ಆಂಧ್ರದಲ್ಲಿ ಮತ್ತೊಂದು ಮರ್ಯಾದ ಹತ್ಯೆ; ತಂದೆಯಿಂದಲೇ ಮಗಳ ಕೊಲೆ!

ಆಂಧ್ರಪ್ರದೇಶದಲ್ಲಿ ಮತ್ತೊಂದು ಮರ್ಯಾದ ಹತ್ಯೆ ಶಂಕೆ ಮೂಡಿದ್ದು, ತಂದೆಯೋರ್ವ ತನ್ನ ಸ್ವಂತ ಮಗಳನ್ನೇ ಕೊಂದು ಪರಾರಿಯಾಗಿರುವ ಘಟನೆ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

Published: 05th February 2019 12:00 PM  |   Last Updated: 05th February 2019 11:53 AM   |  A+A-


Andhra Pradesh: Father Allegedly Kills his Daughter; He Didn't Approve Of Her Relationship

ತಂದೆಯಿಂದಲೇ ಹತ್ಯೆಗೀಡಾದ ವೈಷ್ಣವಿ

Posted By : SVN SVN
Source : Online Desk
ಪ್ರಕಾಶಂ: ಆಂಧ್ರಪ್ರದೇಶದಲ್ಲಿ ಮತ್ತೊಂದು ಮರ್ಯಾದ ಹತ್ಯೆ ಶಂಕೆ ಮೂಡಿದ್ದು, ತಂದೆಯೋರ್ವ ತನ್ನ ಸ್ವಂತ ಮಗಳನ್ನೇ ಕೊಂದು ಪರಾರಿಯಾಗಿರುವ ಘಟನೆ ಪ್ರಕಾಶಂ ಜಿಲ್ಲೆಯಲ್ಲಿ ನಡೆದಿದೆ.

20 ವರ್ಷದ ವೈಷ್ಣವಿ ಎಂಬ ದ್ವಿತೀಯ ಪದವಿ ವಿದ್ಯಾರ್ಥಿನಿ ಕೊಲೆಯಾದ ದುರ್ಧೈವಿಯಾಗಿದ್ದು, ಆಕೆ ತಂದೆ ವೆಂಕಾರೆಡ್ಡಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕಳೆದ ನಿನ್ನೆ ಬೆಳಗ್ಗೆ ಪ್ರಕಾಶಂ ಜಿಲ್ಲೆಯ ಮನೆಯಲ್ಲಿ ವೈಷ್ಣವಿ ಮೃತದೇಹ ಪತ್ತೆಯಾಗಿದ್ದು, ನಿನ್ನೆಯಿಂದ ತಂದೆ ವೆಂಕಾರೆಡ್ಡಿ ಕೂಡ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ವೈಷ್ಣವಿ ಕಾಲೇಜಿನಲ್ಲಿ ತನ್ನ ಸಹಪಾಠಿಯೊಂದಿಗೆ ತಿರುಗಾಡುತ್ತಿದ್ದಳು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಒಮ್ಮೆ ಇಬ್ಬರೂ ವೆಂಕಾರೆಡ್ಡಿ ಅವರಿಗೆ ಸಿಕ್ಕಿಬಿದ್ದಿದ್ದು, ಈ ವೇಳೆ ವೆಂಕಾರೆಡ್ಡಿ ತನ್ನ ಮಗಳಿಗೆ ಬುದ್ಧಿವಾದ ಹೇಳಿದ್ದಾರೆ. ಆದರೆ ಕೇಳದ ವೈಷ್ಣವಿ ಮತ್ತೆ ಆತನೊಂದಿಗೆ ಸಲಿಗೆಯಿಂದ ಇದ್ದು, ಇದರಿಂದ ಕೆರಳಿದ ವೆಂಕಾರೆಡ್ಡಿ ನಿನ್ನೆ ಮುಂಜಾನೆ ಮಗಳನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪ್ರಕಾಶಂ ಜಿಲ್ಲೆಯ ಪೊಲೀಸರು ತನಿಖೆ ಮುಂದುವರೆಸಿದ್ದು, ಇದು ಮರ್ಯಾದ ಹತ್ಯೆ ಎಂದು ಶಂಕಿಸಿದ್ದಾರೆ. ವೈಷ್ಣವಿ ಪ್ರೀತಿಸುತ್ತಿದ್ದ ಯುವಕ ಕೆಳಜಾತಿಯವನಾಗಿದ್ದು, ಇದೇ ಕಾರಣಕ್ಕೆ ವೆಂಕಾರೆಡ್ಡಿ ಇವರಿಬ್ಬರ ಸಂಬಂಧಕ್ಕೆ ವಿರೋಧಿಸಿದ್ದರು ಎನ್ನಲಾಗಿದೆ. ಇದೀಗ ಮಗಳ ಹತ್ಯೆ ಮಾಡಿ ಪರಾರಿಯಾಗಿರುವ ವೆಂಕಾ ರೆಡ್ಡಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp