ಜಲಂತರ್ಗಾಮಿ ನೌಕೆಗಳ ನಿರ್ಮಾಣಕ್ಕೆ 40 ಸಾವಿರ ಕೋಟಿ, ಕೇಂದ್ರ ಅಸ್ತು

ಭಾರತೀಯ ನೌಕಾದಳಕ್ಕಾಗಿ ಸುಮಾರು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸ್ವದೇಶಿ ನಿರ್ಮಿತ ಆರು ಜಲಂತರ್ಗಾಮಿ ನೌಕೆಗಳ ನಿರ್ಮಾಣ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತೀಯ ನೌಕಾದಳಕ್ಕಾಗಿ ಸುಮಾರು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಸ್ವದೇಶಿ ನಿರ್ಮಿತ ಆರು ಜಲಂತರ್ಗಾಮಿ ನೌಕೆಗಳ ನಿರ್ಮಾಣ ಯೋಜನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.

ರಕ್ಷಣಾ ಸ್ವಾಧೀನ ಸಮಿತಿ ( ಡಿಎಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಕ್ಷಣಾ  ಸಾಮಾಗ್ರಿಗಳ ಖರೀದಿಯಲ್ಲಿ  ಅತ್ಯಂತ ಮಹತ್ವದ ನಿರ್ಧಾರ ಕೈಗೊಳ್ಳುವ  ಸಮಿತಿ ಇದಾಗಿದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್  ಅಧ್ಯಕ್ಷತೆಯ ಡಿಎಸಿ ಸಭೆಯಲ್ಲಿ,  ಸೇನೆಗಾಗಿ  5 ಸಾವಿರ ಮಿಲಾನ್  ಟ್ಯಾಂಕ್ ನಿರೋಧಕ ಮಾರ್ಗದರ್ಶನದ ಕ್ಷಿಪಣಿ  ಸ್ವಾಧೀನಕ್ಕಾಗಿಯೂ ಅನುಮೋದನೆ ನೀಡಲಾಗಿದೆ.

ಕಾರ್ಯತಂತ್ರ ಸಹಭಾಗಿತ್ವ ಮಾದರಿ ಅಡಿಯಲ್ಲಿ ಆರು ಜಲಂತರ್ಗಾಮಿ ನೌಕೆಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ವಿದೇಶಿ ರಕ್ಷಣಾ  ಉತ್ಪಾದಕರ ಸಹಭಾಗಿತ್ವದೊಂದಿಗೆ ಭಾರತದಲ್ಲಿ ಖಾಸಗಿ ಸಂಸ್ಥೆಗಳು ಆಯ್ದ ಸೇನಾ ಸಲಕರಣೆ ತಯಾರಿಸಲು  ವೇದಿಕೆ ಒದಗಿಸಿಕೊಡುತ್ತದೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.

ಇದು ಕಾರ್ಯತಂತ್ರ ಸಹಭಾಗಿತ್ವ ಮಾದರಿ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಎರಡನೇ ಯೋಜನೆಯಾಗಿದೆ. ಮೊದಲ ಯೋಜನೆಯಲ್ಲಿ 21 ಸಾವಿರ ಕೋಟಿ ರೂ. ವೆಚ್ಚದಲ್ಲಿ  ನೌಕೆಗಾಗಿ 111 ಯುಟಿಲಿಟಿ ಹೆಲಿಕಾಪ್ಟರ್ ಗಳನ್ನು ಖರೀದಿಸಲಾಗಿತ್ತು.

ಭಾರತೀಯ ನೌಕೆಗಾಗಿ ಸುಮಾರು 40 ಸಾವಿರ ಕೋಟಿ ರೂ. ವೆಚ್ಚದಲ್ಲಿ ಆರು ಜಲಂತರ್ಗಾಮಿಗಳನ್ನು ನಿರ್ಮಾಣ ಮಾಡುತ್ತಿರುವುದು  ಒಂದು ಮಹತ್ವದ ನಿರ್ಧಾರವಾಗಿದೆ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com