50 ಸಾವಿರ ರು. ದಂಡ ಕಟ್ಟಿ ಸರ್ಕಾರಿ ಬಂಗಲೆ ಖಾಲಿ ಮಾಡಿ: ತೇಜಶ್ವಿ ಯಾದವ್ ಗೆ ಸುಪ್ರೀಂ ಆದೇಶ

50 ಸಾವಿರ ರುಪಾಯಿ ದಂಡ ಕಟ್ಟಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷ ನಾಯಕ....
ತೇಜಶ್ವಿ ಯಾದವ್
ತೇಜಶ್ವಿ ಯಾದವ್
ನವದೆಹಲಿ: 50 ಸಾವಿರ ರುಪಾಯಿ ದಂಡ ಕಟ್ಟಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವಂತೆ ಬಿಹಾರ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷ ನಾಯಕ ತೇಜಶ್ವಿ ಯಾದವ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಉಪ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಖಾಲಿ ಮಾಡುವಂತೆ ಬಿಹಾರ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ತೇಜಶ್ವಿ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. 
ಉಪ ಮುಖ್ಯಮಂತ್ರಿಗಳ ನಿವಾಸದಿಂದ ಪ್ರತಿಪಕ್ಷ ನಾಯಕನ ನಿವಾಸಕ್ಕೆ ಸ್ಥಳಾಂತರವಾಗುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ತೇಜಶ್ವಿ ಯಾದವ್ ಅವರಿಗೆ ಸೂಚಿಸಿದೆ. ಅಲ್ಲದೆ ಹೈಕೋರ್ಟ್ ಆದೇಶ ಪ್ರಶ್ನಿಸಿದ ಆರ್ ಜೆಡಿ ನಾಯಕನಿಗೆ 50 ಸಾವಿರ ರುಪಾಯಿ ದಂಡ ವಿಧಿಸಿದೆ.
ಜನವರಿ 7ರಂದು ಬಿಹಾರ ಹೈಕೋರ್ಟ್ ವಿಭಾಗೀಯ ಪೀಠ, ಉಪ ಮುಖ್ಯಮಂತ್ರಿಗಳ ನಿವಾಸ ಖಾಲಿ ಮಾಡಿ, ಹಾಲಿ ಉಪ ಮುಖ್ಯಮಂತ್ರಿ ಸುಶಿಲ್ ಕುಮಾರ್ ಮೋದಿ ಅವರಿಗೆ ನೀಡುವಂತೆ ಆದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com