2019 ಲೋಕಸಭೆ ಚುನಾವಣೆ: ಮತ್ತೆ ಪ್ರಧಾನಿಯಾಗುವ ಮೋದಿ ಆಸೆಗೆ ಈ 3 ಮಹಿಳೆಯರೇ ಅಡ್ಡಗಾಲು!

ಈ ಬಾರಿಯ ಲೋಕಸಭೆ ಚುನಾವಣಾ ಕಣ ಭಾರೀ ರಂಗೇರುತ್ತಿದೆ. ಗೆಲ್ಲಲೇ ಬೇಕೆಂಬ ಆಸೆ ಹೊತ್ತಿರುವ ಎಲ್ಲಾ ಪಕ್ಷಗಳ ಘಟಾನುಘಟಿಗಳು ಈಗಾಗಲೇ ಚುನಾವಣಾ ತಾಲೀಮು ಆರಂಭಿಸಿದ್ದಾರೆ...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣಾ ಕಣ ಭಾರೀ ರಂಗೇರುತ್ತಿದೆ. ಗೆಲ್ಲಲೇ ಬೇಕೆಂಬ ಆಸೆ ಹೊತ್ತಿರುವ ಎಲ್ಲಾ ಪಕ್ಷಗಳ ಘಟಾನುಘಟಿಗಳು ಈಗಾಗಲೇ ಚುನಾವಣಾ ತಾಲೀಮು ಆರಂಭಿಸಿದ್ದಾರೆ. 2019ರ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾಗಬೇಕೆಂದು ನರೇಂದ್ರ ಮೋದಿ ಕನಸು ಕಾಣುತ್ತಿದ್ದಾರೆ. ಆದರೆ ಈ ಮೂವರು ಮಹಿಳೆಯರು ಪ್ರಧಾನಿ ಆಸೆಗೆ ಅಡ್ಡಗಾಲಗಿದ್ದಾರೆ.
ವಿರೋಧ ಪಕ್ಷಗಳ ಪ್ರಮುಖ ಗುರಿ ಬಿಜೆಪಿಯನ್ನು ಸೋಲಿಸುವುದೇ ಆಗಿದೆ, ಈಗಿರುವಾಗ ನೆಹರು ಕುಟುಂಬದ ಕುಡಿ ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಕೈ ಬಲ ಪಡಿಸಲು ಅಖಾಡಕ್ಕಿಳಿದಿದ್ದಾರೆ,  ಉತ್ತರ ಪ್ರದೇಶದ ಪೂರ್ವ ವಿಭಾಗದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 
ಅಜ್ಜಿ ಇಂದಿರಾ ಗಾಂಧಿಯನ್ನೇ ಹೋಲುವ ಪ್ರಿಯಾಂಕಾ ಗಾಂಧಿ ಉತ್ತಮ ವಾಕ್ ಚಾತುರ್ಯ ಹಾಗೂ ಬೇಗಿ ಮತದಾರರನ್ನು ಸೆಳೆಯುವ ಚಾಕಚಕ್ಯತೆ ಹೊಂದಿದ್ದಾರೆ, ಉತ್ತರ ಪ್ರದೇಶದಲ್ಲಿ ಪೂರ್ವ ಭಾಗದ ಜನರೊಂದಿಗೆ ಹೆಚ್ಚಿನ ಬಾವನಾತ್ಮಕ ಸಂಬಂಧ ಹೊಂದಿದ್ದಾರೆ, ಕಳೆದ ಹಲವು ವರ್ಷಗಳಿಂದ ಪ್ರಿಯಾಂಕ ಸಕ್ರಿಯ ರಾಜಕಾರಣಕ್ಕೆ ಬರಬೇಕೆಂಬ ಕೂಗು ಕೇಳಿ ಬರುತ್ತಿತ್ತು,  ಆ ಆಸೆ ಈ ವರ್ಷ ನೆರವೇರಿದೆ.
ಪ್ರಿಯಾಂಕಾ ಗಿಂತ ಹೆಚ್ಟಿನ ರಾಜಕೀಯ ಅನುಭವ, ವರ್ಚಸ್ಸು ಹೊಂದಿರುವ ಮತ್ತೊಬ್ಬ ಪ್ರಭಾವಿ ನಾಯಕಿ ಮಮತಾ ಬ್ಯಾನರ್ಜಿ,  ಎರಡು ಬಾರಿ ರೈಲ್ವೆ ಸಚಿವೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಆಗಿರುವ ಮಮತಾ ಪ್ರಬುದ್ಧ ರಾಜಕಾರಣಿ ಜೊತೆಗ ಪ್ರಧಾನಿ ಹುದ್ದೆ ಆಕಾಂಕ್ಷಿಯೂ ಆಗಿದ್ದಾರೆ.
