ಮಾಂಸ-ಮದ್ಯ ನಿಷಿದ್ಧ; ಅರ್ಚಕರಿಗೆ ಮಧ್ಯ ಪ್ರದೇಶ ಸರ್ಕಾರದ ಷರತ್ತು

ಅರ್ಚಕರ ಗೌರವಧನವನ್ನು 1 ಸಾವಿರದಿಂದ 3 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಿದ ನಂತರ ಮಧ್ಯ...
ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್
ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್

ಭೋಪಾಲ್: ಅರ್ಚಕರ ಗೌರವಧನವನ್ನು 1 ಸಾವಿರದಿಂದ 3 ಸಾವಿರ ರೂಪಾಯಿಗಳಿಗೆ ಏರಿಕೆ ಮಾಡಿದ ನಂತರ ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಸರ್ಕಾರ ದೇವಾಲಯಗಳಲ್ಲಿ ಅರ್ಚಕರ ನೇಮಕಕ್ಕೆ ಕೆಲವು ನಿಯಮಗಳನ್ನು ಹೊರಡಿಸಿದೆ.

ಸರ್ಕಾರದ ಸುಪರ್ದಿಯಲ್ಲಿ ಬರುವ ದೇವಸ್ಥಾನಗಳಲ್ಲಿ ಅರ್ಚಕರ ನೇಮಕಾತಿಗೆ ಕೆಲವು ಅರ್ಹತೆಗಳನ್ನು ಹೊರಡಿಸಲಾಗಿದೆ. ಅರ್ಚಕರ ಹುದ್ದೆಗೆ ಅರ್ಜಿ ಸಲ್ಲಿಸುವವರು 18 ವರ್ಷಕ್ಕಿಂತ ಮೇಲಿನವರಾಗಿರಬೇಕು. 8ನೇ ತರಗತಿಯವರೆಗೆ ಕಡ್ಡಾಯವಾಗಿ ಓದಿರಬೇಕು ಮತ್ತು ಆರೋಗ್ಯ ಉತ್ತಮವಾಗಿರಬೇಕು. ಪೂಜಾ ವಿಧಿವಿಧಾನಗಳನ್ನು ಚೆನ್ನಾಗಿ ತಿಳಿದವರಾಗಿರಬೇಕು.

ಅರ್ಚಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಕ್ಕಾ ಸಸ್ಯಹಾರಿಯಾಗಿರಬೇಕು. ಮದ್ಯಪಾನ ಮಾಡಬಾರದು, ಯಾವುದೇ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಿರಬಾರದು.

ದೇವಸ್ಥಾನದ ಜಮೀನು ಅಥವಾ ಇನ್ನಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಆಸ್ತಿಪಾಸ್ತಿಗಳನ್ನು ನಾಶ ಮಾಡಿದ ಅಥವಾ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರಬಾರದು. ಅಭ್ಯರ್ಥಿಗಳ ತಂದೆ ಅರ್ಚಕರಾಗಿದ್ದರೆ ಉಳಿದೆಲ್ಲಾ ಅರ್ಹತೆಗಳನ್ನು ಹೊಂದಿದ್ದವರಿಗೆ ಪ್ರಾಧ್ಯಾನ್ಯತೆ ನೀಡಲಾಗುತ್ತದೆ. ದೇವಸ್ಥಾನ ಮಠದ ಸುಪರ್ದಿಯಲ್ಲಿದ್ದರೆ ಅರ್ಚಕರಾಗುವ ಸಂಪ್ರದಾಯ ವಿಶೇಷ ಅಖಾಡಕ್ಕೆ ಬಂದರೆ ಆಗ ಗುರು-ಶಿಷ್ಯ ಪರಂಪರೆಯಲ್ಲಿ ನೇಮಕಾತಿ ಮಾಡಲಾಗುತ್ತದೆ.

ಅರ್ಚಕರ ನೇಮಕಾತಿಯಲ್ಲಿ ವಂಶ ಮತ್ತು ಗುರು-ಶಿಷ್ಯ ಪರಂಪರೆಗೆ ಆದ್ಯತೆ ನೀಡಲಾಗುತ್ತದೆ. ನೇಮಕಾತಿಯಾದ ನಂತರ ದಾಖಲಾದ ಅರ್ಚಕರ ಹೆಸರು ತಹಸಿಲ್ದಾರ್ ಮತ್ತು ಪಟವಾರಿ ಮಟ್ಟದಲ್ಲಿ ದಾಖಲಾಗುತ್ತದೆ.

ಮಧ್ಯಪ್ರದೇಶದಲ್ಲಿ ದೇವಸ್ಥಾನಗಳಲ್ಲಿ ಅರ್ಚಕರ ನೇಮಕಾತಿಗೆ ಸರ್ಕಾರ ನಿಯಮಾವಳಿ ರೂಪಿಸುತ್ತಿರುವುದು ಇದು ಮೊದಲನೇ ಬಾರಿ. ಚುನಾವಣಾ ಪೂರ್ವ ನೀಡಿದ್ದ ಭರವಸೆಯ ಮೇಲೆ ಅರ್ಚಕರ ನೇಮಕಾತಿ ಮಾಡಲಾಗುತ್ತಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಹೇಳಿದೆ.
ಆದರೆ ಇದು ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಚುನಾವಣಾ ಗಿಮಿಕ್, ಇದರ ಹಿಂದಿನ ಉದ್ದೇಶ ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ಬಿಜೆಪಿ ವಕ್ತಾರ ರಾಹುಲ್ ಕೊಠಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com