ಪಬ್​ಜಿ ಆಡಲು ಹೊಸ ಮೊಬೈಲ್ ಕೊಡಿಸದ್ದಕ್ಕೆ ಬೇಸರಗೊಂಡ ಯುವಕ ಆತ್ಮಹತ್ಯೆ!

ಬ್​ಜಿ ಆಡೋಕೆ ಹೊಸ ಮೊಬೈಲ್ ಕೊಡಿಸದ್ದಕ್ಕೆ ತನ್ನ ಕುಟುಂಬ ಸದಸ್ಯರೊಡನೆ ಜಗಳವಾಡಿದ್ದ 18ರ ಹರೆಯದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಪಬ್​ಜಿ  ಆಡಲು ಹೊಸ ಮೊಬೈಲ್ ಕೊಡಿಸದ್ದಕ್ಕೆ ಬೇಸರಗೊಂಡ ಯುವಕ ಆತ್ಮಹತ್ಯೆ!
ಪಬ್​ಜಿ ಆಡಲು ಹೊಸ ಮೊಬೈಲ್ ಕೊಡಿಸದ್ದಕ್ಕೆ ಬೇಸರಗೊಂಡ ಯುವಕ ಆತ್ಮಹತ್ಯೆ!
ಮುಂಬೈ: ಪಬ್​ಜಿ ಆಡೋಕೆ ಹೊಸ ಮೊಬೈಲ್ ಕೊಡಿಸದ್ದಕ್ಕೆ ತನ್ನ ಕುಟುಂಬ ಸದಸ್ಯರೊಡನೆ ಜಗಳವಾಡಿದ್ದ 18ರ ಹರೆಯದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ಕುರ್ಲಾದ ನೆಹರೂ ನಗರ ನಿವಾಸಿಯಾಗಿದ್ದ ಯುವಕ ತನಗೆ ಆನ್ ಲೈನ್ ಗೇಮ್ ಆಡುವುದಕ್ಕಾಗಿ ಅತ್ಯುನ್ನತ ಸಾಮರ್ಥ್ಯದ ಸ್ಮಾರ್ಟ್ ಫೋನ್ ಬೇಕೆಂದು ಹಠ ಹಿಡಿದಿದ್ದ. ಸುಮಾರು 37,000 ರು. ಬೆಲೆಬಾಳುವ ಫೋನ್ ಕೊಡಿಸುವಂತೆ ಆತ ಕುಟುಂಬದವರನ್ನು ಕೇಳಿದ್ದ. ಆದಾಗ್ಯೂ, ಯುವಕನ ಕುಟುಂಬ ಅವನ ಬೇಡಿಕೆಯನ್ನು ನಿರಾಕರೈಸಿದೆ.ಅಲ್ಲದೆ 20,000 ರು. ಗಿಂತ ಹೆಚ್ಚಿನ ಮೊತ್ತದ ಮೊಬೈಲ್ ಕೊಡಿಸಲ್ಲ ಎಂದೂ ವಾದಿಸಿದ್ದಾರೆ.
ಇದರಿಂದ ಮನನೊಂದ ಯುವಕ ಹಗ್ಗವೊಂದನ್ನು ತೆಗೆದುಕೊಂಡು ತನ್ನ ಮನೆಯ ಅಡಿಗೆ ಕೋಣೆಯಲ್ಲಿದ್ದ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಳ್ಳುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೋಲೀಸರು ಈ ಸಂಬಂಧ ಆಕಸ್ಮಿಕ ಮರಣದ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಪಬ್ ಅಥವಾ "ಪ್ಲೇಯರ್ ಅನ್ನೌನ್ ಬ್ಯಾಟಲ್ ಗ್ರೌಂಡ್ಸ್" ಎನ್ನುವುದೊಂದು ಆನ್ ಲೈನ್ ಮಲ್ಟಿ ಪ್ಲೇಯರ್ ಆಟವಾಗಿದ್ದು ಇದರಲ್ಲಿ 100 ಮಂದಿ ಸ್ಪರ್ಧಿಗಳು ತಮ್ಮ ಗೆಲುಯ್ವಿಗಾಗಿ ಕಾದಾಡುತ್ತಾರೆ.ಅದರಲ್ಲಿ ಬದುಕಿದ ಏಕೈಕ ವ್ಯಕ್ತಿ ವಿಜೇತನೆನಿಸುತ್ತಾನೆ. ಇದೊಂದು "ವ್ಯಸನಕಾರಿ" ಗೇಮ್ ಆಗಿರುವ ಕಾರಣ ಇದನ್ನು ನಿಷೇಧಿಸಬೇಕು ಎಂದು ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಮನವಿಗಳು ಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com