ಕೋಲ್ಕತಾದ ಎಲ್ಲ ಸಿಬಿಐ ಅಧಿಕಾರಿಗಳ ಮನೆಗೆ ಭದ್ರತೆಗೆ ಅರೆಸೇನಾ ಪಡೆ ನಿಯೋಜನೆ

ಕೋಲ್ಕತಾ ಪೊಲೀಸರಿಂದಲೇ ಜೀವಭಯದ ಕುರಿತು ಸಿಬಿಐ ಅಧಿಕಾರಿ ಪಂಕಜ್ ಕುಮಾರ್​ ಶ್ರೀವಾಸ್ತವ್ ಅವರು ಆತಂಕ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಎಲ್ಲ ಸಿಬಿಐ ಅಧಿಕಾರಿಗಳ ಮನೆ ಹಾಗೂ ಕಚೇರಿಗೆ ಕೇಂದ್ರ ಸರ್ಕಾರ ಅರೆಸೇನಾ ಪಡೆಯನ್ನು ಭದ್ರತೆಗೆ ನಿಯೋಜಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತಾ: ಕೋಲ್ಕತಾ ಪೊಲೀಸರಿಂದಲೇ ಜೀವಭಯದ ಕುರಿತು ಸಿಬಿಐ ಅಧಿಕಾರಿ ಪಂಕಜ್ ಕುಮಾರ್​ ಶ್ರೀವಾಸ್ತವ್ ಅವರು ಆತಂಕ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಎಲ್ಲ ಸಿಬಿಐ ಅಧಿಕಾರಿಗಳ ಮನೆ ಹಾಗೂ ಕಚೇರಿಗೆ ಕೇಂದ್ರ ಸರ್ಕಾರ ಅರೆಸೇನಾ ಪಡೆಯನ್ನು ಭದ್ರತೆಗೆ ನಿಯೋಜಿಸಿದೆ ಎಂದು ತಿಳಿದುಬಂದಿದೆ.
ಕೋಲ್ಕತಾದ ಸಿಬಿಐ ಉನ್ನತ ಅಧಿಕಾರಿ ಪಂಕಜ್ ಕುಮಾರ್​ ಶ್ರೀವಾಸ್ತವ್ ಅವರು ಪೊಲೀಸರಿಂದಲೇ ತಮಗೆ ಜೀವ ಬೆದರಿಕೆ ಇದೆ ಎಂದು ಹೇಳಿಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರವು ಸಿಬಿಐ ಅಧಿಕಾರಿಗಳಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದೆ. ಕೋಲ್ಕತಾದ ಎಲ್ಲಾ ಸಿಬಿಐ ಕಚೇರಿಗಳು ಹಾಗೂ ಸಿಬಿಐ ಅಧಿಕಾರಿಗಳ ಮನೆಗಳಿಗೆ ಭದ್ರತೆ ಒದಗಿಸಲು ಭಾರೀ ಸಂಖ್ಯೆಯಲ್ಲಿ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದೆ. 
ದಕ್ಷಿಣ ಕೋಲ್ಕತಾ ಮತ್ತು ಸಾಲ್ಟ್ ಲೇಕ್ ಬಳಿ ಇರುವ ಸಿಬಿಐ ಕಚೇರಿಗಳಂತೂ ಸಿಆರ್ ಪಿಎಫ್ ಯೋಧರು ಬಿಗಿಭದ್ರತೆ ಒದಗಿಸುತ್ತಿದ್ದಾರೆ. ಇಲ್ಲಿಗೆ ಬರುವವರನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಕಚೇರಿಗಳಷ್ಟೇ ಅಲ್ಲ, ಸಿಬಿಐ ಅಧಿಕಾರಿಗಳ ಮನೆಗಳಲ್ಲೂ ಕೇಂದ್ರ ಸರ್ಕಾರ ಬಿಗಿಭದ್ರತೆ ನಿಯೋಜಿಸಿದೆ.
ನಿನ್ನೆಯಷ್ಟೇ ಕೋಲ್ಕತಾದ ಸಿಬಿಐ ಜಂಟಿ ನಿರ್ದೇಶಕ ಪಂಕಜ್ ಶ್ರೀವಾಸ್ತವ್ ಅವರು ತಮಗೆ ಜೀವ ಬೆದರಿಕೆ ಇದೆ ಎಂದು ನಿನ್ನೆ ಆತಂಕ ತೋಡಿಕೊಂಡಿದ್ದರು. ಕೋಲ್ಕತಾದ ಪೊಲೀಸ್ ಅಧಿಕಾರಿಗಳು ತಮ್ಮ ಮನೆಯನ್ನು ಸುತ್ತುವರಿದು ಬಾಗಿಲು ಬಡಿದರೆಂದು ಪಂಕಜ್ ಹೇಳಿಕೊಂಡಿದ್ದಾರೆ. 'ನನ್ನ ಕುಟುಂಬ ಭಯಭೀತಗೊಂಡಿದೆ. ನನ್ನ ಭದ್ರತೆ ಬಗ್ಗೆ ಭಯವಾಗುತ್ತಿದೆ. ಪೊಲೀಸರು ಯಾವ ಕ್ಷಣವಾದರೂ ಬಾಗಿಲು ಮುರಿದು ನನ್ನನ್ನು ಬಂಧಿಸಬಹುದು' ಎಂದು ಶ್ರೀವಾಸ್ತವ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com