ರಾಫೆಲ್ ಡೀಲ್ ಆಡಿಟ್ ನಿಂದ ದೂರ ಉಳಿಯುವಂತೆ ಸಿಎಜಿ ರಾಜೀವ್ ಮೆಹರ್ಷಿಗೆ ಕಾಂಗ್ರೆಸ್ ಒತ್ತಾಯ

ರಾಫೆಲ್ ಜೆಟ್ ಒಪ್ಪಂದರಲ್ಲಿ ಹಗರಣ ನಡೆದಿದೆ ಎಂದು ನಿರಂತರವಾಗಿ ಆರೋಪಿಸುತ್ತಿರುವ ಕಾಂಗ್ರೆಸ್, ಈಗ ಒಪ್ಪಂದಕ್ಕೆ ಸಂಬಂಧಿಸಿದ ಆಡಿಟ್ ನಿಂದ ದೂರ ಉಳಿಯುವಂತೆ ಕಾಂಗ್ರೆಸ್ ಆಗ್ರಹಿಸಿದೆ.
ರಾಫೆಲ್ ಡೀಲ್ ಆಡಿಟ್ ನಿಂದ ದೂರ ಉಳಿಯುವಂತೆ ಸಿಎಜಿ ರಾಜೀವ್ ಮೆಹರ್ಷಿಗೆ ಕಾಂಗ್ರೆಸ್ ಒತ್ತಾಯ
ರಾಫೆಲ್ ಡೀಲ್ ಆಡಿಟ್ ನಿಂದ ದೂರ ಉಳಿಯುವಂತೆ ಸಿಎಜಿ ರಾಜೀವ್ ಮೆಹರ್ಷಿಗೆ ಕಾಂಗ್ರೆಸ್ ಒತ್ತಾಯ
ನವದೆಹಲಿ: ರಾಫೆಲ್ ಜೆಟ್ ಒಪ್ಪಂದರಲ್ಲಿ ಹಗರಣ ನಡೆದಿದೆ ಎಂದು ನಿರಂತರವಾಗಿ ಆರೋಪಿಸುತ್ತಿರುವ ಕಾಂಗ್ರೆಸ್, ಈಗ ಒಪ್ಪಂದಕ್ಕೆ ಸಂಬಂಧಿಸಿದ ಆಡಿಟ್ ನಿಂದ ದೂರ ಉಳಿಯುವಂತೆ ಕಾಂಗ್ರೆಸ್ ಆಗ್ರಹಿಸಿದೆ. 
ಒಪ್ಪಂದ ನಡೆದ ಸಂದರ್ಭದಲ್ಲಿ ರಾಜೀವ್ ಮೆಹರ್ಷಿ ಹಣಕಾಸು ಕಾರ್ಯದರ್ಶಿಗಳಾಗಿ ಒಪ್ಪಂದದ ಮಾತುಕತೆಯ ಭಾಗವಾಗಿದ್ದರು. ಈಗ ಅವರೇ ರಾಫೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಜಿ ಆಡಿಟ್ ಮಾಡುತ್ತಿದ್ದಾರೆ, ಇದು ಹಿತಾಸಕ್ತಿಯ ಸಂಘರ್ಷಕ್ಕೆ ದಾರಿ ಮಾಡಿಕೊಡಲಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಒಪ್ಪಂದದ ಮಾತುಕತೆಯಲ್ಲಿ ಭಾಗಿಯಾಗಿದ್ದ ರಾಜೀವ್ ಮೆಹರ್ಷಿ ಅವರೇ ಸಂಸತ್ ನಲ್ಲಿ ಒಪ್ಪಂದದ ಬಗ್ಗೆ ವರದಿ ಮಂಡಿಸುವುದು ಸೂಕ್ತವಲ್ಲ. ಹಗರಣಕ್ಕೆ ಸಂಬಂಧಿಸಿದಂತೆ ರಾಜೀವ್ ಮೆಹರ್ಷಿ ತಮ್ಮನ್ನೂ ರಕ್ಷಿಸಿಕೊಂಡು ಸರ್ಕಾರವನ್ನೂ ರಕ್ಷಿಸುವ ಸಾಧ್ಯತೆ ಇದೆ ಆದ್ದರಿಂದ ಇದು ನೈತಿಕವಾಗಿ, ಕಾನೂನಾತ್ಮಕವಾಗಿ ಸೂಕ್ತವಲ್ಲ ಎಂದು ಕಾಂಗ್ರೆಸ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. 
ಇಂತಹ ಒಪ್ಪಂದಗಳಲ್ಲಿ ಹಣಕಾಸು ಸಚಿವಾಲಯ ಮಹತ್ವದ ಪಾತ್ರ ವಹಿಸುತ್ತದೆ. ರಾಫೆಲ್ ಒಪ್ಪಂದ ನಡೆದಿರುವುದು ರಾಜೀವ್ ಮೆಹರ್ಷಿ ಹಣಕಾಸು ಕಾರ್ಯದರ್ಶಿಗಳಾಗಿದ್ದಾಗ ಈ ಹಿನ್ನೆಲೆಯಲ್ಲಿ ಅವರು ಒಪ್ಪಂದಕ್ಕೆ ಸಂಬಂಧಿಸಿದಂತೆ ಆಡಿಟ್ ನೀಡುವುದು ಸೂಕ್ತವಲ್ಲ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com