ಅಶ್ಲೀಲ ಮೆಸೇಜ್ ಮಾಡಿ ಕಿರಿಕಿರಿ ಮಾಡ್ತಿದ್ದ ಕಾಮುಕನನ್ನು ಕಿಡ್ನಾಪ್ ಮಾಡಿ ಪಾಠ ಕಲಿಸಿದ ಮಹಿಳಾ ಟೆಕ್ಕಿ!

ವಾಟ್ಸ್ಆ್ಯಪ್ ನಲ್ಲಿ ಅಶ್ಲೀಲ ಮೆಸೇಜ್ ಮಾಡಿ ಕಿರಿ ಕಿರಿ ಮಾಡುತ್ತಿದ್ದ ಕಾಮುಕನನ್ನು ಮಹಿಳಾ ಟೆಕ್ಕಿಯೊಬ್ಬರು ಅಪಹರಿಸಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್: ವಾಟ್ಸ್ಆ್ಯಪ್ ನಲ್ಲಿ ಅಶ್ಲೀಲ ಮೆಸೇಜ್ ಮಾಡಿ ಕಿರಿ ಕಿರಿ ಮಾಡುತ್ತಿದ್ದ ಕಾಮುಕನನ್ನು ಮಹಿಳಾ ಟೆಕ್ಕಿಯೊಬ್ಬರು ಅಪಹರಿಸಿ ಹಿಗ್ಗಾ-ಮುಗ್ಗಾ ಥಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
24 ವರ್ಷದ ಮಹಿಳಾ ಸಾಫ್ಟ್ ವೇರ್ ಎಂಜಿನಿಯರ್ ಗೆ ಕೆಲ ದಿನಗಳಿಂದ ವ್ಯಕ್ತಿಯೋರ್ವ ಫೋನ್ ಮಾಡಿ, ಮೆಸೇಜ್ ಮಾಡಿ ಅಶ್ಲೀಲವಾಗಿ ಮಾತನಾಡುತ್ತ ವಿಪರೀತ ಕಾಟ ಕೊಡುತ್ತಿದ್ದನು. ಮಹಿಳೆಯ ಗೆಳತಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಹೇಗೋ ಆಕೆಯ ಫೋನ್ ನಂಬರ್ ಪಡೆದು ಕಾಲ್ ಹಾಗೂ ಮೆಸೇಜ್ ಮಾಡಿ ಹಿಂಸೆ ಕೊಡುತ್ತಿದ್ದ.
ಇದಕ್ಕೆ ಫುಲ್ ಸ್ಟಾಪ್ ಆಗಬೇಕು ಎಂದು ಟೆಕ್ಕಿ ಸ್ನೇಹಿತೆಯರ ಸಹಾಯ ಪಡೆದು ಆ ಕಾಮುಕನಿಗೆ ಕರೆ ಮಾಡಿ ಸಿಕಂದರಾಬಾದ್ ಬಳಿ ಇರುವ ಕಾಲೇಜು ಹತ್ತಿರ ಬರಲು ಹೇಳಿದ್ದಾಳೆ. ನಂತರ ಅಲ್ಲಿ ಆತನಿಗೆ ಹಿಗ್ಗಾ ಮುಗ್ಗಾ ಹೊಡೆದು ಕಿಡ್ನಾಪ್ ಮಾಡಿದ್ದಾರೆ. ಅಲ್ಲದೆ ನಿರ್ಜನ ಪ್ರದೇಶಕ್ಕೆ ಆತನನ್ನು ಕರೆದುಕೊಂಡು ಹೋಗಿ ಥಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com