ಹೊಸ ಪಕ್ಷ ಸ್ಥಾಪಿಸಿದ ಪ್ರವೀಣ್ ತೊಗಾಡಿಯಾ: ರಾಮಮಂದಿರ ನಿರ್ಮಾಣ ಭರವಸೆಯೊಡನೆ ಲೋಕಸಭೆಗೆ ಸ್ಪರ್ಧೆ

ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ನಾಯಕರಾಗಿದ್ದ ಪ್ರವೀಣ್ ತೊಗಾಡಿಯಾ ಹೊಸ ರಾಜಕೀಯ ಪಕ್ಷ ಹುಟ್ಟು ಹಾಕಿದ್ದು ತಾವು ಲೋಕಸಭೆಗೆ ಸ್ಪರ್ಧಿಸುವುದಾಗಿ ಘೊಷಿಸಿದ್ದಾರೆ.

Published: 10th February 2019 12:00 PM  |   Last Updated: 10th February 2019 08:24 AM   |  A+A-


Pravin Togadia

ಪ್ರವೀಣ್ ತೊಗಾಡಿಯಾ

Posted By : RHN RHN
Source : Online Desk
ನವದೆಹಲಿ: ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ನಾಯಕರಾಗಿದ್ದ ಪ್ರವೀಣ್ ತೊಗಾಡಿಯಾ ಹೊಸ ರಾಜಕೀಯ ಪಕ್ಷ ಹುಟ್ಟು ಹಾಕಿದ್ದು ತಾವು ಲೋಕಸಭೆಗೆ ಸ್ಪರ್ಧಿಸುವುದಾಗಿ ಘೊಷಿಸಿದ್ದಾರೆ.

ಹಿಂದೂಸ್ಥಾನ್ ನಿರ್ಮಾಣ್ ದಳ (ಎಚ್.ಎನ್.ಡಿ)  ಎಂಬ ಹೊಸ ಪಕ್ಷವನ್ನು ತೊಗಾಡಿಯಾ ಸ್ಥಾಪಿಸಿದ್ದಾರೆ.ನವದೆಹಲಿಯಲ್ಲಿ ಪಕ್ಷದ ಸ್ಥಾಪನೆ ಘೊಷಿಸಿದ ಅವರು ಅಧಿಕಾರಕ್ಕೆ ಬಂದ ಒಂದು ವಾರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭಿಸುವುದಾಗಿ ಹೇಳಿದ್ದಾರೆ.

ತೊಗಾಡಿಯಾ ಕಳೆದ ವರ್ಷ ವಿಎಚ್ ಪಿ ನಿಂದ ದೂರಾಗಿ ಅಂತರಾಷ್ಟ್ರೀಯ ಹಿಂದೂ ಪರಿಷದ್ ಎಂಬ ಸಂಘಟನೆಗೆ ನಾಯಕರಾಗಿದ್ದರು.

ಮುಂಬರುವ ಲೋಕಸಭೆ ಚುನಾವಣೆ ಸೇರಿ ಎಲ್ಲಾ ಚುನಾವಣೆಗಳಲ್ಲಿ ತಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ತೊಗಾಡಿಯಾ ಹೇಳಿದ್ದಾರೆ."ಬಿಜೆಪಿಯ ಕಾಂಗ್ರೆಸ್ಸೀಕರಣವಾಗುತ್ತಿದೆ. ಪಕ್ಷದ ಸಿದ್ದಾಂತ ಹಾಗೂ ಜನರಿಂದ ಇದು ಸಂಭವಿಸುತ್ತಿದೆ.ಬಿಜೆಪಿಯಲ್ಲಿ ಪ್ರತಿ ರಾಜ್ಯದಲ್ಲಿಯೂ ರೀಟಾ ಬಹುಗುಣ ಇದ್ದಾರೆ. ಕಾಂಗ್ರೆಸ್ ನಲ್ಲಿದ್ದ ಶಾಸಕರು ಅನೇಕರು ಬಿಜೆಪಿ ಸೇರಿ ಸಚಿವರಾಗಿದ್ದಾರೆ." ತೊಗಾಡಿಯಾ ಹೇಳಿದ್ದಾರೆ.

ಮೊದಲು ಮೋದಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತೊಗಾಡಿಯಾ ರಾಜಸ್ಥಾನ ಸರ್ಕಾರ, ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು ಆರ್ ಎಸ್ ಎಸ್, ವಿಎಚ್ ಪಿ ಸೇರಿ ಅನೇಕ ಸಂಘಟನೆಗಳಿಂದ ಅವರನ್ನು ದೂರ ಇಡಲಾಗಿತ್ತು. ಅದೇ ವೇಳೆ ಹಳೆಯ ಪ್ರಕರಣವೊಂದರ ಸಂಬಂಧ ರಾಜಸ್ಥಾನ ಪೋಲೀಸರು ಅವರ ಬಂಧನಕ್ಕೆ ಸಹ ಪ್ರಯತ್ನಿಸಿದ್ದರು.
Stay up to date on all the latest ರಾಷ್ಟ್ರೀಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp