ಅಕ್ರಮ ಆಸ್ತಿ: ಐದೂವರೆ ಗಂಟೆ ಕಾಲ ವಾದ್ರಾ ವಿಚಾರಣೆ ನಡೆಸಿದ ಇಡಿ

ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ , ಅಕ್ರಮ ವಿದೇಶಿ ಸ್ವತ್ತುಗಳ ವಶ, ಅಕ್ರಮ ಹಣದ ವರ್ಗಾವಣೆ ತನಿಖೆಗೆ ಸಂಬಂಧಿಸಿಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು .....
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ
ನವದೆಹಲಿ: ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ , ಅಕ್ರಮ ವಿದೇಶಿ ಸ್ವತ್ತುಗಳ ವಶ, ಅಕ್ರಮ ಹಣದ ವರ್ಗಾವಣೆ ತನಿಖೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು  ಐದೂವರೆ ಗಂಟೆಗಳವರೆಗೆ ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ವಾದ್ರಾ ಅವರ ವಿಚಾರಣೆ ಇನ್ನೂ ಪೂರ್ಣವಾಗಿಲ್ಲ್ಲ. ಮುಂದಿನ ವಿಚಾರಣೆ ನಾಳೆ 1ಬೆಳಿಗ್ಗೆ 0:30 ರ ವೇಳೆಗೆ ಪ್ರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳೀದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೋದರಿ ಪ್ರಿಯಾಂಕಾ ತಮ್ಮ ಪತಿ ವಾದ್ರಾ ಅವರೊಡನೆ ಬಿಳಿಯ ಟೊಯೊಟಾ ಲ್ಯಾಂಡ್ ಕ್ರೂಸರ್ ನಲ್ಲಿ ಇಡಿ ಕಛೇರಿಯಿಂದ ಬಂದದ್ದು ಲೋಕಸಭೆ ಚುನಾವಣೆಗಿಂತ ಮುಂಚಿತವಾಗಿ ರಾಜಕೀಯ ಸಂದೇಶವೊಂದನ್ನು ಕಳುಹಿಸುತ್ತಿರುವಂತೆ ಭಾಸವಾಗುತ್ತಿತ್ತು.
ಇದಾಗಿ ಕೆಲವೇ ಸಮಯದಲ್ಲಿ ಪ್ರಿಯಾಂಕಾ ಉತ್ತರ ಪ್ರದೇಶ ಪೂರ್ವ ವಿಭಾಗದ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ."ನಾನು ನನ್ನ ಕುಟೃಂಬದ ಜತೆಗಿದ್ದೇನೆ" ಪ್ರಿಯಾಂಕಾ ಹೇಳಿದ್ದಾರೆ.
ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಸಂಶಯಾಸ್ಪದ ಆರ್ಥಿಕ ವ್ಯವಹಾರಗಳ ಅಪರಾಧ ಆರೋಪಗಳಿಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಇಡಿ ಎದುರು ಹಾಜರಾಗಿದ್ದಾರೆ.  ಸುಮಾರು 3:47 ಗಂಟೆಗೆ ಪ್ರಾರಂಬವಾಗಿದ್ದ ವಿಚಾರಣೆ ಐದು ಗಂಟೆಗಳ ಕಾಲ ನಡೆದಿದೆ.
ಈ ವೇಳೆ ತಾವು ವಿದೇಶಗಳಲ್ಲಿ ಅಕ್ರಮ ಆಸ್ತಿ ಹೊಂದಿರುವ ಆರೋಪವನ್ನು ವಾದ್ರಾ ನಿರಾಕರಿಸಿದ್ದಾರೆ.ಮತ್ತು ತನ್ನ ವಿರುದ್ಧದ ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತವಾಗಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com