ಕೇವಲ 36 ಸಾವಿರ ರುಪಾಯಿಯಲ್ಲಿ ಮಗನ ಮದುವೆ: ಐಎಎಸ್ ಅಧಿಕಾರಿ ಮಾದರಿ

ತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದ ಕಟುಂಬಗಳು ಮದುವೆಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿವೆ, ಆದರೆ ಇಲ್ಲೊಬ್ಬ ಐಎಎಸ್ ಅಧಿಕಾರಿ ಅತಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ವಿಶಾಖಪಟ್ಟಣಂ: ಇತ್ತೀಚಿನ ದಿನಗಳಲ್ಲಿ ಮಧ್ಯಮ ವರ್ಗದ ಕಟುಂಬಗಳು ಮದುವೆಗಾಗಿ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿವೆ,  ಆದರೆ ಇಲ್ಲೊಬ್ಬ ಐಎಎಸ್ ಅಧಿಕಾರಿ ಅತಿ ಕಡಿಮೆ ಖರ್ಚಿನಲ್ಲಿ ತಮ್ಮ ಮಗನ ಮದುವೆ ಮಾಡಲು ಹೊರಟಿದ್ದಾರೆ.
ವಿಶಾಖಪಟ್ಟಣಂನ ವಿಎಂಆರ್ ಡಿಎ ಆಯುಕ್ತ ಪಂತಾಲಾ ಬಸಂತ್ ಕುಮಾರ್ ತಮ್ಮ ಮಗಮ ಮದುವೆಗಾಗಿ ಕೇವಲ 36 ಸಾವಿರ ರು ಮಾತ್ರ ಖರ್ಚು ಮಾಡುತ್ತಿದ್ದಾರೆ.
ಫೆಬ್ರವರಿ 10 ರಂದು ಮದುವೆ ನಿಶ್ಚಯವಾಗಿದ್ದು, ವಧು ಮತ್ತು ವರನ ಕುಟುಂಬದವರು ತಲಾ 18 ಸಾವಿರ ರು ಮಾತ್ರ ಖರ್ಚು ಮಾಡುತ್ತಿದ್ದಾರೆ, ಇದರಲ್ಲಿ ಬರುವ ಅತಿಥಿಗಳಿಗೆ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ.
ಶುಕ್ರವಾರ ನಡೆಯಲಿರುವ ಈ ವಿವಾಹಕ್ಕೆ ಆಂದ್ರ ಪ್ರದೇಶ ಮತ್ತು ತೆಲಂಗಾಣ ಗವರ್ನರ್ ಇಎಸ್ ಎಲ್ ನರಸಿಂಹ ಆಗಮಿಸಿ ಆಶೀರ್ವಾದ ಮಾಡಲಿದ್ದಾರೆ.
2017 ರಲ್ಲಿ ಬಸಂತ್ ಕುಮಾರ್ ತಮ್ಮ ಮಗಳ ಮದುವೆಯನ್ನು ಕೇವಲ 16,100 ರು. ನಲ್ಲಿ ಮಾಡಿದ್ದರು., 2012 ರಲ್ಲಿ ಬಸಂತ್ ಕುಮಾರ್ ಅವರಿಗೆ ಐಎಎಸ್ ಕೇಡರ್ ಗೆ ಬಡ್ತಿ ನೀಡಲಾಗಿತ್ತು. ಅದಕ್ಕೂ ಮೊದಲು ರಾಜ್ಯಪಾಲ ನರಸಿಂಹನ್ ಅವರ ಬಳಿ ವಿಶೇಷ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 
ಹಲವು ಕುಟುಂಬಗಳು ಭಾರೀ ಹಣ ಖರ್ಚು ಮಾಡಿ ಅದ್ಧೂರಿ ಮದುವೆ ಕಾರ್ಯಕ್ರಮ ಮಾಡುತ್ತವೆ, ಮದುವೆಗಾಗಿ ಹಣ ವ್ಯರ್ಥ ಮಾಡುತ್ತವೆ, ಅದರ ಮಧ್ಯೆ ಭಸಂತ್ ಕುಮಾರ್ ಮಾದರಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com