ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ; ಅಪ್ಪನಿಂದ ಕನ್ಯಾದಾನ ನಿರಾಕರಣೆ, ಮನಕಲಕುವ ದೃಶ್ಯ!

ಇತ್ತೀಚೆಗಷ್ಟೆ ವಧು ಒಬ್ಬರು ನನ್ನ ತಾಯಿಯ ಅನ್ನದ ಋಣ ಎಂದಿಗೂ ತೀರುವುದಿಲ್ಲ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ವಧುವಿನ ತಂದೆಯೊಬ್ಬರು ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ...

Published: 06th February 2019 12:00 PM  |   Last Updated: 06th February 2019 01:55 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಕೋಲ್ಕತ್ತಾ: ಇತ್ತೀಚೆಗಷ್ಟೆ ವಧು ಒಬ್ಬರು ನನ್ನ ತಾಯಿಯ ಅನ್ನದ ಋಣ ಎಂದಿಗೂ ತೀರುವುದಿಲ್ಲ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ವಧುವಿನ ತಂದೆಯೊಬ್ಬರು ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ ಎಂದು ಹೇಳಿರುವ ವಿಡಿಯೋ ನೋಡಿದರೆ ಮನಕಲಕುವಂತಿದೆ. 

ಕಳೆದ ಸೋಮವಾರ ತಂದೆಯೊಬ್ಬರು ಮಗಳ ಮದುವೆ ಮಾಡುತ್ತಿದ್ದು ಈ ಸಮಾರಂಭದಲ್ಲಿ ಸಂಪ್ರದಾಯದ ಪ್ರಕಾರ ವಧುವಿನ ತಂದೆ ಭಾಷಣ ಮಾಡಿ ವಧುವನ್ನು ದಾನ ಮಾಡುತ್ತಿದ್ದೇನೆ ಎಂದು ಹೇಳಬೇಕಿತ್ತು. ಆದರೆ ತಂದೆ ನಾನು ಮಗಳನ್ನು ಕನ್ಯಾದಾನ ಮಾಡುವುದಿಲ್ಲ ಏಕೆಂದರೆ ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮದುವೆ ಫೋಟೋವೊಂದನ್ನು ಟ್ವೀಟ್ ಮಾಡಿರುವ ಅಸ್ಮಿತಾ ಪೋಪ್ ಎಂಬುವರು ನಾನು ಒಂದು ಮದುವೆಗೆ ಹೋಗಿದ್ದೆ. ಅಲ್ಲಿ ಪುರುಷರಿಗೆ ಬದಲಾಗಿ ಮಹಿಳಾ ಪುರೋಹಿತರು ವಿವಾಹದ ವಿಧಿವಿಧಾನಗಳನ್ನು ನಡೆಸಿಕೊಡುತ್ತಿದ್ದರು. ಈ ವೇಳೆ ವಧುವಿನ ತಂದೆ ಭಾಷಣ ಮಾಡಬೇಕಿತ್ತು. ಆಗ ತಂದೆ ನಾನು ಕನ್ಯಾದಾನ ಮಾಡುವುದಿಲ್ಲ. ನನ್ನ ಮಗಳು ಆಸ್ತಿಯಲ್ಲ ಎಂದು ಹೇಳಿದ್ದರು ಎಂದು ಅಸ್ಮಿತಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
Stay up to date on all the latest ರಾಷ್ಟ್ರೀಯ news
Poll
DJ-Halli-Violence12

ಹಿಂಸಾಚಾರದಲ್ಲಿ ತೊಡಗಿ ಆಸ್ತಿಪಾಸ್ತಿಗೆ ಹಾನಿ ಮಾಡುವ ಗಲಭೆಕೋರರಿಂದಲೇ ನಷ್ಟದ ಹಣ ವಸೂಲಿ ಮಾಡುವುದರಿಂದ ಗುಂಪು ಗಲಭೆ ತಡೆಯಬಹುದೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp