ಸ್ವಂತ ಹಣದಿಂದ ರಸ್ತೆ ಗುಂಡಿಗಳ ಮುಚ್ಚುವ ಮೂಲಕ ಮಾದರಿಯಾದ ಗ್ರಾಮ ಪಂಚಾಯತ್ ಸದಸ್ಯೆ

ಇತ್ತೀಚೆಗೆ ಚುನಾಯಿತರಾದ ತೆಲಂಗಾಣದ ಖಮ್ಮಮ್ ಜಿಲ್ಲೆಯ ಗ್ರಾಮದ ಸರಪಂಚ ಮಹಿಳೆಯಿಒಬ್ಬರು ತಮ್ಮ ಕೆಲಸಗಳಿಂದಾಗಿ ಮಾದರಿ ರಾಜಕಾರಣಿ ಎನಿಸಿಕೊಂಡಿದ್ದಾರೆ.

Published: 04th February 2019 12:00 PM  |   Last Updated: 04th February 2019 07:26 AM   |  A+A-


Telangana sarpanch shows the way, spends from own pocket to fix potholes

ಸ್ವಂತ ಹಣದಿಂದ ರಸ್ತೆ ಗುಂಡಿಗಳ ಮುಚ್ಚುವ ಮೂಲಕ ಮಾದರಿಯಾದ ಗ್ರಾಮ ಪಂಚಾಯತ್ ಸದಸ್ಯೆ

Posted By : RHN RHN
Source : The New Indian Express
ಖಮ್ಮಮ್(ತೆಲಂಗಾಣ): ಇತ್ತೀಚೆಗೆ ಚುನಾಯಿತರಾದ ತೆಲಂಗಾಣದ ಖಮ್ಮಮ್ ಜಿಲ್ಲೆಯ ಗ್ರಾಮದ ಸರಪಂಚ ಮಹಿಳೆಯಿಒಬ್ಬರು ತಮ್ಮ ಕೆಲಸಗಳಿಂದಾಗಿ ಮಾದರಿ ರಾಜಕಾರಣಿ ಎನಿಸಿಕೊಂಡಿದ್ದಾರೆ. ಅಲ್ಲದೆ ಆಕೆ ನಿಜವಾದ ನಾಯಕಿ ಎಂದು ಜನರಿಂದ ಮೆಚ್ಚುಗೆ ಗಳಿಸಿಕೊಳ್ಳುತ್ತಿದ್ದಾರೆ.

ಮದ್ದುಲಪಲ್ಲಿ ಗ್ರಾಮದಲ್ಲಿ ಬಹು ಹಿಂದಿನಿಂದ ರಸ್ತೆ ತುಂಬಾ ಗುಂಡಿಗಳಿದ್ದು ಗ್ರಾಮಸ್ಥರು ಸರ್ಕಾರಕ್ಕೆ ಎಷ್ಟೇ ಮೊರೆ ಇಟ್ಟರೂ ಪ್ರಯೋಜನವಾಗಿರಲಿಲ್ಲ. ಆದರೆ ನೂತನವಾಗಿ ಆಯ್ಕೆಯಾಗಿರುವ ಸರಪಂಚ್ ಕರ್ಲಪುದಿ ಸುಭದ್ರಾ ತಾನು ಯಾರೊಬ್ಬರಿಗಾಗಿ ಕಾಯುವ ಗೊಡವೆಗೆ ಹೋಗದೆ ಸ್ವತಃಅ ರಸ್ತೆ ರಿಪೇರಿಗೆ ತೊಡಗಿದ್ದಾರೆ. ಈಕೆ ತನ್ನ ಪತಿ ವೆಂಕಟೇಶ್ವರಲು ಅವರೊಡನೆ ಸೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಸ್ತೆ ಗುಂಡಿಗಳನ್ನು ಸ್ವತಃಅ ಮುಚ್ಚುತ್ತಿದ್ದಾರೆ. ಈ ಗ್ರಾಮವು ಖಮ್ಮಮ್-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ಹಿಂದೆ ಸಚಿವರಾಗಿದ್ದ ತುಮ್ಮುಲ ನಾಗೇಶ್ವರ ರಾವ್ ಈ ಗ್ರಾಮವನ್ನು ದತ್ತು ಪಡೆದಿದ್ದರು.

ಸುಭದ್ರಾ ಇತ್ತೀಚೆಗೆ ನಡೆದ ತೆಲಂಗಾಣ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಿಪಿಎಂ ಪಕ್ಷದ ಬೆಂಬಲದೊಡನೆ ಮದ್ದುಲಪಲ್ಲಿ ಗ್ರಾಮದಲ್ಲಿ ಸ್ಪರ್ಧಿಸಿದ್ದರು. ಹಾಗೆಯೇ ಅವರು ಟಿಆರ್ ಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಜಿ. ನಾಗಮಣಿ ಅವರಿಗಿಂತ 8 ಮತಗಳ ಅಂತರದಲ್ಲಿ ವಿಜೇತರಾಗಿದ್ದರು.

