ಪಂಜಾಬ್: 64ರ ವೃದ್ಧ-24ರ ತರುಣಿ ವಿವಾಹ: ಭದ್ರತೆ ನೀಡುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ

67 ವಯಸ್ಸಿನ ವೃದ್ಧ-24 ವಯಸ್ಸಿನ ತರುಣಿ ವಿವಾಹವಾಗಿರುವ ಘಟನೆ ಪಂಜಾಬ್ ನಲ್ಲಿ ನಡೆದಿದ್ದು, ಶಮ್ಶೀರ್ ಸಿಂಗ್ ಹಾಗೂ ನವ್ ಪ್ರೀತ್ ಕೌರ್ ದಂಪತಿಗಳಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ
67-year-old man, 24-year-old woman get married in Punjab, high court asks police to ensure their safety
67-year-old man, 24-year-old woman get married in Punjab, high court asks police to ensure their safety
67 ವಯಸ್ಸಿನ ವೃದ್ಧ-24 ವಯಸ್ಸಿನ ತರುಣಿ ವಿವಾಹವಾಗಿರುವ ಘಟನೆ ಪಂಜಾಬ್ ನಲ್ಲಿ ನಡೆದಿದ್ದು, ಶಮ್ಶೀರ್ ಸಿಂಗ್ ಹಾಗೂ ನವ್ ಪ್ರೀತ್ ಕೌರ್ ದಂಪತಿಗಳಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಕೋರ್ಟ್ ಸೂಚನೆ ನೀಡಿದೆ. 
ಬಾಲಿಯನ್ ನಲ್ಲಿ ವೃದ್ಧ ಶಮ್ಶೀರ್ ಸಿಂಗ್ ಯುವತಿ ನವ್ ಪ್ರೀತ್ ಕೌರ್ ನ್ನು ವಿವಾಹವಾಗಿದ್ದು, ಈ ವಿವಾಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದ್ದು, ಕುಟುಂಬ ಸದಸ್ಯರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ದಂಪತಿಗಳು ಕೋರ್ಟ್ ಮೊರೆ ಹೋಗಿದ್ದರು.  ಈ ಹಿನ್ನೆಲೆಯಲ್ಲಿ ಕೋರ್ಟ್ ಇಬ್ಬರಿಗೂ ಭದ್ರತೆ ಒದಗಿಸಲು ಸೂಚನೆ ನೀಡಿದೆ. 
ದಂಪತಿಗಳು ತಮ್ಮ ವಿವಾಹದ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ಆದರೆ ಈ ವಿವಾಹ ಕಾನೂನು ಬದ್ಧ ಎಂದು ಅವರ ಪರ ವಕೀಲರು ತಿಳಿಸಿದ್ದಾರೆ. ಇಬ್ಬರಿಗೂ ಜೀವಂತವಿರುವ  ಸಂಗಾತಿ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಈ ವಿವಾಹ ಊರ್ಜಿತವಾಗಲಿದೆ ಎಂದು ವಕೀಲರು ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com