ಸಿಬಿಐಗೆ ಬಂಗಾಳ ಪೊಲೀಸ್ ತಿರುಗೇಟು: ಸಿಆರ್ ಪಿಸಿ ಅಡಿ ಅಧಿಕಾರಿಗೆ ನೋಟಿಸ್ ಜಾರಿ

ಪಶ್ಚಿಮ ಬಂಗಾಳದ ಪೊಲೀಸ್ ವರ್ಸಸ್ ಸಿಬಿಐ ಹೈಡ್ರಾಮ ಮತ್ತೊಂದು ತಿರುವು ಪಡೆದಿದ್ದು, ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಸಿಬಿಐ ವಿರುದ್ಧ ಕೊಲ್ಕತಾ ಹೈಕೋರ್ಟ್​ನಲ್ಲಿ ದೂರು ದಾಖಲಿಸುವ ಮೂಲಕ ಪಶ್ಚಿಮ ಬಂಗಾಳ ಪೊಲೀಸರು ತಿರುಗೇಟು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲ್ಕತಾ: ಪಶ್ಚಿಮ ಬಂಗಾಳದ ಪೊಲೀಸ್ ವರ್ಸಸ್ ಸಿಬಿಐ ಹೈಡ್ರಾಮ ಮತ್ತೊಂದು ತಿರುವು ಪಡೆದಿದ್ದು, ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದ ಸಿಬಿಐ ವಿರುದ್ಧ ಕೊಲ್ಕತಾ ಹೈಕೋರ್ಟ್​ನಲ್ಲಿ ದೂರು ದಾಖಲಿಸುವ ಮೂಲಕ ಪಶ್ಚಿಮ ಬಂಗಾಳ ಪೊಲೀಸರು ತಿರುಗೇಟು ನೀಡಿದ್ದಾರೆ.
ಕೋಲ್ಕತಾ ಪೊಲೀಸ್​ ಕಮಿಷನರ್ ರಾಜೀವ್​ ಕುಮಾರ್​ ಮನೆಗೆ ಸಿಬಿಐ ಅಧಿಕಾರಿಗಳು ಮುತ್ತಿಗೆ ಹಾಕಿದ ನಂತರ ಕೊಲ್ಕತಾದಲ್ಲಿ ನಡೆಯುತ್ತಿರುವ ಹೈಡ್ರಾಮಕ್ಕೆ ಹೊಸ ತಿರುವು ಸಿಕ್ಕಿದ್ದು, ಸಿಬಿಐಗೆ ತಿರುಗು ಬಾಣ​ ಹೂಡಿರುವ ಪಶ್ಚಿಮ ಬಂಗಾಳ ಪೊಲೀಸರು ಕೊಲ್ಕತಾದ ಸಿಬಿಐ ಮುಖ್ಯಸ್ಥ ಪಂಕಜ್ ಕುಮಾರ್​ ಶ್ರೀವಾಸ್ತವ್​ ಅವರಿಗೆ ನೋಟಿಸ್​ ಜಾರಿಗೊಳಿಸಿದ್ದಾರೆ. 2018ರಲ್ಲಿ ಇಬ್ಬರು ಉದ್ಯಮಿಗಳನ್ನು ಅನಧಿಕೃತವಾಗಿ ವಶದಲ್ಲಿಟ್ಟುಕೊಂಡಿದ್ದ ಮತ್ತು ಕಟ್ಟಿಹಾಕಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಶ್ರೀವಾಸ್ತವ್​ ಅವರಿಗೆ ನೋಟಿಸ್​ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಶ್ರೀವಾಸ್ತವ್​ ಅವರಿಗೆ ನೀಡಿರುವ ನೋಟಿಸ್​ನಲ್ಲಿ ಉದ್ಯಮಿಗಳನ್ನು ಅನಧಿಕೃತವಾಗಿ ವಶದಲ್ಲಿರಿಸಿಕೊಂಡಿದ್ದ ಬಗ್ಗೆ ಮಾಹಿತಿಯನ್ನು ನೀಡಬೇಕು. ಹಾಗೇ, 2018ರ ಆಗಸ್ಟ್​ 17 ಮತ್ತು 18ರ ನಿಜಾಮ್​ ಪ್ಯಾಲೇಸ್​ನ ಸಿಬಿಐ (ಎಸಿಬಿ) ಸಿಸಿಟಿವಿ ದೃಶ್ಯಾವಳಿಯನ್ನು ನೀಡಬೇಕು. ಈ ಬಗ್ಗೆ ಕಳೆದ ವರ್ಷವೇ ವಿವರ ನೀಡುವಂತೆ ಕೇಳಿದ್ದರೂ ನಿಮ್ಮಿಂದ ಇದುವರೆಗೂ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ನಮೂದಿಸಲಾಗಿದೆ.
ಇನ್ನು ನಿನ್ನೆ ತಮ್ಮ ಸರ್ಕಾರದ ನಿರ್ದೇಶನದ ಹೊರತಾಗಿಯೂ ಯಾವುದೇ ಮುನ್ಸೂಚನೆ ನೀಡದೆ ರಾಜ್ಯದೊಳಗೆ ಪ್ರವೇಶಿಸಿ ಪೊಲೀಸ್​ ಕಮಿಷನರ್​ ಅವರನ್ನು ವಿಚಾರಣೆ ನಡೆಸಲು ಮುಂದಾಗಿದ್ದ ಸಿಬಿಐ ಅಧಿಕಾರಿಗಳನ್ನು ಪಶ್ಚಿಮ ಬಂಗಾಳದ ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ, ಸಿಎಂ ಮಮತಾ ಬ್ಯಾನರ್ಜಿ ತಮ್ಮ ಬೆಂಬಲಿಗರೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿಗೆ ಕುಳಿತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com