ಸರ್ವಾಧಿಕಾರಿ ಧೋರಣೆಯಿಂದ ಈ ದೇಶಕ್ಕೆ ಅಪಾಯ: ಕೇಂದ್ರದ ವಿರುದ್ಧ ವಿಪಕ್ಷಗಳ ಕಿಡಿ

ಕೇಂದ್ರ ಸರ್ಕಾರದ 'ಸರ್ವಾಧಿಕಾರಿ' ಧೋರಣೆಯಿಂದಾಗಿ ಈ ದೇಶದ ಭವಿಷ್ಯ ಅಪಾಯಕ್ಕೆ ಸಿಲುಕಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಕೇಂದ್ರ ಸರ್ಕಾರದ 'ಸರ್ವಾಧಿಕಾರಿ' ಧೋರಣೆಯಿಂದಾಗಿ ಈ ದೇಶದ ಭವಿಷ್ಯ ಅಪಾಯಕ್ಕೆ ಸಿಲುಕಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಶಾರದಾ ಚಿಟ್ ಫಂಡ್ ​ ಮತ್ತು ರೋಸ್​ ವ್ಯಾಲಿ ಪಾಂಝಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಪೊಲೀಸ್ ಹಾಗೂ ಸಿಬಿಐ ಅಧಿಕಾರಿಗಳ ನಡುವಿನ ತಿಕ್ಕಾಟ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಫಾರೂಕ್ ಅಬ್ದುಲ್ಲಾ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆರೋಪಗಳು ನೂರಕ್ಕೆ ನೂರರಷ್ಟು ಸತ್ಯವಾಗಿದ್ದು, ಕೇಂದ್ರ ಸರ್ಕಾರದಲ್ಲಿರುವವರು ಮಹಾರಾಜರಂತೆ ವರ್ತಿಸಬಾರದು. ಅವರ ಈ ಸರ್ವಾಧಿಕಾರಿ ಧೋರಣೆಯಿಂದಾಗಿ ಈ ದೇಶದ ಭವಿಷ್ಯ ಅಪಾಯಕ್ಕೆ ಸಿಲುಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಇದೇ ವಿಚಾರಕ್ಕೆ ಮಾತನಾಡಿರುವ ಎಸ್ ಪಿ ಮುಖಂಡ ಅಖಿಲೇಶ್ ಯಾದವ್, ಸಿಬಿಐ ವಿವಾದದ ಸಂದರ್ಭದಲ್ಲಿ ಸಿಬಿಐ ಕಂಡರೆ ಕೇಂದ್ರ ಸರ್ಕರಾ ಭಯ ಬೀಳುತ್ತಿತ್ತು. ಇದೀಗ ಸಿಬಿಐ ಅನ್ನು ಮುಂದಿಟ್ಟುಕೊಂಡು ತನ್ನ ವಿರೋಧಿಗಳನ್ನು ಬಿಜೆಪಿ ಸರ್ಕಾರ ಭಯ ಬೀಳಿಸಲು ಪ್ರಯತ್ನಿಸುತ್ತಿದೆ. ಸಂವಿಧಾನ ಬದ್ಧ ಒಂದು ಪ್ರಮುಖ ಸಂಸ್ಥೆಯನ್ನು ಯಾವುದಾದರೂ ಒಂದು ಪಕ್ಷ ತನ್ನ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ ಎಂದರೆ ಅದು ಬಿಜೆಪಿ ಮಾತ್ರ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಬಿಜೆಪಿ ನೀಚ ರಾಜಕೀಯ ಮಾಡುತ್ತಿದ್ದು. ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ನನ್ನ ಅಥವಾ ಸಮಾಜವಾದಿ ಪಕ್ಷ ಮಾತಲ್ಲ. ಬದಲಿಗೆ ದೇಶದ ಎಲ್ಲ ಪಕ್ಷಗಳ ಒಮ್ಮತದ ಮಾತು ಎಂದು ಹೇಳಿದ್ದಾರೆ.
ಶಿವಸೇನೆ ಮುಖಂಡ ಸಂಜಯ್ ರಾವತ್ ಅವರೂ ಕೂಡ ಈ ಬಗ್ಗೆ ಮಾತನಾಡಿದ್ದು, ಪಶ್ಚಿಮ ಬಂಗಾಳದಂತಹ ದೊಡ್ಡ ರಾಜ್ಯದ ಮುಖ್ಯಮಂತ್ರಿಗಳೇ ಬೀದಿಗಿಳಿದು ಧರಣಿ ಕುಳಿತಿದ್ದಾರೆ ಎಂದರೆ ಈ ಪ್ರಕರಣ ಎಷ್ಟು ಗಂಭೀರವಾದದ್ದು ಮತ್ತು ಎಷ್ಟು ದೊಡ್ಡ ಸಮಸ್ಯೆ ಎಂದು ನಾವು ತಿಳಿದುಕೊಳ್ಳಬಹುದು. ಇದು ಸಿಬಿಐ ವರ್ಸಸ್ ಮಮತಾ ವಿಚಾರವೇ ಅಥವಾ ಮಮತಾ ವರ್ಸಸ್ ಬಿಜೆಪಿಯೇ ಎಂಬ ಪ್ರಶ್ನೆಗೆ ಉತ್ತರ ಶೀಘ್ರವೇ ದೊರೆಯಲಿದೆ. ಆದರೆ ಒಂದಂತೂ ನಿಜ.. ಸಿಬಿಐ ಸಂಸ್ಥೆಯ ದುರ್ಬಳಕೆಯಾಗುತ್ತಿದ್ದು, ದೇಶದ ಗೌರವಕ್ಕೆ ಚ್ಯುತಿ ತರಲಾಗುತ್ತಿದೆ. ಅಂತೆಯೇ ಸಿಬಿಐ ಸಂಸ್ಥೆಯ ಘನತೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷ ಕೂಡ ಈ ಬಗ್ಗೆ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದ ಅಭಿವೃದ್ಧಿಯ ಬಗ್ಗೆ ಅವರಿಗೆ ಚಿಂತೆಯೇ ಇಲ್ಲ. ಅವರ ಚಿತ್ತ ಕೇವಲ ತಮ್ಮ ಎದುರಾಳಿಗಳನ್ನು ಕಿತ್ತೊಗೆಯುವುದೇ ಆಗಿದೆ. ಈ ದೇಶದಲ್ಲಿ ಬಿಜೆಪಿಯಷ್ಟು ಭ್ರಷ್ಟ ಪಕ್ಷ ಮತ್ತೊಂದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com