ಲೋಕಪಾಲ್: ಸಂಧಾನ ಯಶಸ್ವಿ, ಅಣ್ಣಾ ಹಜಾರೆ ಉಪವಾಸ ಅಂತ್ಯ

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಇಬ್ಬರು ಕೇಂದ್ರ ಸಚಿವರೊಂದಿಗೆ ನಡೆದ ಸುದೀರ್ಘ ಸಂಧಾನ ಸಭೆಯ ಬಳಿಕ ಸಾಮಾಜಿಕ ಕಾರ್ಯಕರ್ತ ಅಣ್ಣಾ ....
ಲೋಕಪಾಲ್:  ಸಂಧಾನ ಯಶಸ್ವಿ, ಅಣ್ಣಾ ಹಜಾರೆ ಉಪವಾಸ ಅಂತ್ಯ
ಲೋಕಪಾಲ್: ಸಂಧಾನ ಯಶಸ್ವಿ, ಅಣ್ಣಾ ಹಜಾರೆ ಉಪವಾಸ ಅಂತ್ಯ
ರಾಳೆಗನ್ ಸಿದ್ದಿ(ಮಹಾರಾಷ್ಟ್ರ): ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಇಬ್ಬರು ಕೇಂದ್ರ ಸಚಿವರೊಂದಿಗೆ ನಡೆದ ಸುದೀರ್ಘ ಸಂಧಾನ ಸಭೆಯ ಬಳಿಕ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮಂಗಳವಾರ ತಮ್ಮ ಏಳು ದಿನಗಳ ಕಾಲದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.
ಭ್ರಷ್ಟಾಚಾರ  ವಿರೋಧಿ ಕಾಯ್ದೆ, ಲೋಕಪಾಲ್ ಜಾರಿಗೆ ಒತ್ತಾಯಿಸಿ ಜನವರಿ 30ರಂದು ಹಜಾರೆ ತಮ್ಮ ಅನಿರ್ದಿಷ್ಟ ಉಪವಾಸ ಆರಂಭಿದ್ದರು.
"ಫಡ್ನವೀಸ್ ಹಾಗೂ ಇತರೆ ಕೇಂದ್ರ ಮಂತ್ರಿಗಳೊಡನೆ ಪ್ತಿದಾಯಕ ಮಾತುಕತೆ ನಡೆಸಿದ ನಂತರ ನನ್ನ ಉಪವಾಸವನ್ನು ನಿಲ್ಲಿಸಬೇಕೆಂದು ನಾನು ನಿರ್ಧರಿಸಿದ್ದೇನೆ" ಎಂದು ಹಜಾರೆ ಸುದ್ದಿಗಾರರಿಗೆ ತಿಳಿಸಿದರು.
ಮಂಗಳಆರ ಅಹಮದ್ ನಗರ ಜಿಲ್ಲೆ ಅಣ್ಣಾ ಹಜಾರೆಯವರ ಸ್ವಗ್ರಾಮ ರಾಳೆಗನ್ ಸಿದ್ದಿ ಗ್ರಾಮಕ್ಕೆ ಆಗಮಿಸಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವೀಸ್ ಹಜಾರೆ ಜತೆ ಸುದೀರ್ಘ ಮಾತುಕತೆ ನಡೆಸಿದರು ಈ ವೇಳೆ ಲೋಕಪಾಲ್ ನೇಮಕ ಪ್ರಕ್ರಿಯೆ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವರಾದ ರಾಧಾ ಮೋಹನ್ ಸಿಂಗ್ ಮತ್ತು ಸುಭಾಷ್ ಭಮ್ರೆ ಮತ್ತು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದ್ದರು.
ಚುನಾವಣಾ ಸುಧಾರಣೆಗಳ ಜೊತೆಗೆ ಕೃಷಿಕಾರ್ಮಿಕರು, ರೈತರ ಪರಿಸ್ಥಿತ್ಯ ಕುರಿತಂತೆ ಸ್ವಾಮಿನಾಥನ್ ಆಯೋಗದ ವರದಿ ಶಿಫಾರಸು ನುಷ್ಠಾನಗೊಳಿಸುವಂತೆ ಹಜಾರೆ ಒತ್ತಾಯಿಸಿದ್ದಾರೆ. ಹಜಾರೆ ವರ ಹೋರಾಟ ಬೆಂಬಲಿಸಿ ಸ್ಥಳೀಯರು ಇತ್ತೀಚೆಗೆ ಬಂದ್ ನಡೆಸಿದ್ದಾರೆ. ಈ ವೇಳೆ ಸರ್ಕಾರಿ ಅಧಿಕಾರಿಗಳು ಗ್ರಾಮ ಪ್ರವೇಶಿಸುವುದುಅನ್ನು ಅವರು ತಡೆಹಿಡಿದಿದ್ದರು.
ತನ್ನ ಲೋಕಪಾಲ್ ಬೇಡಿಕೆಯನ್ನು ಬೆಂಬಲಿಸಿದ್ದ ಬಿಜೆಪಿ ಚುನಾವಣೆ ಯಲ್ಲಿ ಜಯ ಗಳಿಸಿದ ಬಳಿಕ ಅದನ್ನು ನಿರ್ಲಕ್ಷಿಸಿದ್ದರು ಎಂದು ಹಜಾರೆ ಸೋಮವಾರ ಆರೋಪಿಸ್ದ್ದರು. ಅಲ್ಲದೆ ಬಿಜೆಪಿ ನನ್ನನ್ನು "ಬಳಸಿಕೊಂಡಿದೆ" ಎಂದೂ ಅವರು ಹೇಳೀದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com