ಚಿಟ್ ಫಂಡ್ ಹಗರಣದ ಸಾಕ್ಷ್ಯ ನಾಶದಲ್ಲಿ ಕಮೀಷನರ್ ಪ್ರಮುಖ ಪಾತ್ರವಿದೆ: ಸಿಬಿಐ ಮುಖ್ಯಸ್ಥರ ಆರೋಪ

: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿಕೊಲ್ಕತ್ತಾ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ನಿರ್ದೇಶನ ನೀಡಿದೆ. ಎಂದು ಸಿಬಿಐ....
ನಾಗೇಶ್ವರ ರಾವ್
ನಾಗೇಶ್ವರ ರಾವ್
ಕೋಲ್ಕತ್ತಾ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿಕೊಲ್ಕತ್ತಾ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್ ವಿರುದ್ಧ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ನಿರ್ದೇಶನ ನೀಡಿದೆ. ಎಂದು ಸಿಬಿಐ ಮಧ್ಯಂತರ ಮುಖ್ಯಸ್ಥ ನಾಗೇಶ್ವರ ರಾವ್ ಹೇಳಿದ್ದಾರೆ.
 ಖಾಸಗಿ ಸುದ್ದಿ ವಾಹಿನಿ ಜತೆ ಮಾತನಾಡಿದ ಅವರು ರಾಜೀವ್ ಕುಮಾರ್ ವಿರುದ್ಧ ಸಿಬಿಐ ಬಳಿ ಸಾಕ್ಷಿಗಳಿದೆ ಎಂದಿದ್ದಾರೆ. ವರು ಈ ಸಾಕ್ಷ್ಯವನ್ನು ನಾಶಪಡಿಸುವ ಮತ್ತು ನ್ಯಾಯವನ್ನು ಮರೆಮಾಚುವ ಕೆಲಸದಲ್ಲಿ ರಾಜೀವ್ ಕುಮಾರ್ ಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಕೋಲ್ಕತಾ ಪೊಲೀಸರು ಕಮೀಷನರ್ ರಾಜೀವ್ ಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಸಹಕರಿಸುತ್ತಿಲ್ಲ ಎಂದು ನಾಗೇಶ್ವರ ರಾವ್ ಹೇಳಿದ್ದಾರೆ.
"ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ನಾವು ಈ ಚಿಟ್ ಫಂಡ್  ಪ್ರಕರಣಗಳನ್ನು ತನಿಖೆ ಮಾಡುತ್ತಿದ್ದೇವೆ.ಈಗಿನ ಕೋಲ್ಕತಾ ಪೋಲಿಸ್ ಕಮಿಷನರ್ ಆಗಿರುವ ರಾಜೀವ್ ಕುಮಾರ್ ನೇತೃತ್ವದಲ್ಲಿ ಸುಪ್ರೀಂ ನಿರ್ದೇಶನಕ್ಕೆ ಮುನ್ನವೇ ಪಶ್ಚಿಮ ಬಂಗಾಳ ಸರ್ಕಾರ ಸ್ಐಟಿಯನ್ನು ರಚಿಸಿದೆ. "
ಈ ವಿಷಯವನ್ನು ತನಿಖೆ ಮಾಡಲು ಸಿಬಿಐಗೆ ಸರ್ಕಾರದಿಂದ ಯಾವ ಅನುಮತಿ ಇಲ್ಲ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ನಾಶವಾಗುವ ಅಪಾಯವಿದೆ ಎಂದೂ ಅವರು ಹೇಳೀದ್ದಾರೆ.ಕೊಲ್ಕತ್ತಾ ಪೊಲೀಸರು ಎಲ್ಲಾ ಪುರಾವೆಗಳನ್ನೂ ತೆಗೆದುಕೊಂಡಿದ್ದಾರೆ ಮತ್ತು ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ನಾಗೇಶ್ವರ ರಾವ್ ಆರೋಪಿಸಿದ್ದಾರೆ. "ಅವರು ಎಲ್ಲಾ ದಾಖಲೆಗಳನ್ನು ಹಸ್ತಾಂತರಿಸುವಲ್ಲಿ ನಮ್ಮೊಂದಿಗೆ ಸಹಕಾರ ನೀಡುತ್ತಿಲ್ಲ ಮತ್ತು ಸಾಕಷ್ಟು ಪುರಾವೆಗಳು ನಾಶವಾಗಿದೆ ಅಥವಾ ಕಣ್ಮರೆಯಾಗಲೂ ಇದು ಕಾರಣವಾಗಿದೆ" ಅವರು ಹೇಳೀದ್ದಾರೆ.
ಆದಾಗ್ಯೂ, ಕೋಲ್ಕತಾ ಆಯುಕ್ತನನ್ನು ಪ್ರಶ್ನಿಸಲು ಸಿಬಿಐ ಅಧಿಕಾರಿಗಳು ಯಾವುದೇ ವಾರಂಟ್ ಅಥವಾ ಕಾಗದ ಪತ್ರಗಳಿಲ್ಲದೆ ಬಂದಿದ್ದರೆಂದು ರಾಜ್ಯ ಅಪರಾಧ ವಿಭಾಗದ ಜಂಟಿ ಆಯುಕ್ತ ಪ್ರವೀಣ್ ತ್ರಿಪಾಠಿ ಆರೋಪಿಸಿದ್ದಾರೆ.
"ಸಿಬಿಐ ಅಧಿಕಾರಿಗಳ ತಂಡ "ರಹಸ್ಯ ಕಾರ್ಯಾಚರಣೆ" ಎಂಬ ಹೆಸರಿನಲ್ಲಿ ಕಾಗದಪತ್ರಗಳಿಲ್ಲದೆ ಆಗಮಿಸಿದೆ. ಕಾರ್ಯಾಚರಣೆಯು ಏನೆಂದು ಕೇಳಿದಾಗ ಅವರು ತೃಪ್ತಿದಾಯಕ ಪ್ರತಿಕ್ರಿಯೆಯನ್ನು ನೀಡಲು ವಿಫಲಾರಾಗಿದ್ದಾರೆ."
ಏತನ್ಮಧ್ಯೆ, ಕೋಲ್ಕತಾ ಪೊಲೀಸರ ವಿರುದ್ಧ ಸಿಬಿಐ ಕಾರ್ಯನಿರತ ಅಧಿಕಾರಿಗಳಿಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲು ತೀರ್ಮಾನಿಸಿದೆ.
ಕೋಲ್ಕತಾ ಪೊಲೀಸ್ ಕಮೀಷನರ್ ರಾಜೀವ್ ಕುಮಾರ್ ಅವರ ಅಧಿಕೃತ ನಿವಾಸದ ಮುಂದೆ ಭಾನುವಾರದಂದು ಸಿಬಿಐ ಅಧಿಕಾರಿಗಳು ಆಗಮಿಸಿದಾಗ ನಗರ ಪೊಲೀಸ್ ಅಧಿಕಾರಿಗಳು  ಅವರನ್ನು ಒಳ ಪ್ರವೇಶಿಸದಂತೆ ತಡೆದದ್ದಲ್ಲದೆ ಅವರನ್ನು ಪೋಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಐದು ಸಿಬಿಐ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com