ಕೆಲಸ ಮಾಡಿದರೆ ರಾಜಕೀಯ ಷಡ್ಯಂತ್ರ, ಕೆಲಸ ಮಾಡದಿದ್ದರೆ ಪಂಜರದ ಗಿಳಿ: ನಿರ್ಮಲಾ ಸೀತಾರಾಮನ್ ವ್ಯಂಗ್ಯ

ಸಿಬಿಐ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನಡೆಸುತ್ತಿರುವ ಪ್ರತಿಭಟನೆಯನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರವಾಗಿ ವಿರೋಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸಿಬಿಐ ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ನಡೆಸುತ್ತಿರುವ ಪ್ರತಿಭಟನೆಯನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರವಾಗಿ ವಿರೋಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸಿಬಿಐ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಅವರ ಕರ್ತವ್ಯಕ್ಕೆ ಯಾರೂ ಅಡ್ಡಿಯಾಗಬಾರದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದೇ ವೇಳೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ಅವರ ಪರವಾಗಿ ನಿಂತ ರಾಜಕೀಯ ಮುಖಂಡರ ವಿರುದ್ಧ ಕಿಡಿಕಾರಿದ ನಿರ್ಮಲಾ, ಸಿಬಿಐ ತನ್ನ ಕೆಲಸ ಮಾಡಬೇಕೇ ಬೇಡವೇ ಎಂದು ಪ್ರಶ್ನಿಸಿದರು. ಅಂತೆಯೇ ಸಿಬಿಐ ಕೆಲಸ ಮಾಡಲಿಲ್ಲ ಎಂದರೆ ಅದು ಪಂಜರದ ಗಿಳಿ.. ಕೇಂದ್ರ ಸರ್ಕಾರ ಅದರ ರೆಕ್ಕೆ ಪುಕ್ಕ ಕತ್ತರಿಸಿ ಹಾಕಿದೆ ಎಂದು ಬೊಬ್ಬಿಡುತ್ತಾರೆ. ಅದು ಅದರ ಪಾಡಿಗೆ ಕೆಲಸ ಮಾಡಿದರೆ ಷಡ್ಯಂತ್ರ ಎಂದು ಆರೋಪಿಸುತ್ತಾರೆ. ಮೊದಲು ನಿಮ್ಮ ಮನಃಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳಿ ಎಂದು ನಿರ್ಮಲಾ ಕಿಡಿಕಾರಿದ್ದಾರೆ.
ಅಂತೆಯೇ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಬಿಜೆಪಿ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಲಿದ್ದು, ತಮ್ಮ ಸಿಎಂ ಯೋಗಿ ಆದಿತ್ಯಾನಾಥ್ ಅವರ ರ್ಯಾಲಿಗೆ ಪಶ್ಚಿಮಬಂಗಾಳ ಅವಕಾಶ ನೀಡದೇ ಇರುವುದು ಅಕ್ಷಮ್ಯ. ಇದು ಸಂವಿಧಾನ ವಿರೋಧಿತನವಲ್ಲವೇ..? ಯೋಗಿ ಆದಿತ್ಯಾನಾಥ್ ಬಂದರೆ ತಮ್ಮ ಗೆಲುವು ಕಷ್ಟಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಮತ್ತು ಟಿಎಂಸಿಗೆ ಭಯವೇ.. ನಿಮ್ಮ ನೆಲದಲ್ಲಿ ನಿಮಗೇ ಅಭದ್ರತೆ ಕಾಡುತ್ತಿದೆಯೇ ಎಂದು ನಿರ್ಮಲಾ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com