ಇದೀಗ ರಸ್ತೆ ಕಾಮಗಾರಿಗಾಗಿ ಸುಭದ್ರಾ ತಮ್ಮ ಸ್ವಂತ ಹಣದಿಂದ ಸಿಮೆಂಟ್ ಮತ್ತಿತರೆ ವಸ್ತುಗಳನ್ನು ಖರೀದಿಸುತ್ತಿದ್ದಾರೆ ಅಲ್ಲದೆ ತನ್ನ ಪತಿಯೊಡನೆ ಸೇರಿ ತಾವೇ ರಸ್ತೆ ಗುಂಡಿಗಳ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.ಈಕೆ ಯಾವ ಕಾರಣಕ್ಕೂ ಗ್ರಾಮ ಪಂಚಾಯತ್ ನಿಧಿಗಾಗಿ ಕಾಯದೆ ತಾವೇ ಖರ್ಚು ಹಾಕಿ ಸಾಮಾಜಿಕ ಕೆಲಸದಲ್ಲಿ ನಿರತವಾಗಿದ್ದು ಎಲ್ಲರ ಮೆಚುಗೆಗೆ ಪಾತ್ರವಾಗಿದೆ.

ಇದಕ್ಕೆ ಮುನ್ನ ಸುಭದ್ರಾ ಹಾಗೂ ವೆಂಕಟೇಶ್ವರ ರಾವ್ ತಮ್ಮ ಮನೆ ಸಮೀಪ ಅಪಘಾತದಿಂಡ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನಿಡುವ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ರಸ್ತೆ ಗುಂಡಿಯ ಕಾರಣದಿಂದ ಅಪಘಾತಕ್ಕೀಡಾಗಿ ಸತ್ತ ಯುವಕ ಎಸ್.ಕೆ. ಮೌಲಾನಾ ಸಾವು ಆಕೆಯ ಚಿತ್ತವನ್ನೇ ಅಲುಗಾಡಿಸಿದೆ."ನಾನೊಬ್ಬ ತಾಯಿಯಾಗಿ ಇತರರ ಸಾವನ್ನು ಕಾಣುತ್ತಾ ಕುಳಿತಿರಲು ಸಾಧ್ಯವಿಲ್ಲ. ಹಿಗಾಗಿ ನಾನು ನನ್ನ ಪತಿಗೆ ಹೇಳಿದೆ, ನಾವಿಬ್ಬರೂ ಸೇರಿ ರಸ್ತೆ ಗುಂಡಿಗಳ ಮುಚುವ ಕಾರ್ಯ ಮಾಡೋಣವೆಂದೆ. ಅವರೂ ಸಹ ಇದಕ್ಕೆ ಒಪ್ಪಿದರು" ಸುಭದ್ರಾ ನಮ್ಮ ಪತ್ರಿಕಾ ವರದಿಗಾರರಿಗೆ ತಿಳಿಸಿದರು.

'' ನಾವು ಬಡವರು, ಆದರೆ ಯಾವಾಗಲೂ ಜನರ ಕಲ್ಯಾಣಕ್ಕಾಗಿಮುಂದಿರುತ್ತೇವೆ.ನನ್ನ ಹೆಂಡತಿ ಒಬ್ಬ ಹೃದಯವಂತ ಮಹಿಳೆಯಾಗಿದ್ದು ಈಕೆ ಜನರ ನೋವನ್ನು ಕಂಡು ಮರುಗುವ ಮನಸ್ಸುಳ್ಳವಳಾಗಿದ್ದಾಳೆ."ವೆಂಕಟೇಶ್ವರಲು ಹೇಳಿದ್ದಾರೆ.

 1980ರಲ್ಲಿ ಈ ಪ್ರದೇಶದಲ್ಲಿ ಇಂದಿರಮ್ಮ  ವಸತಿ ಯೋಜನೆಯಡಿಯಲ್ಲಿ ನಿರ್ಮಾಣವಾಗಿದ್ದ ಮನೆಗಳು ಈಗ ಕುಸಿಯುವ ಸ್ಥಿತಿ ತಲುಪಿದೆ.30 ಮನೆಗಳು ಈ ಅಭದ್ರ ಸ್ಥಿತಿಯಲ್ಲಿದೆ.ನಾನಿದನ್ನು ಸರ್ಕಾರದ ಗಮನಕ್ಕೆ ತಂದು ಅವರಿಗೆ ಹೊಸ ಮನೆಗಳ ನಿರ್ಮಾಣ ಮಾಡಿಕೊಡಲು ಆದ್ಯ್ತತೆ ನೀಡುತ್ತೇನೆ ಎಂದು ಸುಭದ್ರಾ ಹೇಳಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
Union Finance Minister Nirmala Sitharaman along with BJP General Secretary Bhupendra Yadav and state party President Sanjay Jaiswal releases party manifesto

ಬಿಹಾರ ಚುನಾವಣೆ: ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡುವ ಬಿಜೆಪಿಯ ಪ್ರಣಾಳಿಕೆ ನೀತಿಗೆ ವಿರುದ್ಧವೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp