ದಕ್ಷಿಣ ಭಾರತದ ರಾಜ್ಯಗಳ ಭೇಟಿಗೆ ವಿರೋಧ: ಟ್ವಿಟ್ಟರ್‌ನಲ್ಲಿ#ಮೋದಿ ಹಿಂದಕ್ಕೆ ಹೋಗಿ, ಅಭಿಯಾನ

ಪ್ರಧಾನಿ ನರೇಂದ್ರ ಮೋದಿ ಇಂದು ದಕ್ಷಿಣ ಭಾರತದ ಮೂರು ರಾಜ್ಯಗಳ ಭೇಟಿಗೆ ಸಂಬಂಧಿಸಿದಂತೆ ಟ್ವೀಟರ್ ನಲ್ಲಿ #ಮೋದಿ ಹಿಂದಕ್ಕೆ ಹೋಗಿ, ಅಭಿಯಾನ ವೈರಲ್ ಆಗಿದೆ.
ಪೋಸ್ಟರ್
ಪೋಸ್ಟರ್

ಹೈದರಾಬಾದ್ :  ಪ್ರಧಾನಿ ನರೇಂದ್ರ ಮೋದಿ ಇಂದು ದಕ್ಷಿಣ ಭಾರತದ ಮೂರು ರಾಜ್ಯಗಳ ಭೇಟಿಗೆ ಸಂಬಂಧಿಸಿದಂತೆ ಟ್ವೀಟರ್ ನಲ್ಲಿ  #ಮೋದಿ ಹಿಂದಕ್ಕೆ ಹೋಗಿ ಅಭಿಯಾನ ವೈರಲ್ ಆಗಿದೆ.

ಮೋದಿ ಹಿಂದಕ್ಕೆ ಹೋಗಿ, ಮತ್ತೆಂದೂ ಮೋಗಿ ಬೇಡ ಎಂಬರ್ಥದ ಪೋಸ್ಟರ್ ಗಳು ಟ್ವೀಟರ್ ನಲ್ಲಿ ಹರಿದಾಡುತ್ತಿವೆ. ನರೇಂದ್ರ ಮೋದಿ ಇಂದು ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.
#TNWelcomesModi ಮತ್ತು #GoBackSadistModi ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ ಆಗಿವೆ.

ಸಾಮಾಜಿಕ ತಾಣದಲ್ಲಿ #NoMoreModi ಮತ್ತು #ModIsAMistake ಎಂಬ ಘೋಷಣೆಗಳಿರುವ ಫಲಗಳನ್ನು ಪ್ರದರ್ಶಿಸುತ್ತಿರುವ ಜನರ ಗುಂಪು ಮತ್ತು ಪ್ರಧಾನಿ ನರೇಂದ್ರ ಮೋದಿ ಓಡುತ್ತಿರುವ ಕಾರ್ಟೂನ್‌ಗಳನ್ನು ಬಳಕೆ ಮಾಡಿದ ಪೋಸ್ಟರ್‌ ವೈರಲ್‌ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com