಓಕ್ ಎಲೆಗಳ ಸಾಲಿನೊಂದಿಗೆ ರಾಷ್ಟ್ರ ಧ್ವಜವನ್ನು ಹೊಂದಿರುತ್ತದೆ.

ರಕ್ಷಣಾ ಪಡೆಗಳ ಮುಖ್ಯಸ್ಥರ ಸಮವಸ್ತ್ರವು ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ನಡುವಿನ ಜಂಟಿ, ಸಮನ್ವಯತೆ ಮತ್ತು ಒಡಂಬಡಿಕೆಯನ್ನು ಪ್ರತಿಬಿಂಬಿಸುತ್ತದೆ.

Stay up to date on all the latest ರಾಷ್ಟ್ರೀಯ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp