ರಾಹುಲ್ ಗಾಂಧಿಗೆ 'ರಫೇಲಿಯಾ' ಖಾಯಿಲೆ, ಅವರು 'ಸುಳ್ಳುಗಳ ರಾಜ': ಶಿವರಾಜ್ ಸಿಂಗ್ ಚೌಹಾಣ್

ರಾಹುಲ್ ಗಾಂಧಿಗೆ "ರಫೇಲಿಯಾ "ಕಾಯಿಲೆ ಇದೆ. ಅವರು "ಸುಳ್ಳುಗಳ ರಾಜ" ಎಂದು ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೂಉಹಾಣ್ ಹೇಳಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್
ಶಿವರಾಜ್ ಸಿಂಗ್ ಚೌಹಾಣ್
ವಡೋದರಾ: ರಾಹುಲ್ ಗಾಂಧಿಗೆ "ರಫೇಲಿಯಾ "ಕಾಯಿಲೆ ಇದೆ. ಅವರು "ಸುಳ್ಳುಗಳ ರಾಜ" ಎಂದು ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೂಉಹಾಣ್ ಹೇಳಿದ್ದಾರೆ.
ಗುಜರಾತಿನಲ್ಲಿ ನಡೆಯುತ್ತಿರುವ ಕ್ಲಸ್ಟರ್ ಸಭೆಯಲ್ಲಿ ಭಾಗವಹಿಸ ಸಲುವಾಗಿ ವಡೋದರಾಗೆ ಆಗಮಿಸಿರುವ ಚೌಹಾಣ್ "ರಾಹುಲ್ ಸುಳ್ಳುಗಳ ರಾಜ, ಅವರಿಗೆ ರಫೇಲಿಯಾ ಖಾಯಿಲೆ ಇದೆ.ಹೀಗಾಗಿ ಅವರಿಗೆ ರಾಫೆಲ್ ಬಿಟ್ಟರೆ ಬೇರೆ ಯಾವ ವಿಷಯಗಳೂ ಕಾಣುತ್ತಿಲ್ಲ. ಮುಂದಿನ ಲೋಕಾಸಭೆ ಚುನಾವಣೆಯಲ್ಲಿ ಜನರೇ ಈ ಖಾಯಿಲೆಗೆ ಸೂಕ್ತ ಚಿಕಿತ್ಸೆ ನಿಡಲಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೇರಲಿದೆ" ಎಂದರು.
ಕಾಂಗ್ರೆಸ್ ಪಕ್ಷದ ಕುರಿತು ಟೀಕಿಸಿದ ಚೌಹಾಣ್, ಅಲಿ ಎಲ್ಲವೂ ಸರಿಯಿಲ್ಲ.ಅವರಲ್ಲೇ ಆಂತರಿಕ  ಭಿನ್ನಾಭಿಪ್ರಾಯವಿದೆ ಎಂದು ಆರೋಪಿಸಿದರು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ತಾನು ನೀಡಿದ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದೂ ಅವರು ಹೇಳಿದ್ದಾರೆ.
"ರೈತರ ಸಾಲ ಮನ್ನಾ ಮಾಡುವುದಾಗಿ ಕಮಲ್ ನಾಥ್ ಹೇಳಿದ್ದರು. ಆದರೆ ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ಯಾವೊಂದು ಕೃಷೀ ಸಾಲವೂ ಮನ್ನಾ ಆಗಿಲ್ಲ. ಬದಲಿಗೆ ಈ ಪ್ರಕ್ರಿಯೆಯನ್ನು ಇನ್ನಶ್ಷ್ಟು ಸಂಕೀರ್ಣಗೊಳಿಸುತ್ತಿದ್ದಾರೆ" ಅವರು ಹೇಳಿದ್ದಾರೆ.
ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯ ಪುತ್ರಿ ಪ್ರಿಯಾಂಕಾ ಗಾಂಧಿ ವರ ರಾಜಕೀಯ ಪ್ರವೇಶದ ಬಗ್ಗೆ ತಮ್ಮ ಅಭಿಪ್ರಾಯ ಬಹಿರಂಗಪಡಿಸಿರುವ ಚೌಹಾಣ್ ಆಕೆಯ ರಾಜಕೀಯ ಪ್ರವೇಶ ಯಾವ ಅದ್ಭುತವನ್ನೂ ಸೃಷ್ಟಿಸಲಾರದು ಎಂದರು.
"ನಾನು ಪ್ರಿಯಾಂಕಾ ರಾಜಕೀಯ ಪ್ರವೇಶವನ್ನು ಸ್ವಾಗತಿಸುತ್ತೇನೆ. ರಾಜಕೀಯ ಕ್ಷೇತ್ರಕ್ಕೆ ಬರಲು ಎಲ್ಲರಿಗೆ ಸ್ವಾತಂತ್ರವಿದೆ.ಆದರೆ ಜನರು ಕೆಲಸ ಮಾಡುವವರನ್ನು ಆಯ್ಕೆ ಮಾಡುತ್ತಾರೆ. ಯಾರೊಬ್ಬರ ಪ್ರವೇಶವು ಯಾವುದೇ ಪವಾಡವನ್ನು ಮಾಡಲು ಸಾಧ್ಯವಿಲ್ಲ "ಎಂದು ಚೌಹಾನ್  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com