34 ವರ್ಷಗಳ ಕಮ್ಯುನಿಸ್ಟ್ ಸರ್ಕಾರದ ಆಡಳಿತವನ್ನು ಸೋಲಿಸುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಿದ ಚತುರೆ, ರಾಜಕೀಯ ಕೌಶಲ್ಯ ಹಾಗೂ ಜಾತ್ಯಾತೀತ ನಾಯಕಿಯಾಗಿರುವ ಮಮತಾ, ಇತ್ತೀಚೆಗೆ ಕೊಲ್ಕೊತ್ತಾದಲ್ಲಿ ಬೃಹತ್ ರ್ಯಾಲಿ ನಡೆಸಿ ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಮೂಲಕ ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ, 
ದಲಿತ ನಾಯಕಿ ಬಿಎಸ್ ಪಿ ಯ ಮಾಯಾವತಿ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಜಾಣೆ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಮಾಯಾವತಿ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದ್ದಾರೆ.
ದೇಶದ ಅತಿ ಹೆಚ್ಚು ಲೋಕಸಭೆ ಕ್ಷೇತ್ರ ಹೊಂದಿರುವ ಉತ್ತರ ಪ್ರದೇಶದಲ್ಲಿ ಎಸ್ ಪಿ- ಬಿಎಸ್ ಪಿ ಮೈತ್ರಿ ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ, 2014 ರಲ್ಲಿ ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ ಬಿಜೆಪಿ 73 ಸ್ಥಾನ ಗೆದ್ದಿತ್ತು, ಉತ್ತರ ಪ್ರದೇಶದಲ್ಲಿ ಹೆಚ್ಚು ಸೀಟು ಗೆಲ್ಲುವ ಪಕ್ಷವೇ ಕೇಂದ್ರದಲ್ಲಿ ಅಧಿಕಾರ ಹೊಂದುವ ನಿರ್ಣಾಯಕ ಅಂಶವಾಗಿದೆ.
ಎನ್ ಡಿ ಎ ಮೈತ್ರಿಕೂಟಕ್ಕಿಂತ ವಿರೋಧ ಪಕ್ಷದ ಬಣದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ,.ಇದು ಹೆಚ್ಚಿನ ಮಹಿಳಾ ಮತದಾರರನ್ನು ಸೆಳೆಯಲು ಸಾಧ್ಯವಾಗುತ್ತದೆ ಎಂದು  ಕಳೆದ ವರ್ಷ ಬಿಜೆಪಿ ನಾಯಕ ಯಶವ್ತಂ ಸಿಹ್ನಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.,
ಮೂರು ಹಿಂದಿ ಹಾರ್ಟ್ ಲ್ಯಾಂಡ್ ಗಳಲ್ಲಿ ಬಿಜೆಪಿ ಸೋತ ನಂತರ ಲೋಕಸಭೆ ಚುನಾವಣೆಯ ಬಗ್ಗೆ ಕೇಸರಿ ಪಕ್ಷಕ್ಕೆ ಆತಂಕ ಎದುರಾಗಿದೆ.
ಅದರಲ್ಲೂ ಈ ಬಾರಿ ಪ್ರಿಯಾಂಕಾ ಗಾಂಧಿ ರಾಜಕೀಯ ಎಂಟ್ರಿ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡುತ್ತಿದೆ, ರಾಹುಲ್ ಗಾಂಧಿ ಜನ ಸಾಮಾನ್ಯರ ಜೊತೆ ಬೆರೆಯುವಲ್ಲಿ ವಿಫಲರಾಗಿದ್ದರು, ಇದಕ್ಕಾಗಿ ಅವರು ಟೀಕೆಗೆ ಗುರಿಯಾಗಿದ್ದರು. 
ಪ್ರಿಯಾಂಕಾ ಎಂಟ್ರಿ ಕಾಂಗ್ರೆಸ್ ಗೆ ಹೊಸ ಹುರುಪು ತಂದಿದೆ, ಹಾಗೆಯೇ ಮೋದಿ ಪಾಳಯದಲ್ಲಿ ನಡುಕ ಹುಟ್ಟಿಸಿದೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ವರ್ಚಸ್ಸು ಮೋದಿ ಹಾಗೂ ಬಿಜೆಪಿ ವಿರುದ್ಧ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com