ಕಪ್ಪು ಹಣದ ವರದಿಗಳು ಸಂಸದೀಯ ಸಮಿತಿ ಮುಂದೆ ಇವೆ, ಬಹಿರಂಗಪಡಿಸಲು ಸಾಧ್ಯವಿಲ್ಲ: ಕೇಂದ್ರ

ಭಾರತೀಯರು ದೇಶ ಮತ್ತು ವಿದೇಶಗಳಲ್ಲಿ ಹೊಂದಿರುವ ಕಪ್ಪು ಹಣದ ಕುರಿತ ಮೂರು ವರದಿಗಳ ಕುರಿತು ಮಾಹಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತೀಯರು ದೇಶ ಮತ್ತು ವಿದೇಶಗಳಲ್ಲಿ ಹೊಂದಿರುವ ಕಪ್ಪು ಹಣದ ಕುರಿತ ಮೂರು ವರದಿಗಳ ಕುರಿತು ಮಾಹಿತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಸದ್ಯ ಸಂಸದೀಯ ಸಮಿತಿಯ ಪರಿಶೀಲನೆಯಲ್ಲಿದೆ. ಹೀಗಾಗಿ ವರದಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಹೇಳಿದೆ.
ವಿವಿಧ ಸಂಸ್ಥೆಗಳು ನಾಲ್ವರು ವರ್ಷಗಳ ಹಿಂದೆಯೇ ಈ ಮೂರು ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ನೀಡಿವೆ.
ದೆಹಲಿ ಮೂಲದ ಎನ್ಐಪಿಎಫ್ ಪಿ, ಫರಿದಾಬಾದ್ ನ ಎನ್ ಸಿಎಇಆರ್ ಹಾಗೂ ಎನ್ ಐಎಫ್ಎಂ ದೇಶ ಮತ್ತು ವಿದೇಶಗಳಲ್ಲಿನ ಕಪ್ಪು ಹಣದ ಕುರಿತು ಅಧ್ಯಯನ ನಡೆಸಿ 2013-14ರಲ್ಲಿ ವರದಿ ನೀಡಿದ್ದವು.
ಈ ಮೂರು ಸಂಸ್ಥೆಗಳು ನೀಡಿರುವ ವರದಿ ಬಗ್ಗೆ ಮಾಹಿತಿ ಕೋರಿ ಆರ್ ಟಿಐ ಅರ್ಜಿ ಸಲ್ಲಿಸಲಾಗಿತ್ತು. ಆರ್ ಟಿಐ ಅರ್ಜಿಗೆ ಉತ್ತರಿಸಿರುವ ಕೇಂದ್ರ ಹಣಕಾಸು ಸಚಿವಾಲಯ, ಎನ್ಐಪಿಎಫ್ ಪಿ ಯಿಂದ ಡಿಸೆಂಬರ್ 30, 2013ರಲ್ಲಿ, ಎನ್ ಸಿಎಇಆರ್ ನಿಂದ ಜುಲೈ 18, 2014ರಲ್ಲಿ ಹಾಗೂ ಎನ್ ಐಎಫ್ಎಂನಿಂದ ಆಗಸ್ಟ್ 21, 2014ರಲ್ಲಿ ವರದಿ ಸ್ವೀಕರಿಸಲಾಗಿದೆ. ಆದರೆ ಆ ವರದಿಗಳು ಸಂಸದೀಯ ಸಮಿತಿ ಪರಿಶೀಲನೆಯಲ್ಲಿರುವುದರಿಂದ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಉತ್ತರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com